ಕೊರೋನಾ ಸಂಕಷ್ಟದ ನಡುವೆ ಸ್ಯಾಂಡಲ್ ವುಡ್ ತಣ್ಣಗೆ ಮಲಗಿದ್ರೇ ಹೊಂಬಾಳೆ ಫಿಲ್ಮ್ಸಂ ಮಾತ್ರ ಸಿನಿಮಾ ಮೇಲೆ ಸಿನೆಮಾ ಘೋಷಿಸೋದರಲ್ಲಿ ಬ್ಯುಸಿಯಾಗಿದೆ. ಮೊನ್ನೆ ಮೊನ್ನೆ ಯಷ್ಟೇ ರಿಚರ್ಡ್ ಆಂಟ್ಯನಿ ಹಾಗೂ ಕಾಂತಾರ ಸಿನಿಮಾ ಘೋಷಿಸಿದ್ದ ಹೊಂಬಾಳೆ ಸಿನಿಮಾ ಸೆ.22 ರಂದು ಹೊಸ ಸಿನಿಮಾ ಘೋಷಿಸಲಿದೆ.
ನಿರ್ಮಾಪಕ ವಿಜಯ್ ಕಿರಂಗದೂರು ತಮ್ಮ 12 ಚಿತ್ರವನ್ನು ಘೋಷಿಸಿದ್ದು, ಸ್ಯಾಂಡಲ್ ವುಡ್ ಕುತೂಹಲದಿಂದ ಹೊಂಬಾಳೆ ಸಿನಿಮಾದತ್ತ ಮುಖಮಾಡಿದೆ. ಈ ಕುರಿತು ಟ್ವೀಟ್ ಮಾಡಿರೋ ವಿಜಯ್ ಕಿರಂಗದೂರು ಸೆ.22 ರಂದು ಮಧ್ಯಾಹ್ನ 3.10 ಕ್ಕೆ ಸಿನಿಮಾದ ಟೈಟಲ್ ಹಾಗೂ ಫರ್ಸ್ಟ್ ಲುಕ್ ರಿಲೀಸ್ ಮಾಡೋದಾಗಿ ಹೇಳಿದ್ದಾರೆ.
ಪ್ರತಿ ಬಾರಿಯೂ ಸಿನಿಮಾದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲೇ ಅಪ್ಡೇಟ್ ಕೊಡೋದು ಹೊಂಬಾಳೆ ಸಿನಿಮಾದ ವೈಶಿಷ್ಟ್ಯತೆ. ಈ ಬಾರಿಯೂ ವಿಭಿನ್ನವಾಗಿ ಪೋಸ್ಟ್ ಹಾಕಿರುವ ಹೊಂಬಾಳೆ ಫಿಲ್ಸ್ಮಂ, ಬಾಳೆ ಎಲೆಯ ಪೋಸ್ಟರ್ ರಿಲೀಸ್ ಮಾಡಿದ್ದು, ಪ್ರತಿಯೊಬ್ಬರಲ್ಲೂ ಹಸಿವಿದೆ. ಪ್ರತಿ ಅಗುಳಿನಲ್ಲೂ ತಿನ್ನುವವರ ಹೆಸರಿದೆ. ಅನ್ನದಾತೋ ಸುಖಿಭವ ಎಂದು ಬರೆಯಲಾಗಿದೆ.
ಈಗಾಗಲೇ ಕೆಜಿಎಫ್, ಕೆಜಿಎಫ್-2 ,ರಾಜಕುಮಾರದಂತಹ ಬ್ಲಾಕ್ ಬಸ್ಟರ್ ಮೂವಿಯನ್ನು ನೀಡಿರುವ ಹೊಂಬಾಳೆ ಫಿಲ್ಸ್ಮಂ ತನ್ನ 12 ಪ್ರಾಜೆಕ್ಟ್ ಘೋಷಣೆ ಮಾಡಿದ್ದು ಹೀರೋ ಯಾರಾಗಿರಬಹುದು ಎಂಬ ಚರ್ಚೆ ಈಗಾಗಲೇ ಆರಂಭವಾಗಿದೆ.
ರಕ್ಷಿತ್ ಶೆಟ್ಟಿ, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಗಾಗಿ ಈಗಾಗಲೇ ಸಿನಿಮಾ ನಿರ್ಮಾಣ ಘೋಷಣೆ ಆಗಿರುವುದರಿಂದ ನೆಕ್ಸ್ಟ್ ಸಿನಿಮಾ ಗೆ ಹೀರೋ ಯಾರಾಗ್ತಾರೆ ಎಂಬ ಚರ್ಚೆ ಸ್ಯಾಂಡಲ್ ವುಡ್ ನಲ್ಲಿ ಕಾವೇರಿದೆ.
ಇದನ್ನೂ ಓದಿ : KGF NEW RECORD : PK ಸಿನಿಮಾದ ದಾಖಲೆ ಮುರಿದ ಕೆಜಿಎಫ್ -2
ಇದನ್ನೂ ಓದಿ : ಕೆಜಿಎಫ್ 2 ಬಿಡುಗಡೆ ಮುಹೂರ್ತ ಫಿಕ್ಸ್ : ಎಪ್ರಿಲ್‌ನಲ್ಲಿ ತೆರೆಗೆ ಬರುತ್ತೆ ಸಿನಿಮಾ
(Another project ready to go is the Hombale films )