Strange foods : ಪ್ರಪಂಚದಲ್ಲಿವೆ ವಿಚಿತ್ರ ಆಹಾರ : ಇಂತಹ ಆಹಾರವನ್ನೂ ತಿನ್ನುತ್ತಾರಾ ?

ಪ್ರಪಂಚದಲ್ಲಿ ಭಾರತದಲ್ಲಿ ಮಾತ್ರ ವಿಭಿನ್ನ ಹಾಗೂ ಬಳಷ್ಟು ಮಸಾಲೆ ಪದಾರ್ಥವನ್ನು ಉಪಯೋಗಿಸಿ ಆಹಾರಗಳನ್ನು ತಯಾರಿಸುತ್ತಾರೆ. ಉಳಿದ ದೇಶಗಳಲ್ಲಿ ಮಸಾಲೆಯನ್ನು ಉಪಯೋಗಿಸುವುದು ತುಂಬ ಕಡಿಮೆ. ಅದಕ್ಕೇ ತಾನೇ ವಿಶ್ವಕ್ಕೆ ಮಸಾಲೇ ಪದಾರ್ಥವನ್ನು ಪರಿಚಯಿಸಿದ ಕೀರ್ತಿ ನಮ್ಮ ಭಾರತಕ್ಕೆ ಸಲ್ಲುವುದು. ಆದರೆ ನಾವು ಇವತ್ತು ನಿಮಗೆ ಪ್ರಪಂಚದ ವಿಚಿತ್ರ ಆಹಾರದ ಬಗ್ಗೆ ಹೇಳ್ತೀವಿ ಕೇಳಿ.

ವಾಸ್ಪ್ ಕ್ರಾಕರ್ಸ್ (ಹುಳುಗಳ ಬಿಸ್ಕ್ಯೂಟ್ ) – ಜಪಾನ್ : ಬಿಸ್ಕತ್‌, ಕುಕ್ಕಿಸ್ ಸ್ವೀಸ್ ಆಗಿರುತ್ತೆ. ಕೆಲವೊಂದು ಸಾಲ್ಟ್ ಆಗಿ ಇರಬಹುದು ಇದನ್ನ ಹಿರಿಯರು, ಯುವಕರು, ವಯಸ್ಕರು ಮಕ್ಕಳು ಸೇರಿದಂತೆ ಎಲ್ಲರೂ ಇಷ್ಟ ಪಡ್ತಾರೆ. ಆದ್ರೆ ಜಪಾನ್ ನಲ್ಲಿ ತಯಾರಿಸಲಾಗುವ ವಾಸ್ಪ್ ಕ್ರಾಕರ್ಸ್ ಆ ದೇಶದ ಸಿಕ್ಕಾಪಟ್ಟೆ ಫೀಮಸ್ ಸ್ನಾಕ್. ಅದು ಪ್ರಪಂಚದ ಅತಿ ವಿಚಿತ್ರ ಆಹಾರದಲ್ಲಿಯೂ ಒಂದು. ಯಪ್ಪಾ. ನಾವು ಊಟದಲ್ಲಿ ಸಣ್ಣ ಕೂದಲು, ಸಣ್ಣ ಹುಳ ಸಿಕ್ರೇನೆ ಅರ್ಧಕ್ಕೆ ಎದ್ಬಿಡ್ತೀವೆ. ಆದ್ರೆ ಇವರು ಹುಳಗಳದ್ದೇ ಬಿಸ್ಕತ್ ತಿನ್ನೋದು ನೋಡಿದ್ರೆ ಯಾರಿಗೆ ತಾನೆ ಅಸಹ್ಯ ಆಗಲ್ಲ ಹೇಳಿ.

ಇದನ್ನೂ ಓದಿ: Scary tourist spots : ಭಾರತದ ಮೊಸ್ಟ್‌ ವಾಂಟೆಡ್‌ ಭಯಾನಕ ತಾಣಗಳು ಯಾವುದೆಂದು ಗೊತ್ತಾ

ವಿಚೇಟಿ ಗ್ರಬ್ : ಆಸ್ಟ್ರೇಲಿಯಾ : ಇದನ್ನ ನೋಡೋದಕ್ಕೆ ಇಷ್ಟು ಅಸಹ್ಯ ಅನ್ನಿಸುತ್ತೆ. ತಿನ್ನೋದಕ್ಕೆ ಹೇಗೆ ಮನಸ್ಸು ಬರುತ್ತೆ ಅಂತ ಅನ್ಸಿದ್ರೂ ಅಲ್ಲಿನ ಜನ ಇದನ್ನ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಈ ಹುಳುವನ್ನ ಡೆಸಾರ್ಟ್ ರೂಪದಲ್ಲಿ ತಿನ್ನುತ್ತಾರೆ. ಇನ್ನೂ ಅಸಹ್ಯ ಏನ್ ಗೊತ್ತಾ. ಹಸಿಯಾಗಿಯೂ ಈ ಹುಳುವನ್ನ ಅಲ್ಲಿನ ಜನ ಹಾಗೇ ತಿಂತಾರಂತೆ.

