Payasa : ದೀಪಾವಳಿಗೆ ತಟ್‌ ಅಂತ ರೆಡಿಮಾಡಿ ಶಾವಿಗೆ ಪಾಯಸ

ಇನ್ನೇನು ಹಬ್ಬದ ಸಮಯ ಹತ್ತಿರದಲ್ಲೇ ಇದೇ ಈ ದೀಪಾವಳಿ ಏನಾದರು ತಟ್‌ ಅಂತ ರೆಡಿಯಾಗೋ ಸಿಹಿಯನ್ನು ಮಾಡಬೇಕು ಅಂತ ಯೋಚಿಸೋರಿಗೆ ಇಲ್ಲಿದೇ ನೋಡಿ ಬೇಗನೇ ತಯಾರಿಸಬಲ್ಲ, ರುಚಿ ರುಚಿಯಾದ, ಮನೆಯವರೆಲ್ಲರೂ ಇಷ್ಟ ಪಟ್ಟು ತಿನ್ನುವ ಶಾವಿಗೆ ಪಾಯಸ ರೆಸಿಪಿ.

ಶಾವಿಗೆ ಪಾಯಸ ಮಾಡಲು ಬೇಕಾಗುವ ಸಾಮಾಗ್ರಿಗಳು : ಶಾವಿಗೆ ಮುಕ್ಕಾಲು ಕಪ್‌, ಸಕ್ಕರೆ ಅರ್ಧ ಕಪ್‌, ತುಪ್ಪ 1 ಟೇಬಲ್‌ ಸ್ಪೂನ್‌, ಏಲಕ್ಕಿ ಪುಡಿ 1 ಚಿಟಿಕೆ, 10ರಿಂದ 15 ಬಾದಾಮಿ, 20 ಗೋಡಂಬಿ, ದ್ರಾಕ್ಷಿ20, ಅರ್ಧ ಲೀಟರ್‌ ಗಟ್ಟಿ ಹಾಲು.

ಇದನ್ನೂ ಓದಿ: Taste ಮಾಡಿ ಉಡುಪಿ ಶೈಲಿಯ ರುಚಿ ರುಚಿಯಾದ ಬೇಳೆ ಸಾಂಬಾರ್‌

ಮಾಡುವ ವಿಧಾನ : ಮೊದಲಿಗೆ ಸ್ಟವ್‌ ಹಚ್ಚಿ ಪಾತ್ರೆಗೆ ತುಪ್ಪವನ್ನು ಹಾಕಿಕೊಂಡು ಅದರಲ್ಲಿ ಬಾದಾಮಿ ಹಾಗೂ ಗೋಡಂಬಿ, ದ್ರಾಕ್ಷಿಯನ್ನು ಚೆನ್ನಾಗಿ ಹುರಿದು ಕೊಳ್ಳಬೇಕು. ಹುರಿದ ಬಾದಾಮಿ, ಗೋಡಂಬಿ, ದ್ರಾಕ್ಷಿಯನ್ನು ಬೇರೆ ಪಾತ್ರೆಯಲ್ಲಿ ಹಾಕಿ ಇಡಬೇಕು ನಂತರ ಅದಕ್ಕೆ ಮತ್ತೆ ತುಪ್ಪ ಹಾಕಿ ಶಾವಿಗೆಯನ್ನು ತುಪ್ಪದಲ್ಲಿ ಕೆಂಪಗಾಗುರೆಗೆ ಹುರಿದು ಕೊಳ್ಳಬೇಕು.

ನಂತರ ಹುರಿದ ಶಾವಿಗೆಯನ್ನು ಇನ್ನೋಂದು ಪಾತ್ರೆಯಲಲ್ಲಿ ತೆಗೆದಿಟ್ಟುಕೊಂಡು ಹಾಲನ್ನು ಬಿಸಿಮಾಡಿಕೊಳ್ಳಬೇಕು. ಹಾಲು ಬಿಸಿಯಾದ ನಂತರ ಅದಕ್ಕೆ ಈ ಮೊದಲೇ ಹುರಿದಿಟ್ಟು ಕೊಂಡ ಬಾದಾಮಿ, ಗೋಡಂಬಿ, ದ್ರಾಕ್ಷೀಯನ್ನು ಹಾಕಿ ಕೊಳ್ಳಿ. ನಂತರ ಆ ಹಾಲಿಗೆ ಹುರಿದಿಟ್ಟಿರುವ ಶಾವಿಗೆಯನ್ನು ಹಾಕಿಕೊಳ್ಳಿ. ಸಕ್ಕರೆ ಮತ್ತು ಏಲಕ್ಕಿ ಪುಡಿಯನ್ನು ಅದಕ್ಕೆ ಸೇರಿಸಿ ಚೆನ್ನಾಗಿ ಕಲಸಿಕೊಂಡರೆ ಮುಗೀತು ರುಚಿಯಾದ ಶಾವಿಗೆ ಪಾಯಸ ರೆಡಿ.

ಇದನ್ನೂ ಓದಿ: ಮನೆಯಲ್ಲೇ ಮಾಡಿ ರುಚಿ ರುಚಿಯಾದ ಮಂಗಳೂರು ಬನ್ಸ್

(Prepare for Diwali Shavige Payasam)

Comments are closed.