ಯುವತಿ ಹೆಸರಲ್ಲಿ ಯುವಕರಿಗೆ ಪಾಕ್ ISI ಗಾಳ : ಫೇಸ್‌ಬುಕ್‌ನಲ್ಲಿ ಮಿಲಿಟರಿ ಮಾಹಿತಿ ಲೀಕ್ ಮಾಡಿದ್ದಾತ ಅರೆಸ್ಟ್‌

ಬೆಂಗಳೂರು : ಆತನಿಗೆ ಫೇಸ್‌ಬುಕ್‌ನಲ್ಲಿ ಯುವತಿಯೊಬ್ಬಳ ಪರಿಚಯವಾಗಿದೆ. ಯುವತಿಯ ಆಣತಿಯಂತೆ ಈತ ದೇಶದ ಭದ್ರತೆಗೆ ಧಕ್ಕೆ ತರುವ ಕಾರ್ಯವನ್ನು ಮಾಡಿದ್ದಾನೆ. ದೇಶದ ಮಿಲಿಟರಿಗೆ ಸಂಬಂಧಿಸಿದ ಪೋಟೋಗಳನ್ನು ಕ್ಲಿಕ್ಕಿಸಿ ಫೇಸ್‌ಬುಕ್ ಲೇಡಿಗೆ ಕಳುಹಿಸಿಕೊಡ್ತಿದ್ದ. ಆದ್ರೀಗ ಬೆಂಗಳೂರು ಪೊಲೀಸರ ಕೈಲಿ ಬಂಧನಕ್ಕೊಳಗಾಗಿದ್ದು, ಆತ ಸಂಪರ್ಕ ಹೊಂದಿದ್ದು ಪಾಕಿಸ್ತಾನದ ಐಎಸ್‌ಐ ಅಧಿಕಾರಿಯ ಜೊತೆಗೆ ಅನ್ನೋ ಅನುಮಾನ ವ್ಯಕ್ತವಾಗಿದೆ.

ಈ ಪೋಟೋದಲ್ಲಿರುವ ಈತನ ಹೆಸರು ಜಿತೇಂದರ್‌ ಸಿಂಗ್.‌ ಮೂಲತಃ ರಾಜಸ್ತಾನದ ಬಾರ್ಮೆರ್‌ ನಿವಾಸಿ. ಬೆಂಗಳೂರಿನಲ್ಲ ಬಟ್ಟೆ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಆದರೆ ಆತನಿಗೆ ವಿದ್ಯಾಭ್ಯಾಸ ಇರಲಿಲ್ಲ ಎನ್ನಲಾಗುತ್ತಿದೆ. ಆದರೆ ಈತ ಫೇಸ್‌ಬುಕ್‌ ನಲ್ಲಿ ಹೆಚ್ಚು ಸಕ್ರೀಯವಾಗಿದ್ದ. ಈತನಿಗೆ ಎರಡು ತಿಂಗಳ ಹಿಂದೆ ಯುವತಿಯ ಪರಿಚಯವಾಗಿತ್ತು. ಯುವತಿಯ ಬೇಡಿಕೆಯಂತೆ ಭಾರತೀಯ ಸೇನೆಗೆ ಸಂಬಂಧಿಸಿದ ಪೋಟೋ ಹಾಗೂ ಮಾಹಿತಿಯನ್ನು ಕಲೆ ಹಾಕಿ ಫೇಸ್‌ಬುಕ್‌ ಲೇಡಿಗೆ ಕಳುಹಿಸಿಕೊಡುತ್ತಿದ್ದ.

ಇದನ್ನೂ ಓದಿ : ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿಗೆ ಸೇರ್ಪಡೆ !

