SALAGA : ಬಿಡುಗಡೆಗೂ ಮುನ್ನ ಸಖತ್‌ ಸದ್ದು ಮಾಡುತ್ತಿದೆ ಸಲಗ

ಸ್ಯಾಂಡಲ್ ​ವುಡ್​ ಅಂಗಳದಲ್ಲಿ ಸಖತ್​ ಹೈಪ್​ ಕ್ರಿಯೇಟ್​ ಮಾಡಿರುವ ಸಿನಿಮಾ ಸಲಗ. ಬಿಡುಗಡೆಯ ಹೊಸ್ತಿಲಲ್ಲಿರುವ ಈ ಚಿತ್ರದ ಮೇಲೆ ಸಿನಿಪ್ರಿಯರಿಗೆ ಸಾಕಷ್ಟು ನಿರೀಕ್ಷೆಯಿದೆ. ಚಿತ್ರದ ತುಣುಕುಗಳನ್ನು ಕಂಡು ಚಿತ್ರ ತೆರೆ ಮೇಲೆ ಅಬ್ಬರಿಸೋದು ಪಕ್ಕಾ ಎಂಬ ಭವಿಷ್ಯವಾಣಿಯೂ ಎಲ್ಲೆಡೆ ಕೇಳಿ ಬರ್ತಿದೆ. ಟೀಸರ್ ಹಾಗೂ ಹಾಡುಗಳು ಸಾಮಾಜಿಕ ಜಾಲತಾಣದ ಅಂಗಳದಲ್ಲಿ ಹಲ್ ಚೆಲ್ ಎಬ್ಬುಸಿದ್ದು, ಚಿತ್ರರಸಿಕರನ್ನು ಫಿದಾ ಆಗುವಂತೆ ಮಾಡಿದೆ.

ಸೋಶಿಯಲ್ ಮೀಡಿಯಾ ಅಂಗಳದಿಂದ ಹಿಡಿದು ಥಿಯೇಟರ್ ಅಂಗಳದವರೆಗೂ ಸಲಗ ಸಿನಿಮಾ ನಿರೀಕ್ಷೆಯನ್ನು ಹುಟ್ಟು ಹಾಕುತ್ತಿದೆ. ದುನಿಯಾ ವಿಜಯ್ ಅಭಿಮಾನಿಗಳಂತೂ ಸಲಗ ಆರಾಧನೆ ಮಾಡೋಕೆ ಶುರುಮಾಡಿದ್ದಾರೆ. ಕೈ, ಎದೆ ಮೇಲೆ ಟ್ಯಾಟೂ ಹಾಕಿಸಿಕೊಂಡು ಅಭಿಮಾನ ಮೆರೆಯುತ್ತಿದ್ದಾರೆ. ಇತ್ತ ಚಿತ್ರಮಂದಿರದ ಅಂಗಳದಲ್ಲೂ ಬಿಡುಗಡೆಗೆ ಮುನ್ನವೇ ಹಬ್ಬದ ವಾತಾವರಣ ಶುರುವಾಗಿದ್ದು, ಕೆಲ ಚಿತ್ರಮಂದಿರಗಳಲ್ಲಿ ಕಟೌಟ್ ಗಳು ತಲೆ ಎತ್ತಿ ನಿಂತಿವೆ.

ಇದನ್ನೂ ಓದಿ: ಫ್ಯಾಷನ್‌ಗೆ ವಯಸ್ಸು ಮುಖ್ಯವಲ್ಲ ಅಂದ್ರು ಪ್ರಿಯಾಂಕ : ಪೋಟೋ ನೋಡಿ Beautiful ಅಂದ್ರು ಅಭಿಮಾನಿಗಳು

ದುನಿಯಾ ವಿಜಿ ಹಾಗೂ ಡಾಲಿ ಧನಂಜಯ ಜುಗಲ್ಬಂದಿ ತೆರೆ ಮೇಲೆ ಕಣ್ತುಂಬಿಕೊಳ್ಳಲು ಇಬ್ಬರ ಅಭಿಮಾನಿ ಬಳಗ ತುದಿಗಾಲಲ್ಲಿ ನಿಂತು ಕಾಯುತ್ತಿದೆ. ಚಿತ್ರಮಂದಿರಕ್ಕೆ ಬರೋಕೆ ಮುನ್ನವೇ ಈ ಮಟ್ಟದ ಕ್ರೇಜ್ ಕಂಡು ಚಿತ್ರತಂಡ ಸಖತ್ ಥ್ರಿಲ್ ಆಗಿದ್ದು, ಇದೇ ಖುಷಿಯಲ್ಲಿ ಟ್ರೇಲರ್ ಕೂಡ ಸದ್ಯದಲ್ಲೇ ಬಿಡುಗಡೆ ಮಾಡಲಿದೆ ಟೀಂ ಸಲಗ.

ಸಲಗಕ್ಕೆ ಟಗರು ಖ್ಯಾತಿಯ ಮಾಸ್ತಿ ಪವರ್ ಫುಲ್ ಸಂಭಾಷಣೆಯಿದ್ದು, ಚರಣ್ ರಾಜ್ ಹೈ ವೋಲ್ಟೇಜ್ ಮ್ಯೂಸಿಕ್ ಈಗಾಗಲೇ ಕಮಾಲ್ ಮಾಡಿದೆ. ಕೆ.ಪಿ. ಶ್ರೀಕಾಂತ್ ಅದ್ದೂರಿ ನಿರ್ಮಾಣದಲ್ಲಿ ಮೂಡಿ ಬಂದಿರುವ ಸಲಗ ಚಿತ್ರ ನಾಡಹಬ್ಬದಿಂದ ಚಿತ್ರಮಂದಿರಗಳಲ್ಲಿ ದರ್ಬಾರ್ ಆರಂಭಿಸಲಿದೆ.

ಇದನ್ನೂ ಓದಿ: ಧ್ರುವ ಸರ್ಜಾ ಹುಟ್ಟು ಹಬ್ಬದಂದೇ ಮಾರ್ಟಿನ್ ಸಿನಿಮಾದ ಪೋಸ್ಟರ್ ರಿಲೀಸ್

(Salga has been making noise before its release)

Comments are closed.