ಪಟಾಕಿ ಸಿಡಿಸೋದಿಕ್ಕೆ ಅಮೀರ್ ಖಾನ್ ವಿರೋಧ : ಕೆರಳಿದ ಸಂಸದ ಅನಂತ ಕುಮಾರ್ ಹೆಗಡೆ

ಬೆಂಗಳೂರು : ಪ್ರತಿ ವರ್ಷದಂತೆ ಈ ವರ್ಷವೂ ದೀಪಾವಳಿ ಸಮೀಪಿಸುತ್ತಿರುವಂತೆ ಪಟಾಕಿ ಸಿಡಿಸದಂತೆ ಸೆಲೆಬ್ರಿಟಿಗಳು ಮನವಿ ಮಾಡಲಾರಂಭಿಸಿದ್ದು, ರಸ್ತೆಯಲ್ಲಿ ಪಟಾಕಿ ಬೇಡವೆಂಬ ಅಮೀರ್ ಖಾನ್ ಮನವಿಗೆ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಕೆರಳಿದ್ದಾರೆ.

ಜಾಹೀರಾತೊಂದರಲ್ಲಿ ನಟ ಅಮೀರ್ ಖಾನ್, ರಸ್ತೆಯಲ್ಲಿ ಪಟಾಕಿ ಸಿಡಿಸಬೇಡಿ. ಇದರಿಂದ ಪರಿಸರ ಹಾಗೂ ಪ್ರಾಣಿ,ಪಕ್ಷಿಗಳಿಗೆ ಹಾನಿಯಾಗಲಿದೆ ಎಂದು ಮನವಿ ಮಾಡಿದ್ದಾರೆ. ಈ ಜಾಹೀರಾತಿನ ವಿರುದ್ಧ ಬಿಜೆಪಿಯ ಫೈರ್ ಬ್ರ್ಯಾಂಡ್ ಖ್ಯಾತಿಯ ಸಂಸದ ಅನಂತ ಕುಮಾರ್ ಹೆಗಡೆ ಆಕ್ಷೇಪ ವ್ಯಕ್ತಪಡಿಸಿದ್ದು, ಜಾಹೀರಾತು ಕಂಪನಿಗೆ ಪತ್ರ ಬರೆದು ತಮ್ಮ ಅಸಮಧಾನ ವ್ಯಕ್ತ ಪಡಿಸಿದ್ದಾರೆ.

ಅಮೀರಖಾನ್ ಭಾಗಿಯಾದ ದೀಪಾವಳಿ ಜಾಹೀರಾತು ಗಮನಿಸಿದೆ. ಪ್ರಾಣಿ, ಪರಿಸರದ ಬಗ್ಗೆ ಅಮೀರ್ ಖಾನ್ ಅವರಿಗೆ ಇರುವ ಕಾಳಜಿಯನ್ನು ನಾನು ಶ್ಲಾಘಿಸುತ್ತೇನೆ. ಆದರೆ ಈ ಎಲ್ಲ ಆಕ್ಷೇಪಗಳು, ಮನವಿಗಳು ಕೇವಲ ಹಿಂದೂ ಧರ್ಮದ ಆಚರಣೆಗಳ ವಿಚಾರದಲ್ಲಿ ಮಾತ್ರ ಯಾಕೆ ಎಂದು ಅಮೀರ್ ಖಾನ್ ಪ್ರಶ್ನಿಸಿದ್ದಾರೆ.

ಅಲ್ಲದೇ ಅಮೀರ್ ಖಾನ್ ತಾವು ಪ್ರತಿನಿಧಿಸುವ ಧರ್ಮದ ಆಚರಣೆಗಳ ಬಗ್ಗೆ ಯಾಕೆ ಮೌನ ವಹಿಸಿದ್ದಾರೆ ಎಂದು ಅನಂತಕುಮಾರ್ ಹೆಗಡೆ ಪ್ರಶ್ನಿಸಿದ್ದಾರೆ. ವರಧಾನ್ ಗೋಯೆಂಕಾ ಮಾಲಿಕತ್ವದ ಸಿಇಎಟಿ ಸಂಸ್ಥೆಗೆ ಅನಂತ ಕುಮಾರ್ ಹೆಗಡೆ ಪತ್ರ ಬರೆದಿದ್ದು ಜಾಹೀರಾತು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.

ಹಿಂದೂಗಳೇ ಆಗಿರುವ ನೀವು ಹಿಂದೂಗಳ ಭಾವನೆಯನ್ನು ಗೌರವಿಸಬೇಕೆಂದು ಅನಂತಕುಮಾರ್ ಹೆಗಡೆ ಆಗ್ರಹಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹೆಗಡೆ ಪತ್ರ ವೈರಲ್ ಆಗಿದ್ದು, ಹಿಂದೂ ಸಂಘಟನೆಗಳು ಜಾಹೀರಾತಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ‌.

ಇದನ್ನೂ ಓದಿ : 100 ಕೋಟಿ ಕೊರೊನಾ ಲಸಿಕೆ : ಇದು ಹೊಸ ಅಧ್ಯಾಯದ ಆರಂಭ, ಹೊಸ ಭಾರತ ಎಂದ ಪ್ರಧಾನಿ ನರೇಂದ್ರ ಮೋದಿ

ಇದನ್ನೂ ಓದಿ : ತಮಿಳುನಾಡು ಮಾಜಿ ಸಿಎಂ ಪಳನಿ ಸ್ವಾಮಿ ಆಸ್ಪತ್ರೆಗೆ ದಾಖಲು

( Aamir Khan’s ad has hurt Hindu sentiments : BJP MP Anant Kumar Hegde )

Comments are closed.