ಯುವತಿಗೆ ಪೋಟೋ ಕಳುಹಿಸುವ ಸಲುವಾಗಿ ಆತ ರಾಜಸ್ತಾನದ ಬಾರ್ಡರ್‌ನಲ್ಲಿಯೂ ಆರ್ಮಿ ಯೂನಿಫಾರ್ಮ್‌ ಧರಿಸಿಕೊಂಡು ಓಡಾಡುತ್ತಿದ್ದ. ಈ ವೇಳೆಯಲ್ಲಿ ಸೇನೆಗೆ ಸಂಬಂಧಿಸಿದ ಪೋಟೋಗಳನ್ನು ಕ್ಲಿಕ್ಕಿಸಿಕೊಳ್ಳುವ ಕೆಲಸ ಮಾಡುತ್ತಿದ್ದ. ಆದರೆ ಫೇಸ್‌ಬುಕ್‌ ಅಲ್ಲಿರುವುದು ನಕಲಿ ಖಾತೆ ಆ ಖಾತೆಯನ್ನು ಪಾಕಿಸ್ತಾನ ಐಎಸ್‌ಐ ನಿರ್ವಹಣೆ ಮಾಡುತ್ತಿದೆ ಅನ್ನೋ ಅನುಮಾನ ವ್ಯಕ್ತವಾಗಿದೆ. ಪಾಕಿಸ್ತಾನದ ಐಎಸ್‌ಐ ಭಾರತ ಸೇನೆಯ ಮಾಹಿತಿ ಕಲೆಹಾಕಲು ಇಂತಹ ತಂತ್ರದ ಮೊರೆ ಹೋಗಿದೆ ಅನ್ನೋ ಅನುಮಾನ ವ್ಯಕ್ತವಾಗಿದೆ. ಈ ಹಿಂದೆ ಜೈಪುರ ಹಾಗೂ ದೆಹಲಿಯಲ್ಲಿ ನಕಲಿ ಸೈನಿಕರನ್ನು ಬಂಧಿಸಲಾಗಿತ್ತು ಎಂದು ಸಿಸಿಬಿ ಜಂಟಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ತಿಳಿಸಿದ್ದಾರೆ.

ಮಿಲಿಟರಿ ಇಂಟೆಲಿಜೆನ್ಸಿ ಮಾಹಿತಿಯ ಮೇರೆಗೆ ಇದೀಗ ಬೆಂಗಳೂರಿನ ಸಿಸಿಬಿ ಹಾಗೂ ಮಿಲಿಟರಿ ಗುಪ್ತಚರ ದಳದ ದಕ್ಷಿಣ ಕಮಾಂಡೋ ಟೀಂ ಜಂಟಿಯಾಗಿ ಕಾರ್ಯಾಚರಣೆಯನ್ನು ನಡೆಸಿದ್ದು, ಬೆಂಗಳೂರಿನ ಕಾಟನ್‌ಪೇಟೆಯ ಜಾಲಿ ಮಹೊಲ್ಲಾದಲ್ಲಿ ಆರೋಪಿ ಜಿತೇಂದರ್‌ ಸಿಂಗ್‌ ಎಂಬಾತನನ್ನು ಬಂಧಿಸಿದ್ದಾರೆ. ಇದೀಗ ಆತನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ತನಿಖೆಯ ವೇಳೆಯಲ್ಲಿ ಇನ್ನಷ್ಟು ಮಾಹಿತಿ ಹೊರಬೀಳುವ ಸಾಧ್ಯತೆಯಿದೆ.

ಇದನ್ನೂ ಓದಿ : ನನ್ನಪ್ಪ ಕಾಮುಕ, ಕುಡುಕ, ಸಹೋದರಿಯರ ಬಾಳು ಹಾಳು ಮಾಡಿದ : ಮಧುಸಾಗರ್‌ ಗಂಭೀರ ಆರೋಪ

ಇದನ್ನೂ ಓದಿ : ಪುಕ್ಸಟ್ಟೆ ಲೈಫು ಸಿನಿಮಾ ಪ್ರಮೋಶನ್ ಗೆ ಬಂದ ಸಂಚಾರಿ ವಿಜಯ್ : ಸಾಥ್ ಕೊಟ್ರು ಸ್ಯಾಂಡಲ್ ವುಡ್ ಸ್ಟಾರ್ಸ್

( ISI in Pakistan receives information from young men in India : Arrest has leaked Facebook military information )

Comments are closed.