IPL 2021 : ಯುಎಇ ಅಂಗಳದಲ್ಲಿ ಕನ್ನಡ ಕಂಪು : ಕುಂಬ್ಳೆ ಕನ್ನಡ ಹಾಡಿಗೆ ಮನಸೋತ ಪಂಜಾಬ್‌

ಐಪಿಎಲ್‌ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದೆ. ಎಲ್ಲಾ ತಂಡಗಳು ಯುಎಇನಲ್ಲಿ ಅಭ್ಯಾಸ ಆರಂಭಿಸಿವೆ. ಈ ನಡುವಲ್ಲೇ ಕನ್ನಡಿಗರಿಂದಲೇ ತುಂಬಿರುವ ಪಂಜಾಬ್‌ ಕಿಂಗ್ಸ್‌ ತಂಡದ ಕೋಚ್‌ ಕನ್ನಡಿಗ ಅನಿಲ್‌ ಕುಂಬ್ಳೆ ಕನ್ನಡ ಹಾಡು ಹಾಕಿದ್ದು, ಆಟಗಾರರು ಸಖತ್‌ ಖುಷಿಯಾಗಿದ್ದಾರೆ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಹೊರತು ಪಡಿಸಿದ್ರೆ ಕನ್ನಡಿಗರು ಬಹುವಾಗಿ ಇಷ್ಟ ಪಡೋದು ಪಂಜಾಬ್‌ ಕಿಂಗ್ಸ್‌ ತಂಡವನ್ನ. ಪಂಜಾಬ್‌ ತಂಡದಲ್ಲಿ ಅನಿಲ್‌ ಕುಂಬ್ಳೆ ಕೋಚ್‌ ಆಗಿದ್ರೆ, ಕೆ.ಎಲ್.ರಾಹುಲ್‌ ನಾಯಕನಾಗಿದ್ದಾರೆ. ಅಲ್ಲದೇ ಮಯಾಂಕ್‌ ಅಗರ್‌ವಾಲ್‌ ಸೇರಿದಂತೆ ಹಲವು ಕನ್ನಡಿಗ ಆಟಗಾರರಿದ್ದಾರೆ. ಇದೀಗ ಪಂಜಾಬ್‌ ತಂಡ ಯುಎಇನಲ್ಲಿ ಅಭ್ಯಾಸ ನಡೆಸುತ್ತಿದೆ.

ಪಂಜಾಬ್‌ ಕಿಂಗ್ಸ್‌ ತಂಡ ತನ್ನ ಆಟಗಾರರಿಗೆ ಬಿಡುವಿನ ವೇಳೆಯಲ್ಲಿ ಸಂಗೀತ ರಸಸಂಜೆ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಕೋಚ್‌ ಅನಿಲ್‌ ಕುಂಬ್ಳೆ ಸಾಹಸ ಸಿಂಹ ವಿಷ್ಣುವರ್ಧನ್‌ ಹಾಗೂ ಭಾರತಿ ಅವರು ನಟಿಸಿರುವ ದೇವರಗುಡಿ ಚಿತ್ರದ ಮಾಮರವೆಲ್ಲೋ ಕೋಗಿಲೆಯೆಲ್ಲೋ ಗೀತೆಯನ್ನು ಹಾಡಿದ್ದಾರೆ. ಕುಂಬಳ್ಳೆ ಅವರ ಹಾಡನ್ನು ಕೇಳಿದ ಪಂಜಾಬ್‌ ತಂಡದ ಆಟಗಾರರು ಮಾತ್ರವಲ್ಲದೇ ಕನ್ನಡಿಗರು ಸಖತ್‌ ಖುಷಿಯಾಗಿದ್ದಾರೆ.

ಖ್ಯಾತ ಗಾಯಕ ಎಸ್‌ಪಿಬಿ ಅವರು ಹಾಡಿದ್ದ ಹಾಡಿಗೆ ಅನಿಲ್‌ ಕುಂಬ್ಳೆ ಧ್ವನಿ ನೀಡಿದ್ದಾರೆ. ಸದ್ಯ ಕುಂಬ್ಳೆ ಅವರ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗಿದೆ.

ಇದನ್ನೂ ಓದಿ : ಐಪಿಎಲ್‌ನಲ್ಲಿ ನೀಲಿ ಜರ್ಸಿ ತೊಟ್ಟು ಕಣಕ್ಕಿಳಿಯಲಿದೆ ಆರ್‌ಸಿಬಿ

ಇದನ್ನೂ ಓದಿ : ಕ್ರಿಕೆಟ್‌ ವೃತ್ತಿ ಬದುಕಿಗೆ ವಿದಾಯ ಹೇಳಿದ ಲಸಿತ್‌ ಮಾಲಿಂಗ

( IPL 2021 : PBKS Coach Anil Kumble Sung Kannada Song )

Comments are closed.