ಭಾನುವಾರ, ಏಪ್ರಿಲ್ 27, 2025
HomeCinemaSandalwood Star war : ಒಂದೇ ದಿನ ಕೋಟಿಗೊಬ್ಬ-3, ಸಲಗ ರಿಲೀಸ್‌ : ಸುದೀಪ್‌, ವಿಜಯ್‌,...

Sandalwood Star war : ಒಂದೇ ದಿನ ಕೋಟಿಗೊಬ್ಬ-3, ಸಲಗ ರಿಲೀಸ್‌ : ಸುದೀಪ್‌, ವಿಜಯ್‌, ಶಿವಣ್ಣ ನಡುವೆ ಸ್ಟಾರ್‌ ವಾರ್‌

- Advertisement -

ರಾಜ್ಯ ಸರಕಾರ ಶೇ.100 ರಷ್ಟು ಭರ್ತಿಗೆ ಆದೇಶ ಹೊರಡಿಸಿದ್ದೇ ತಡ ಸ್ಯಾಂಡಲ್‌ವುಡ್‌ನಲ್ಲಿ ಇದೀಗ ಬಿಡುಗಡೆಗೆ ಸಾಲು ಸಾಲು ಚಿತ್ರಗಳು ಕಾಯುತ್ತಿವೆ. ಇದೀಗ ಅಕ್ಟೋಬರ್‌ 14ರಂದು ಸುದೀಪ್‌ ನಟನೆಯ ಕೋಟಿಗೊಬ್ಬ-3 ಹಾಗೂ ದುನಿಯಾ ವಿಜಯ್‌ ನಟನೆಯ ಸಲಗ ರಿಲೀಸ್‌ ಆಗಲಿದ್ದು, ಅಭಿಮಾನಿಗಳು ಖುಷಿಯಾಗಿದ್ದಾರೆ. ದಸರಾ ಹೊತ್ತಲೇ ಖ್ಯಾತ ನಟರ ಸಿನಿಮಾಗಳು ರಿಲೀಸ್‌ ಆಗ್ತಿದ್ದು, ದೀಪಾವಳಿಗೆ ಶಿವಣ್ಣ ನಟನೆಯ ಭಜರಂಗಿ – 2 ತೆರೆಗೆ ಬರುತ್ತಿದೆ. ಹೀಗಾಗಿ ಸುದೀಪ್‌, ಶಿವಣ್ಣ ಹಾಗೂ ವಿಜಯ್‌ ನಡುವೆ ಸ್ಟಾರ್‌ ವಾರ್‌ ಶುರುವಾಗಿದೆ.

ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ತತ್ತರಿಸಿ ಹೋಗಿದ್ದ ಸಿನಿಮಾ ನಿರ್ಮಾಪಕರು ಕೊಂಚ ರಿಲ್ಯಾಕ್ಸ್‌ ಆಗಿದ್ದಾರೆ. ರಾಜ್ಯ ಸರಕಾರ ಕೊನೆಗೂ ಥಿಯೇಟರ್‌ಗಳಲ್ಲಿ ಪ್ರೇಕ್ಷಕರ ಭರ್ತಿಗೆ ಅವಕಾಶ ಕಲ್ಪಿಸಿದೆ. ಇದರ ಬೆನ್ನಲ್ಲೇ ಇದೀಗ ಸ್ಯಾಂಡಲ್‌ವುಡ್‌ನ ಮೂವರು ನಟರಾದ ಕಿಚ್ಚ ಸುದೀಪ್‌, ಶಿವರಾಜ್‌ ಕುಮಾರ್‌ ಹಾಗೂ ದುನಿಯಾ ವಿಜಯ್‌ ನಟನೆಯ ಸಿನಿಮಾಗಳು ಒಂದೇ ತಿಂಗಳಲ್ಲಿ ರಿಲೀಸ್‌ ಆಗಲಿವೆ.