ಬಿಯೋನ್ ಡೇಗಿ – ಸೌತ್ ಕೊರಿಯಾ : ನಮ್ಮಲ್ಲಿ ರೇಷ್ಮೆ ಹುಳುಗಳನ್ನ ರೇಷ್ಮೆ ಸೀರೆ ತಯಾರಿಸಲು ಬಳಸುತ್ತೇವೆ ಅಲ್ವಾ. ಆದ್ರೆ ಸೌತ್ ಕೊರಿಯಾದಲ್ಲಿ ಆ ಹುಳುಗಳನ್ನ ಡಿಶ್ ಮಾಡಿ ಸರ್ವ್ ಮಾಡಲಾಗುತ್ತೆ. ಅಲ್ಲದೇ ಇದು ತುಂಬಾನೆ ಫೇಮಸ್ ಅಂತೆ. ಸರಳವಾಗಿ ಬೇಯಿಸಿದ ಅಥವಾ ಆವಿಯಲ್ಲಿ ಮತ್ತು ಲಘುವಾಗಿ ಮಸಾಲೆ ಹಾಕಿದ ಇದು ಕೊರಿಯಾದಾದ್ಯಂತ ಜನಪ್ರಿಯ ತಿಂಡಿ ಮತ್ತು ಸಾಮಾನ್ಯವಾಗಿ ಬೀದಿ ಬದಿ ವ್ಯಾಪಾರಿಗಳಿಂದ ಮಾರಾಟವಾಗುತ್ತದೆ.

ಸ್ನೇಲ್ ಡಿಶ್ ( ಬಸವಣ್ಣನ ಹುಳದ ಖಾದ್ಯ ) – ಫ್ರಾನ್ಸ್ : ಸಾಮಾನ್ಯವಾಗಿ ಬಸವಣ್ಣನ ಹುಳುಗಳು ಅಂಟಂಟಾಗಿರೋದಕ್ಕೆ ಯಾರಿಗೂ ಅವನ್ನಮುಟ್ಟಲೂ ಸಹ ಇಷ್ಟ ಆಗೋದಿಲ್ಲ. ಆದ್ರೆ ಫ್ರನ್ಸ್ ನಲ್ಲಿ ಇದಕ್ಕೆ ಸ್ಪೆಷಿಯಲ್ ರೆಸಿಪಿನೆ ಇದೆ. ವೈಟ್ ವೈನ್ , ಬೆಳ್ಳುಳ್ಳಿ, ಬೆಣ್ಣೆ ಮತ್ತು ಪಾರ್ಸ್ಲಿ ಸಾಸ್‌ನಲ್ಲಿ ಬೇಯಿಸಿದ ಬಸವನವು ಅವುಗಳ ಚಿಪ್ಪುಗಳಲ್ಲಿ ಬಡಿಸಲಾಗುತ್ತದೆ.

ಇದನ್ನೂ ಓದಿ : ಹೀಗೂ ಉಂಟೆ … ! ಮದುವೆಯ ದಿನ ಮಗಳ, ಎದೆ ತಲೆ ಮೇಲೆ ಉಗಿದು ಆಶೀರ್ವಾದ ಮಾಡ್ಬೇಕಂತೆ ತಂದೆ !

ಮೊಪಾನೆ ವಾರ್ಮ್ – ಸೌತ್ ಆಫ್ರಿಕಾ : ಹುಳುಗಳ ಮಾಂಸದಿಂದ ತುಂಬಿದ ಸಾಂಪ್ರದಾಯಿಕವಾಗಿ ಒಣಗಿದ ಅಥವಾ ಹೊಗೆಯಾಡಿಸಿದರೂ, ಅವುಗಳನ್ನು ಸಾಮಾನ್ಯವಾಗಿ ಪುನಃ ಹೈಡ್ರೀಕರಿಸಲಾಗುತ್ತದೆ ಮತ್ತು ಟೊಮೆಟೊ ಅಥವಾ ಮೆಣಸಿನಕಾಯಿ ಸಾಸ್‌ನೊಂದಿಗೆ ರುಚಿಗೆ ತಕ್ಕಂತೆ ಬೇಯಿಸಲಾಗುತ್ತದೆ.

(Strange food in the world: Eat such food?)

Comments are closed.