ಗುರುವಾರ, ಜೂನ್ 19, 2025
HomeCinemaMeghana Raj's son : ಮೇಘನಾ ಬದುಕಿನ ಖುಷಿಗೆ ವರ್ಷದ ಹರ್ಷ: we love you...

Meghana Raj’s son : ಮೇಘನಾ ಬದುಕಿನ ಖುಷಿಗೆ ವರ್ಷದ ಹರ್ಷ: we love you ಎಂದ ಕುಟ್ಟಿಮಾ

- Advertisement -

ಬದುಕಿನ ಎಲ್ಲ ಸಂಘರ್ಷಗಳು ಒಂದೆಡೆಯಾದರೇ ತಾಯಿಯೊಬ್ಬಳ ಭಾವನಾತ್ಮಕ ತೊಳಲಾಟ ಇನ್ನೊಂದೆಡೆ. 10 ವರ್ಷಗಳ ಪ್ರೀತಿ ಕಳೆದುಕೊಂಡ ಮೇಘನಾ ತನ್ನ ಬದುಕಿನ ಖುಷಿಯನ್ನು ಮಗನಲ್ಲೇ ಕಂಡುಕೊಂಡು ಬದುಕಿದ ತಾಯಿ ಒಡಲ ಮಮತೆಗೆ ಸಾಕ್ಷಿ.

ಒಂದು ದಶಕದ ಪ್ರೀತಿಯನ್ನು ದಾಂಪತ್ಯವಾಗಿ ಬದಲಾಯಿಸಿಕೊಂಡ ಸಂಭ್ರಮ ಮಾಸುವ ಮುನ್ನವೇ ಮೇಘನಾ ಕಣ್ಣಿನ ಹೊಳಪನ್ನು, ಬೆಳಕನ್ನು ವಿಧಿ ಕಿತ್ತುಕೊಂಡಿತ್ತು. ಆದರೆ ಆ ನೋವಿನ ನಡುವಲ್ಲೂ ಹೊಟ್ಟೆಯಲ್ಲಿ ಮಿಸುಕಾಡಿದ ಜೀವವೊಂದು ಮೇಘನಾರ ಕಣ್ಣೀರ ಕೋಡಿಗೆ ಕಡಿವಾಣ ಹಾಕಿದ್ದು ಸುಳ್ಳಲ್ಲ.

First Birthday Of Meghana Raj And Chiranjeevi Sarja Son Raayan Raj Saraja 1st Birthday . You know what a birthday celebration looks like

ಚಿರು ಇನ್ನಿಲ್ಲವಾದಾಗ ಹೊಟ್ಟೆಯ ಮೇಲೊಂದು ಕೈಇಟ್ಟುಕೊಂಡೇ ರೋಧಿಸಿದ ಮೇಘನಾ ಮತ್ತೆಂದೂ ಕಣ್ಣೀರಾಗದಂತೆ ಬದುಕುವ ತೀರ್ಮಾನಕ್ಕೆ ಬಂದಂತಿದ್ದರು. ಗಂಡನನ್ನು ಕಳೆದುಕೊಂಡು ನಾಲ್ಕು ತಿಂಗಳ ಬಳಿಕ ಜ್ಯೂನಿಯರ್ ಚಿರು ಎಂದೇ ಭುವಿಗೆ ಬಂದ ಮಗನ ನೋಡಿ ಎಲ್ಲ ನೋವನ್ನು ಮರೆತ ಮೇಘನಾ ಇದೀಗ ಮಗನಿಗೆ ವರುಷ ತುಂಬಿದ ಹರುಷದಲ್ಲಿದ್ದಾರೆ.