ಈ ಹಿಂದೆ ಅಕ್ಟೋಬರ್‌ 1, 14 ಹಾಗೂ 29 ರಂದು ಮೂವರು ನಿರ್ಮಾಪಕರು ತಮ್ಮ ಸಿನಿಮಾಗಳನ್ನು ರಿಲೀಸ್‌ ಮಾಡಲು ಫ್ಲ್ಯಾನ್‌ ಮಾಡಿಕೊಂಡಿದ್ದರು. ಆದರೆ ರಾಜ್ಯ ಸರಕಾರ ಥಿಯೇಟರ್‌ಗಳಲ್ಲಿ ಶೆ.100ರಷ್ಟು ಭರ್ತಿಗೆ ಅವಕಾಶ ನೀಡಿದ್ದೇ ತಡ, ಸಿನಿಮಾ ನಿರ್ಮಾಪಕರು ಅದ್ದೂರಿಯಾಗಿಯೇ ರಾಜ್ಯದಾದ್ಯಂತ ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದಾರೆ. ಹೀಗಾಗಿ ಕಿಚ್ಚ ಸುದೀಪ್‌ ನಟನೆಯ ಬಹು ನಿರೀಕ್ಷಿತ ಸಿನಿಮಾ ಕೋಟಿಗೊಬ್ಬ -3 ಸಿನಿಮಾ ಅಕ್ಟೋಬರ್‌ 14 ರಂದು ರಿಲೀಸ್‌ ಆಗಲಿದೆ. ಕೋಟಿಗೊಬ್ಬ ಸಿನಿಮಾ ಈಗಾಗಲೇ ಸೂಪರ ಹಿಟ್‌ ಆಗಿರೋ ಹಿನ್ನೆಲೆಯಲ್ಲೀಗ ಕೋಟಗೊಬ್ಬ-3 ಸಿನಿಮಾ ಕೂಡ ಕನ್ನಡ ಚಿತ್ರರಸಿಕರಲ್ಲಿ ಹೊಸ ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಇನ್ನೊಂದೆಡೆಯಲ್ಲಿ ಸಲಗ ಸಿನಿಮಾ ಕೂಡ ಅದೇ ದಿನದಂದೇ ತೆರೆ ಕಾಣಲಿದೆ. ದುನಿಯಾ ವಿಜಯ್‌ ನಟನೆಯ ಸಲಗ ಸಿನಿಮಾಕ್ಕಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ. ಸಿನಿಮಾ ಈಗಾಗಲೇ ತೆರೆಗೆ ಬರಲು ಸಿದ್ದವಾಗಿದ್ದರೂ ಕೂಡ, ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ನಿರ್ಮಾಪಕರು ಬಿಡುಗಡೆಗೆ ರೆಡಿ ಇರಲಿಲ್ಲ. ಆದ್ರೀಗ ನವರಾತ್ರಿಯ ಸಮಯದಲ್ಲಿಯೇ ಸಿನಿಮಾ ತೆರೆಗೆ ತರಲು ರೆಡಿಯಾಗಿದ್ದಾರೆ. ಅತೀ ಹೆಚ್ಚಿನ ಥಿಯೇಟರ್‌ಗಳಲ್ಲಿ ಸಿನಿಮಾ ಬಿಡುಗಡೆಗೆ ಫ್ಲ್ಯಾನ್‌ ಮಾಡಲಾಗುತ್ತಿದೆ.

ಈ ನಡುವಲ್ಲೇ ಶಿವಣ್ಣ ನಟನೆಯ ಭಜರಂಗಿ -2 ಸಿನಿಮಾ ಕೂಡ ಅಕ್ಟೋಬರ್‌ ತಿಂಗಳಿನಲ್ಲಿಯೇ ರಿಲೀಸ್‌ ಆಗಲಿದೆ. ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿಯೇ ಸಿನಿಮಾ ತೆರೆಗೆ ