ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ 33ನೇ ವಸಂತಕ್ಕೆ ಕಾಲಿಟ್ಟಿರುವ ಕುಷಿಯಲ್ಲಿದ್ದಾರೆ. ಹೌದು ನಾವು ಧ್ರುವ ಸರ್ಜಾ ಅವರ ಬಗ್ಗೆನೇ ಹೆಳುತ್ತಿರುವುದು. ಇಂದು ದ್ರುವ ಸರ್ಜಾ ಹುಟ್ಟು ಹಬ್ಬ. ಆಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹುಟ್ಟು ಹಬ್ಬದ ದಿನವೇ ಅಭಿಮಾನಿಗಳಿಗೆ ಉಡುಗೊರೆ ಒಂದನ್ನು ನೀಡಿದ್ದಾರೆ.
ಅಲ್ಲದೆ ಈ ಸಲ ಹುಟ್ಟುಹಬ್ಬದ ದಿನ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದು, ರಾಜ್ಯದಿಂದ ಹೊರಗಿರುವುದಾಗಿಯೂ ಹೇಳಿದ್ದರು. ಹುಟ್ಟುಹಬ್ಬದ ಆಚರಣೆಗೆ ಬ್ರೇಕ್ ಬಿದ್ದಿತ್ತಾದರೂ, ಅಭಿಮಾನಿಗಳಿಗೆ ಮಾತ್ರ ನಿನ್ನೆ ಮಧ್ಯರಾತ್ರಿಯೇ ಧ್ರುವ ಸರ್ಜಾ ಕಡೆಯಿಂದ ಭರ್ಜರಿ ಉಡುಗೊರೆ ಸಿಕ್ಕಿದೆ. ಹೌದು, ಮಾರ್ಟಿನ್ ಚಿತ್ರತಂಡ ಹೇಳಿದಂತೆ ಮಧ್ಯರಾತ್ರಿ ಸಿನಿಮಾದ ವಿಶೇಷ ಪೋಸ್ಟರ್ ರಿಲೀಸ್ ಮಾಡಿದೆ.
ಇದನ್ನೂ ಓದಿ: Dhruva Sarja Birthday : ಹಳೆಯ ಪೋಟೋ ಹಂಚಿಕೊಂಡು ಪತಿಗೆ ವಿಶ್ ಮಾಡಿದ ಧ್ರುವ ಸರ್ಜಾ ಪತ್ನಿ ಪ್ರೇರಣಾ
ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಸಿನಿಮಾ ಮಾರ್ಟಿನ್ ಶೂಟಿಂಗ್ ಈಗಾಗಲೇ ಆರಂಭವಾಗಿದೆ. ಇದರ ಚಿತ್ರೀಕರಣ ವೈಜಾಗ್ ನಡೆಯುತ್ತಿದ್ದು, ಧ್ರುವ ಸರ್ಜಾ ಈಗ ಅಲ್ಲೇ ಇದ್ದಾರೆ. ಮಾರ್ಟಿನ್ ಚಿತ್ರತಂಡ ಧ್ರುವ ಸರ್ಜಾ ಅವರ ಹುಟ್ಟುಹಬ್ಬಕ್ಕೆಂದು ವಿಶೇಷ ಪೋಸ್ಟರ್ ರಿಲೀಸ್ ಮಾಡಿದೆ. ಅದೂ ಸಹ ಮಧ್ಯರಾತ್ರಿ 12.03ಕ್ಕೆ ಈ ಬರ್ತ್ ಡೇ ಪೋಸ್ಟರ್ ಬಿಡುಗಡೆಯಾಗಿದೆ.
ಇದನ್ನೂ ಓದಿ: Rachita Ram : ಡಿಂಪಲ್ ಕ್ವೀನ್ ಜನ್ಮದಿನದಂದು ಶಬರಿ ಸೆರ್ಚಿಂಗ್ ಫಾರ್ ರಾವಣ’ ಪೋಸ್ಟರ್ ರಿವೀಲ್
(Martin Cinema Poster Release on Dhruva Sarja Birthday)