ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ಬಹುಭಾಷೆಯಲ್ಲಿ ತೆರೆ ಕಾಣಲಿದ್ದು, ಸಿನಿಮಾ ರಿಲೀಸ್ ಗೂ ಮುನ್ನವೇ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಈಗಾಗಲೇ ರಿಲೀಸ್ ಆಗಿರೋ ಹಾಡು ವೀಕ್ಷಣೆಯಲ್ಲಿ ಹೊಸ ದಾಖಲೆ ಬರೆಯುತ್ತಿದ್ದು, 3.3 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ.
777 ಚಾರ್ಲಿ ಸಿನಿಮಾದ ಹಾಡು ಗೌರಿಗಣೇಶ್ ಹಬ್ಬದ ವೇಳೆ ರಿಲೀಸ್ ಆಗಿದ್ದು, ರಿಲೀಸ್ ಆದ ಒಂದೇ ವಾರದಲ್ಲಿ ವೀಕ್ಷಣೆಯಲ್ಲಿ ದಾಖಲೆ ಬರೆದಿದೆ. ಈಗಾಗಲೇ ಹಾಡು 3.3 ಮಿಲಿಯನ್ ವೀವ್ಸ್ ಪಡೆದುಕೊಂಡಿದ್ದು, ಹಾಡಿನ ವೀಕ್ಷಣೆಯ ಹಳೆ ದಾಖಲೆಗಳನ್ನು ಮುರಿಯುವ ಮುನ್ಸೂಚನೆ ನೀಡಿದೆ.

ಕಥಾನಾಯಕ ಧರ್ಮನ ಪಾತ್ರದಲ್ಲಿ ನಟ ರಕ್ಷಿತ್ ಶೆಟ್ಟಿ ಕಾಣಿಸಿಕೊಂಡಿದ್ದು, ನಾಯಿ ಮತ್ತು ಮನುಷ್ಯನ ಬಾಂಧವ್ಯವನ್ನು ಹೇಳಲು ಹೊರಟಿದೆ ಸಿನಿಮಾ. ಬಿಡುಗಡೆಯಾಗಿರೋ ಟಾರ್ಚರ್ ಹಾಡಿನಲ್ಲಿ ಧರ್ಮನಿಗೆ ನಾಯಿ ಕೊಡೋ ಕಾಟ ಸಖತ್ತಾಗಿ ಮೂಡಿಬಂದಿದ್ದು, ಶ್ವಾನ ಪ್ರಿಯರ ಮನಗೆದ್ದಿದೆ.
ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಹಿಂದಿ, ಮಲೆಯಾಳಂನಲ್ಲೂ 777 ಚಾರ್ಲಿ ಸಿನಿಮಾ ರಿಲೀಸ್ ಆಗಲಿದ್ದು, ಈಗಾಗಲೇ ಟಾರ್ಚರ್ ಹಾಡು ಕೂಡ ಈ ಭಾಷೆಗಳಲ್ಲಿ ತೆರೆಕಂಡಿದೆ. ಕನ್ನಡದಲ್ಲಿ ಟಾರ್ಚರ್ ಹಾಡಿಗೆ ವಿಜಯ್ ಪ್ರಕಾಶ್ ಧ್ವನಿಯಾಗಿದ್ದಾರೆ.
ಕಿರಣ ರಾಜ್ ನಿರ್ದೇಶನದಲ್ಲಿ ಮೂಡಿ ಬರ್ತಿರೋ ಸಿನಿಮಾಗೆ ನೋಬಿನ್ ಪೌಲ್ ಸಂಗೀತ ನೀಡಿದ್ದಾರೆ. ಚಿತ್ರ ಅದಾಗಲೇ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಿದ್ದು, ಇದೇ ವರ್ಷದ ಡಿಸೆಂಬರ್ 31 ರಂದು 777 ಚಾರ್ಲಿ ಥೀಯೇಟರ್ ಗೆ ಬರಲಿದೆ.
ಇದನ್ನೂ ಓದಿ : ಕೊಟ್ಟ ಮಾತು ಉಳಿಸಿಕೊಂಡ್ರು, ರಿಚರ್ಡ್ ಆಂಟನಿ ಕಥೆ ಹೇಳೋಕೆ ರೆಡಿಯಾದ್ರು ರಕ್ಷಿತ್ ಶೆಟ್ಟಿ
ಇದನ್ನೂ ಓದಿ : ಆಹಾರ ಮತ್ತು ಸೆಕ್ಸ್: ಇವುಗಳಲ್ಲಿ ನಟಿ ಶ್ರುತಿ ಹಾಸನ್ ಆಯ್ಕೆ ಯಾವುದು ಗೊತ್ತಾ?
ಇದನ್ನೂ ಓದಿ : ಸಿನಿಪ್ರಿಯರಿಗೆ ಇಲ್ಲಿದೆ ಭರ್ಜರಿ ಆಫರ್: ಹಾರರ್ ಸಿನಿಮಾ ನೋಡಿ ಬಹುಮಾನ ಗೆಲ್ಲಿ
( 3.3 million views for 777 Charlie torture song in Kannada)