Puneeth Last Video : ಅಪ್ಪು ನಿಧನಕ್ಕೂ ಮುನ್ನ ನಡೆದಿದ್ದೇನು ? ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ ಸತ್ಯ

ಕನ್ನಡದ ಪವರ್ ಸ್ಟಾರ್ ನಿಧನಕ್ಕೆ ಇಂದಿಗೆ ಐದು ದಿನಗಳು ಸಂದಿವೆ. ಆದರೂ ಅಭಿಮಾನಿಗಳು,ಕುಟುಂಬಸ್ಥರ ಕಣ್ಣೀರಿನ ಕೋಡಿ ಇನ್ನೂ ನಿಂತಿಲ್ಲ. ಈ ಮಧ್ಯೆ ಪುನೀತ್ ಕೊನೆಯ ಕ್ಷಣದ ವಿಡಿಯೋ ವೈರಲ್ ಆಗಿದ್ದು ಪವರ್ ಸ್ಟಾರ್ ಕೊನೆಯ ಹೆಜ್ಜೆಗಳು ನೋಡುಗರ ಕಣ್ಣಲ್ಲಿ ನೀರು ತರಿಸುವಂತಿದೆ.

ಅಕ್ಟೋಬರ್ 29 ರ ಬೆಳಗ್ಗೆ ಪುನೀತ್ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಮನೆಗೆ ಮರಳಿದ ಪುನೀತ್ ಪತ್ನಿ ಬಳಿ ಅನಾರೋಗ್ಯದ ವಿಚಾರ ಹಂಚಿಕೊಂಡಿದ್ದಾರೆ. ತಕ್ಷಣ ಅಶ್ವಿನಿ ಬಾಡಿ ಗಾರ್ಡ್ ಹಾಗೂ ಡ್ರೈವರ್ ಅಲರ್ಟ್ ಮಾಡಿದ್ದು ಕಾರಿನಲ್ಲಿ ಪುನೀತ್ ರಾಜ್ ಕುಮಾರ್ ರಮಣಶ್ರೀ ಆಸ್ಪತ್ರೆಗೆ ತೆರಳಿದ್ದಾರೆ.

ಪುನೀತ್ ಅನಾರೋಗ್ಯದ ವಿಚಾರ ತಿಳಿದು ಮನೆಯ ಸಿಬ್ಬಂದಿ ಗಡಿ ಬಿಡಿ ಯಲ್ಲಿ ಓಡಾಡುತ್ತಿರುವುದು ಹಾಗೂ ಬಾಡಿಗಾರ್ಡ್ ಛಲಪತಿ, ಚಾಲಕ ಬಾಬಣ್ಣ ಪುನೀತ್ ಜೊತೆ ಜೊತೆಗೆ ನಡೆಯುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಅಲ್ಲದೇ ಪುನೀತ್ ಸ್ವತಃ ಆರಾಂವಾಗಿ ನಡೆದುಕೊಂಡು ಕಾರಿನಲ್ಲಿ ಕುಳಿತಿದ್ದು ಬಳಿಕ ಮನೆಯಿಂದ ಕಾರು ಆಸ್ಪತ್ರೆಗೆ ತೆರಳಿದೆ.

ಪುನೀತ್ ರಮಣಶ್ರೀ ಆಸ್ಪತ್ರೆ ಗೆ ತೆರಳಿದ ಬಳಿಕ ಅವರ ಆರೋಗ್ಯ ಇನ್ನಷ್ಟು ಬಿಗಡಾಯಿಸಿದೆ ಎನ್ನಲಾಗಿದೆ. ಪುನೀತ್ ಅಲ್ಲಿಯೇ ಕುಸಿದು ಬಿದ್ದಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಇದಕ್ಕೆ ಪೂರಕ ಎಂಬಂತೆ ಪುನೀತ್ ರನ್ನು ನಾಲ್ಕೈದು ಜನರು ಎತ್ತಿ ಹಿಡಿದಿರುವ ಪೋಟೋ ಕೂಡ ಸಿಸಿ ಟಿವಿ ಪೂಟೆಜ್ ಜೊತೆ ರಿಲೀಸ್ ಆಗಿದೆ.

ಇನ್ನು ಆರೋಗ್ಯವಾಗಿದ್ದ ಪುನೀತ್ ಗೆ ದಿಢೀರ್ ಆಗಿ ಏನಾಯ್ತು ಎಂಬ ಫ್ಯಾನ್ಸ್ ಪ್ರಶ್ನೆಗೆ ಸಿಸಿಟಿವಿ ಉತ್ತರವಾಗಿದ್ದು, ಆರೋಗ್ಯವಾಗಿ ಮನೆಯಿಂದ ಕೇವಲ ಆರೋಗ್ಯ ಪರಿಶೀಲನೆಗೆ ತೆರಳಿದ್ದ ಪುನೀತ್ ಹೆಣವಾಗಿ ಮರಳಿದ್ದನ್ನು ಜೀರ್ಣಿಸಿಕೊಳ್ಳಲಾಗದೇ ಅಭಿಮಾನಿಗಳು ಇನ್ನೂ ಕಣ್ಣೀರಧಾರೆ ಹರಿಸುತ್ತಿದ್ದಾರೆ.

ಇದನ್ನೂ ಓದಿ : ಪುನೀತ್ ರಾಜ್‌ ಕುಮಾರ್ ಸಮಾಧಿಗೆ ಹಾಲು ತುಪ್ಪ ಕಾರ್ಯ ನೆರವೇರಿಸಿದ ಅಪ್ಪು ಕುಟುಂಬಸ್ಥರು

ಇದನ್ನೂ ಓದಿ : ಜೇಮ್ಸ್ ಮೂಲಕ ಮತ್ತೆ ತೆರೆಗೆ ಬರ್ತಾರೆ ಪುನೀತ್: ಪವರ್ ಗೆ ಧ್ವನಿಯಾಗ್ತಾರೆ ಶಿವಣ್ಣ

(What happened before Puneeth Raj kumar passed away? The truth is in CCTV footage )

Comments are closed.