ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ರನ್ನು ಕಳೆದುಕೊಂಡು ಕನ್ನಡಿಗರು ಅಕ್ಷರಷಃ ಕಣ್ಣಿರಾಗುತ್ತಿದ್ದಾರೆ. ಆದರೆ ಅಪ್ಪು ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಅಮರ ನ್ನಾಗಿಸಲು ವಿಭಿನ್ನ ಪ್ರಯತ್ನ ನಡೆಸಿದ್ದು, ಈ ಸಾಲಿಗೆ ನಟಿ ಪ್ರಣೀತಾ ಕೂಡ ಸೇರ್ಪಡೆಯಾಗಿದ್ದಾರೆ.

ಹಲವು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಕನ್ನಡಿಗರಿಗೆ ನೆರವಾಗುತ್ತಿದ್ದ ಪುನೀತ್ ರಾಜ್ ಕುಮಾರ್ ಅಗಲಿಕೆಯಿಂದ ಜನರು ನೊಂದಿದ್ದಾರೆ. ಆದರೆ ಜನರಿಗೆ ಪುನೀತ್ ನೀಡುತ್ತಿದ್ದ ಸಹಾಯವನ್ನು ಸಹಾಯದ ಮೂಲಕ ಸ್ಮರಿಸಿಕೊಳ್ಳುವ ಪ್ರಯತ್ನವಾಗಿ ನಟಿ ಪ್ರಣೀತಾ ಉಚಿತ ಹೆಲ್ತ್ ಕ್ಯಾಂಪ್ ಆಯೋಜಿಸಿದ್ದಾರೆ.

ನವೆಂಬರ್ 3 ರಂದು ಜಯನಗರ 9 ನೇ ಬ್ಲಾಕ್ ನಲ್ಲಿರುವ ಅಂಬೇಡ್ಕರ್ ಭವನದಲ್ಲಿ ಬೆಳಗ್ಗೆ 9 ರಿಂದ 2. ಗಂಟೆಯವರೆಗೆ ಹೆಲ್ತ್ ಕ್ಯಾಂಪ್ ನಡೆಯಲಿದೆ. ಜನರು ಕ್ಯಾಂಪ್ ಗೆ ಆಗಮಿಸಿ ಉಚಿತವಾಗಿ ಆರೋಗ್ಯ ತಪಾಸಣೆಗೆ ಒಳಪಡಬಹುದಾಗಿದೆ. ಈ ಬಗ್ಗೆ ನಟಿ ಪ್ರಣೀತಾ ಟ್ವೀಟ್ ಮಾಡಿದ್ದು, ಜನರು ಈ ಕ್ಯಾಂಪ್ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.
ಅಲ್ಲದೇ ಇದು ಅದ್ಭುತ ನಟ ಹಾಗೂ ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದ ಪುನೀತ್ ಗೆ ಸಲ್ಲಿಸುವ ಗೌರವ ಎಂದಿದ್ದಾರೆ. ಈ ಹಿಂದೆಯೂ ಹಲವು ಸಾಮಾಜಿಕ ಕಾರ್ಯದಲ್ಲಿ ಪ್ರಣೀತಾ ಗುರುತಿಸಿಕೊಂಡಿದ್ದಾರೆ. ಕನ್ನಡ ಶಾಲೆಗಳ ಉಳಿವಿಗಾಗಿ ಶ್ರಮಿಸಿದ್ದ ಪ್ರಣೀತಾ, ತಮ್ಮ ಪ್ರಣೀತಾ ಫೌಂಡೇಶನ್ ಮೂಲಕ ಉಚಿತ ಕರೋನಾ ವಾಕ್ಸಿನ್ ಡ್ರೈವ್ ಕೂಡ ಆಯೋಜಿಸಿ ಗಮನ ಸೆಳೆದಿದ್ದ