Chiru Sarja : ಸೈಮಾ ಅವಾರ್ಡ್ಸ್ ಫಂಕ್ಷನ್ ನಲ್ಲಿ‌ ಚಿರು : ಸ್ನೇಹಕ್ಕೆ ಪನ್ನಗಾಭರಣ ಕೊಟ್ರು ವಿಶೇಷ ಬೆಲೆ

ಹೈದ್ರಾಬಾದ್ ನಲ್ಲಿ ನಡೆದ ಸೈಮಾ ಅವಾರ್ಡ್ ಫಂಕ್ಷನ್ ನಲ್ಲಿ ಬೆಸ್ಟ್ ಡೈರೈಕ್ಟರ್ ಗೌರವಕ್ಕೆ ಪಾತ್ರವಾಗಿದ್ದಾರೆ ಯುವ ಡೈರೆಕ್ಟರ್ ಪನ್ನಗಾಭರಣ. ಈ ಗೌರವವನ್ನು ಸ್ವೀಕರಿಸುವ ವೇಳೆಯಲ್ಲೂ ಚಿರುವನ್ನು ತಮ್ಮ ಜೊತೆಗೆ ಇರಿಸಿಕೊಂಡು ಸ್ನೇಹ ಮೆರೆದಿದ್ದಾರೆ ಪನ್ನಗಾಭರಣ.

ಅದ್ಹೇಗೆ ಅಂದ್ರಾ ಪನ್ನಗಾಭರಣ ಅವಾರ್ಡ್ ಫಂಕ್ಷನ್ ಗೆ ಧರಿಸಿದ ಕೋಟ್ ಕಾಲರ್ ನಲ್ಲಿ‌ಚಿರು ಭಾವಚಿತ್ರಗಳನ್ನು ಪ್ರಿಂಟ್ ಮಾಡಲಾಗಿತ್ತು.‌ವಿಶಿಷ್ಟವಾಗಿ ವಿನ್ಯಾಸ ಮಾಡಲಾದ ಈ ಕೋಟ್ ಧರಿಸಿದ ಪನ್ನಗಾಭರಣ ಚಿರು ನನ್ನ ಜೊತೆಗಿದ್ದಂತೆ ಭಾಸವಾಯಿತು ಎಂದಿದ್ದಾರೆ.

ಮಾತ್ರವಲ್ಲ ಅವಾರ್ಡ್ ಫಂಕ್ಷನ್ ಗೆ ಚಿರು ಜೊತೆಯಲ್ಲೇ ಇದ್ದಷ್ಟು ಖುಷಿಯಾಗಿದೆ ಎಂದಿದ್ದಾರೆ. ಇನ್ನು ಪನ್ನಗಾಭರಣ ಕೋಟ್ ನೋಡಿದ ನಟಿ ಮೇಘನಾ ರಾಜ್ ಕೂಡ ಮೆಚ್ಚಿ ಕೊಂಡಿದ್ದು, ಚಿರು ಈಗ ಮಚ್ಚಾ ನಾನು ನಿನ್ನ ಜೊತೆನೇ ಇದ್ದೇನೆ ಬಿಡು ಎಂದಿರುತ್ತಾರೆ ಎಂದು ಕಮೆಂಟ್ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಚಿರು ಪೋಟೋ ಇರುವ ಕೋಟ್ ಧರಿಸಿದ ಪನ್ನಗಾಭರಣ ಪೋಟೋಕ್ಕೆ ಸಖತ್ ಲೈಕ್ಸ್ ಬಂದಿದೆ. ಮಾತ್ರವಲ್ಲ ಜನರು ಇವರಿಬ್ಬರ ಸ್ನೇಹವನ್ನು ಶ್ಲಾಘಿಸಿದ್ದಾರೆ.

ಪ್ರೆಂಚ್ ಬಿರಿಯಾನಿ ಸಿನಿಮಾಗೆ 2020 ನೇ ಸಾಲಿನ ಉತ್ತಮ ಡೈರೈಕ್ಟರ್ ಪ್ರಶಸ್ತಿ ನೀಡಲಾಗಿದ್ದು ಈ ಗೌರವಕ್ಕೆ ಪನ್ನಗಾಭರಣ ಭಾಜನರಾಗಿದ್ದಾರೆ.

ಇದನ್ನೂ ಓದಿ :‌ ನಾನು ಅವಲಂಬಿಸುವ ಏಕೈಕ ಭುಜ ನಿಮ್ಮದು…! ಮೇಘನಾರಾಜ್ ಭಾವುಕ ಸಂದೇಶ ಯಾರಿಗೆ ಗೊತ್ತಾ…?!

ಇದನ್ನೂ ಓದಿ : ಮತ್ತೊಂದು ಪ್ರಾಜೆಕ್ಟ್ ಗೆ ಸಿದ್ಧವಾಯ್ತು ಹೊಂಬಾಳೆ ಫಿಲ್ಸ್ಮಂ: ಅನ್ನದಾತನ ಕತೆಯೊಂದಿಗೆ ಬರಲಿದ್ಯಾ ಸಿನಿಮಾ ?

( Chiranjeevi Sarja appearing at SIMA Awards Function )

Comments are closed.