Meghanaraj Comeback New Movie Announce Chiru Sarja Birthday 5

ಈ ಒಂದು ವರ್ಷಗಳಲ್ಲಿ ಎಲ್ಲೂ ಚಿರು ಇಲ್ಲ ಎಂಬ ಭಾವ ಮೂಡದಂತೆ ಮಗನಿಗೆ ತಂದೆಯೊಂದಿಗೆ ಬಾಂಧವ್ಯ ಬೆಸೆಯುವ ಕೊಂಡಿಯಾಗಿ‌ ನಿಂತ ಮೇಘನಾ ಚಿರು ಪೋಟೋ, ಹಾಡು, ಡ್ಯಾನ್ಸ್, ಪೋಸ್ಟರ್ ಹೀಗೆ ಎಲ್ಲದನ್ನು ಮಗನೊಂದಿಗೆ ಜೋಡಿಸಿ ತಂದೆಯ ಭಾವವನ್ನು ಮಗನೊಂದಿಗೆ ಜೋಡಿಸಿದ್ದಾರೆ. ಪ್ರತಿ ತಿಂಗಳು ರಾಯನ್ ರಾಜ್ ಸರ್ಜಾ ಹುಟ್ಟುಹಬ್ಬ ವನ್ನು ವಿಭಿನ್ನ ಥೀಮ್ ನೊಂದಿಗೆ ಆಚರಿಸಿದ ಮೇಘನಾ, ಅದ್ದೂರಿ ನಾಮಕರಣದಲ್ಲಿ ಮಗನಿಗೆ ಸುಂದರ ರಾಜ್ ಹಾಗೂ ಸರ್ಜಾ ಕುಟುಂಬವನ್ನು ಬೆಸೆಯುವಂತಹ ಹೆಸರಿನೊಂದಿಗೆ ಹೊರಜಗತ್ತಿಗೆ ಪರಿಚಯಿಸಿದ್ದಾರೆ.

Meghanaraj Comeback New Movie Announce Chiru Sarja Birthday 4

ಈಗ ಪುಟ್ಟ ಚಿರುಗೆ ಒಂದನೇ ವರ್ಷದ ಸಂಭ್ರಮ. ಕೊರೋನಾ ನಡುವೆಯೂ ಖಾಸಗಿ ಸಮಾರಂಭದಲ್ಲಿ ಚಿರು ನೆನಪಿನ ಜೊತೆ ರಾಯನ್ ಹುಟ್ಟುಹಬ್ಬದ ಸಂಭ್ರಮಾಚರಣೆ ನಡೆದಿದ್ದು, ಹುಟ್ಟುಹಬ್ಬಕ್ಕೆ ವಿಶ್ ಮಾಡುವಾಗಲೂ ಮೇಘನಾ ಕೇವಲ I love you ಮಗನೇ ಎನ್ನದೇ we love you ಎನ್ನುವ ಮೂಲಕ ಚಿರು ಜೊತೆಗಿದ್ದಾರೆ ಎಂಬ ಅಂಶವನ್ನು ಮತ್ತೆ ಮತ್ತೆ ಸಾಬೀತುಪಡಿಸಿದ್ದಾರೆ.

ಸ್ಯಾಂಡಲ್ ವುಡ್ ಕ್ಯೂಟ್ ಕಪಲ್ಸ್ ಎನ್ನಿಸಿದ ಮೇಘನಾ-ಚಿರು ಬದುಕಿನ ಖುಷಿಯಾಗಿರುವ ರಾಯನ್ ಗೆ ನಮ್ಮ ಕಡೆಯಿಂದಲೂ ಹ್ಯಾಪಿ ಬರ್ತಡೇ ಎಂಬ ಹಾರೈಕೆ.

ಇದನ್ನೂ ಓದಿ :‌ ಮೇಘನಾರಾಜ್ ಬದುಕಿನ ಮಿರಾಕಲ್ ಕ್ಷಣ…! ಪೋಟೋ ಜೊತೆ ಕುಟ್ಟಿಮಾ ಬರೆದ್ರು ಹೃದಯಸ್ಪರ್ಶಿ ಸಾಲು…!!

ಇದನ್ನೂ ಓದಿ : ನಾನು ಅವಲಂಬಿಸುವ ಏಕೈಕ ಭುಜ ನಿಮ್ಮದು…! ಮೇಘನಾರಾಜ್ ಭಾವುಕ ಸಂದೇಶ ಯಾರಿಗೆ ಗೊತ್ತಾ…?!

( Birthday of Rayaan Raj Sarja, son of Sandalwood Actress Meghna raj Sarja and Chiranjeevi Sarja )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular