RCB vs KKR IPL 2021 : ಕೊಲ್ಕತ್ತಾ ಎದುರಲ್ಲಿ ಹೀನಾಯ ಸೋಲು ಕಂಡ ಬೆಂಗಳೂರು

ದುಬೈ : ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಮೊದಲ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದೆ. ಮೊದಲು ಬ್ಯಾಟಿಂಗ್‌ ಮಾಡಿದ ಬೆಂಗಳೂರು ತಂಡ ಬ್ಯಾಟ್ಸಮನ್‌ಗಳು ಕೈಕೊಟ್ರು. ಹೀಗಾಗಿ 19 ಓವರ್‌ ಗಳಲ್ಲಿ ಕೇವಲ 92 ರನ್‌ ಗಳಿಗೆ ಆಲೌಟ್‌ ಆಗಿತ್ತು. ಕೋಲ್ಕತ್ತಾ ತಂಡ ಕೇವಲ 10 ಓವರ್‌ಗಳಲ್ಲಿಯೇ ಗೆಲುವಿನ ನಗೆ ಬೀರಿದೆ.

ಮೊದಲು ಬ್ಯಾಟಿಂಗ್‌ ನಡೆಸಿದ ಆರ್‌ಸಿಬಿ ಪರ ಆರಂಭಿಕರಾಗಿ ಕಣಕ್ಕೆ ಇಳಿದಿದ್ದ ನಾಯಕ ವಿರಾಟ್‌ ಕೊಯ್ಲಿ ನಿರಾಸೆ ಅನುಭವಿಸಿದ್ರು. ಆದರೆ ದೇವದತ್ತ ಪಡಿಕ್ಕಲ್‌, ಕೆ.ಎಸ್.ಭರತ್‌, ಗ್ಲೆನ್‌ ಮ್ಯಾಕ್ಸೆವೆಲ್‌ ಎರಡಂಕಿ ರನ್‌ ದಾಟಿದ್ರು ಕೂಡ ಬೃಹತ್‌ ಮೊತ್ತ ಏರಿಸುವಲ್ಲಿ ವಿಫಲರಾಗಿದ್ದಾರೆ. ಅದ್ರಲ್ಲೂ ಸ್ಪೋಟಕ ಆಟಗಾರ ಎಬಿಡಿ, ಶ್ರೀಲಂಕಾದ ವನಿಂದು ಹಸರಂಗ ಸೊನ್ನೆ ಸುತ್ತಿದ್ರು. ಹೀಗಾಗಿಯೇ ತಂಡ ಕೇವಲ 92 ರನ್‌ಗಳಿಗೆ ಸರ್ಪ ಪತನ ಕಂಡಿತ್ತು.

ನಂತರ ಬ್ಯಾಟಿಂಗ್‌ಗೆ ಇಳಿದ ಕೋಲ್ಕತ್ತಾ ತಂಡದ ಪರವಾಗಿ ಆರಂಭಿಕರಾದ ಶುಭಮನ್‌ ಗಿಲ್‌ ಹಾಗೂ ವೆಂಕಟೇಶ್‌ ಐಯ್ಯರ್‌ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದಾರೆ. ಶುಭಮನ್‌ ಗಿಲ್‌ 34 ಎಸೆತಗಳಲ್ಲಿ 48 ರನ್‌ ಬಾರಿಸಿದ್ರೆ, ವೆಂಕಟೇಶ್‌ ಅಯ್ಯರ್‌ 27 ಎಸೆತಗಳಲ್ಲಿ 41 ರನ್‌ ಬಾರಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭವೊದಗಿಸಿದ್ರು. ಆರ್‌ಸಿಬಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಕೋಲ್ಕತ್ತಾ ಆಟಗಾರರು ಕೇವಲ 10 ಓವರ್‌ಗಳಲ್ಲಿಯೇ ಗೆಲುವಿನ ನಗೆ ಬೀರಿದ್ದಾರೆ.

ಈ ಬಾರಿ ಐಪಿಎಲ್‌ ಟ್ರೋಫಿ ಗೆಲುವಿನ ಕನಸು ಕಂಡಿದ್ದ ಆರ್‌ಸಿಬಿ ತಂಡಕ್ಕೆ ಮೊದಲ ಪಂದ್ಯದಲ್ಲಿಯೇ ಆಘಾತ ಎದುರಾಗಿದೆ. ಹೀಗಾಗಿ ಮುಂದಿನ ಪಂದ್ಯಗಳನ್ನು ಗೆದ್ದರೆ ಮಾತ್ರವೇ ಪ್ಲೇ ಆಫ್‌ ಹಂತಕ್ಕೆ ಅವಕಾಶ ಪಡೆಯಲು ಸಾಧ್ಯ.

https://twitter.com/KKRiders/status/1440007742807154698

ಸಂಕ್ಷೀಪ್ತ ಸ್ಕೋರ್‌ :
ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) : ದೇವದತ್ತ ಪಡಿಕ್ಕಲ್‌ 22, ಕೆ.ಎಸ್.ಭರತ್‌ 16, ಹರ್ಷಲ್‌ ಪಟೇಲ್‌ 12, ಗ್ಲೇನ್‌ ಮ್ಯಾಕ್ಸ್‌ವೆಲ್‌ 10, ಆಂಡ್ರೆ ರೆಸೆಲ್‌ 9/3, ವರುಣ್‌ ಚಕ್ರವರ್ತಿ 13/2, ಫರ್ಗ್ಯುಸನ್‌ 24/2, ಪ್ರಸಿದ್ದ ಕೃಷ್ಣ 24/1

ಕೋಲ್ಕತ್ತಾ ನೈಟ್‌ ರೈಡರ್ಸ್‌ (KKR) : ಶುಭಮನ್‌ ಗಿಲ್‌ 48, ವೆಂಕಟೇಶ್‌ ಅಯ್ಯರ್‌ 41, ಯಜುವೇಂದ್ರ ಚಹಲ್‌ 23/1

(IPL 2021: Kolkata Knight Riders beat Royal Challengers Bangalore by 9 wickets )

Comments are closed.