ಸೋಮವಾರ, ಏಪ್ರಿಲ್ 28, 2025
HomeCinemaSIIMA AWARDS: ಸೈಮಾ ಅವಾರ್ಡ್ಸ್ ನಲ್ಲಿ ಯಜಮಾನನ ದರ್ಬಾರ: 8 ಪ್ರಶಸ್ತಿ ಬಾಚಿಕೊಂಡ ದಚ್ಚು ಮೂವಿ

SIIMA AWARDS: ಸೈಮಾ ಅವಾರ್ಡ್ಸ್ ನಲ್ಲಿ ಯಜಮಾನನ ದರ್ಬಾರ: 8 ಪ್ರಶಸ್ತಿ ಬಾಚಿಕೊಂಡ ದಚ್ಚು ಮೂವಿ

- Advertisement -

ಸೈಮಾ ಅವಾರ್ಡ್ಸ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಶಸ್ವಿ ಚಿತ್ರ ಯಜಮಾನ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದು, ಒಟ್ಟು 8 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ಸಂಭ್ರಮಿಸಿದೆ.

ಅತ್ಯುತ್ತಮ ನಟ ಪ್ರಶಸ್ತಿಗೆ ನಟ ದರ್ಶನ್ ಭಾಜನರಾಗಿದ್ದರೇ, ಅತ್ಯುತ್ತಮ ನಟಿ ಪ್ರಶಸ್ತಿಗೆ ರಶ್ಮಿಕಾ ಮಂದಣ್ಣ ಹಾಗೂ ರಚಿತಾರಾಮ್ ಪಾತ್ರರಾಗಿದ್ದಾರೆ. ಯಜಮಾನ ಸಿನಿಮಾ ಎಲ್ಲ ವಿಭಾಗಗಳಲ್ಲೂ ಪ್ರಶಸ್ತಿ ಗೌರವಕ್ಕೆ ಪಾತ್ರವಾಗಿದೆ.

ಯಜಮಾನ ಸಿನಿಮಾದ ಅತ್ಯುತ್ತಮ ಹಾಸ್ಯಕ್ಕಾಗಿ ನಟ ಸಾಧುಕೋಕಿಲ್, ಸಪೋರ್ಟಿಂಗ್ ರೋಲ್ ಗಾಗಿ ಹಿರಿಯ ನಟ ಪ್ರಜ್ವಲ್ ದೇವರಾಜ್ ಅತ್ಯುತ್ತಮ ಪೋಷಕನಟ ಪ್ರಶಸ್ತಿ ಪಡೆದಿದ್ದಾರೆ. ಇದಲ್ಲದೇ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶ, ಸಂಗೀತ,ಧ್ವನಿ ಯಜಮಾನ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ.

ಸಾಧುಕೋಕಿಲ್ ಸೇರಿದಂತೆ ಯಜಮಾನ ಸಿನಿಮಾದ ಹಲವರು ಪ್ರಶಸ್ತಿ ಸ್ವೀಕರಿಸಿದ್ದಾರೆ. ಆದರೆ ನಾಯಕ ನಟ ದರ್ಶನ್ ಅವಾರ್ಡ್ ಫಂಕ್ಷನ್ ಗೆ ಗೈರಾದ ಹಿನ್ನೆಲೆಯಲ್ಲಿ ನಿರ್ಮಾಪಕಿ ಶೈಲಜಾ ನಾಗ್ ದರ್ಶನ್ ಪರ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಹಳ್ಳಿಯ ಎಣ್ಣೆ ಮಾಫಿಯಾ ಕತೆಯನ್ನು ಆಧರಿಸಿ ತೆರೆಗೆ ಬಂದ ಯಜಮಾನ ಸಿನಿಮಾ ಬಾಕ್ಸಾಫೀಸ್ ನಲ್ಲಿ ಗೆದ್ದಿದ್ದು, ದರ್ಶನ್ ಅಭಿಮಾನಿಗಳ ಮನಗೆದ್ದಿತ್ತು. ಶೈಲಜಾ ನಾಗ್ ಚಿತ್ರನಿರ್ಮಿಸಿದ್ದರು.

(sandalwood movie yajmana own eight SIIMA Awards)

RELATED ARTICLES

Most Popular