Dhruva Sarja Birthday : ಹಳೆಯ ಪೋಟೋ ಹಂಚಿಕೊಂಡು ಪತಿಗೆ ವಿಶ್‌ ಮಾಡಿದ ಧ್ರುವ ಸರ್ಜಾ ಪತ್ನಿ ಪ್ರೇರಣಾ

ಸ್ಯಾಂಡಲ್‌ವುಡ್‌ ಪ್ರಿನ್ಸ್‌ ಧ್ರುವ ಸರ್ಜಾಗಿಂದು ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳು ಧ್ರುವ ಸರ್ಜಾಗೆ ಶುಭಾಶಯ ಕೋರುತ್ತಿದ್ದಾರೆ. ಆದರೆ ಧ್ರುವ ಪತ್ನಿ ಪ್ರೇರಣಾ ಹತ್ತು ವರ್ಷದ ಹಳೆಯ ಪೋಟೋವನ್ನು ಹಂಚಿಕೊಂಡು ವಿಶ್‌ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತೀರಾ ಅಪರೂಪವೆನಿಸಿರುವ ಪ್ರೇರಣಾ ವಿಶಿಷ್ಟ ವಿಶ್‌ ನಿಂದಾಗಿ ಅಭಿಮಾನಿಗಳು ಖುಷಿಯಾಗಿದ್ದಾರೆ.

ಸ್ಯಾಂಡಲ್‌ವುಡ್‌ ಕ್ಯೂಟ್‌ ದಂಪತಿಗಳಲ್ಲಿ ಧ್ರುವ ಸರ್ಜಾ ಹಾಗೂ ಪ್ರೇರಣಾ ಶಂಕರ್‌ ಕೂಡ ಒಬ್ಬರು. ಸಾಮಾಜಿಕ ಜಾಲತಾಣದಲ್ಲಿ ತೀರಾ ಅಪರೂಪ ಎನಿಸಿಕೊಂಡಿರುವ ಪ್ರೇರಣಾ ಅಲ್ಲೊಂದು ಇಲ್ಲೊಂದು ಪೋಸ್ಟ್‌ ಮಾಡಿ ಸುದ್ದಿಯಾಗ್ತಾರೆ. ಇದೀಗ ತನ್ನ ಪ್ರೀತಿಯ ಪತಿಗೆ ಹಳೆಯ ನೆನಪಿನ ಮೂಲಕ ಶುಭಾಶಯವೊಂದನ್ನು ಕೋರಿದ್ದಾರೆ. ಪ್ರೇರಣಾ ಮಾಡಿರುವ ಪೋಸ್ಟ್‌ ಇದೀಗ ವೈರಲ್‌ ಆಗಿದೆ.

ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ಪ್ರೇರಣಾ ದಂಪತಿ ಎಲ್ಲರಿಗೂ ಮಾದರಿಯಾಗುವಂತೆ ಬಾಳುತ್ತಿದೆ. ಪ್ರೇರಣಾ ಧ್ರುವ ಸರ್ಜಾ ಜೊತೆಗೆ ಇರುವ ಸುಮಾರು ಹತ್ತು ವರ್ಷಗಳಷ್ಟು ಹಳೆಯ ಪೋಟೋವೊಂದನ್ನು ಪೋಸ್ಟ್‌ ಮಾಡಿ ಧ್ರುವ ಸರಜಾಗೆ ಸಖತ್‌ ಕ್ಯೂಟ್‌ ಆಗಿಯೇ ವಿಶ್‌ ಮಾಡಿದ್ದಾರೆ. ಇದು ನಾವು.. ಹತ್ತು ವರ್ಷಗಳ ಹಿಂದೆ.. ನಿನ್ನ ಹೆಂಡತಿ ನಿನ್ನನ್ನು ಎಂದಿನಂತೆಯೇ ಪ್ರೀತಿಸುತ್ತಾಳೆ ಅನ್ನುವ ಪ್ರೀತಿಯ ಸಾಲುಗಳೊಂದಿಗೆ ಧ್ರುವ ಸರ್ಜಾಗೆ ಹ್ಯಾಪಿ ಬರ್ತಡೇ ಹೇಳಿದ್ದಾರೆ ಪ್ರೇರಣಾ.

ಇದನ್ನೂ ಓದಿ : ಅಕ್ಷಯ್​ ಕುಮಾರ್​ ಪತ್ನಿ ಟ್ವಿಂಕಲ್​ ಖನ್ನಾ ಪೋಸ್ಟ್ ಸಿಕ್ಕಾಪಟ್ಟೆ ವೈರಲ್

ಅಣ್ಣಾ ಚಿರಂಜೀವಿ ಸರ್ಜಾ ಅಗಲಿಕೆಯ ನೋವಿನಿಂದ ಇನ್ನೂ ಹೊರ ಬಾರದ ಧ್ರುವ ಸರ್ಜಾ ಈ ನಡುವಲ್ಲೇ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ಬಾರಿ ಕೊರೊನಾ ಹಾಗೂ ಅಣ್ಣನ ಅಗಲಿಕೆಯಿಂದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿರದ ಧ್ರುವ ಸರ್ಜಾ ಈ ಬಾರಿಯೂ ತನ್ನ ಬರ್ತಡೇ ಅನ್ನು ಅದ್ದೂರಿಯಾಗಿ ಆಚರಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದರು.

ಇದನ್ನೂ ಓದಿ : ಬಿಡುವಿಲ್ಲದ ಶೂಟಿಂಗ್ ಮಧ್ಯೆಯೂ ಕರ್ತವ್ಯ ಮರೆಯದ ಧ್ರುವ್ರ ಸರ್ಜಾ….! ಮೈದುನ ನೋಡಿ ಕಣ್ಣಿರಿಟ್ಟ ಮೇಘನಾ ಸರ್ಜಾ…!

( Prerana Shankar Wished Her Husband Dhruva Sarja On his Happy Birthday by Sharing 10 years old photos )

Comments are closed.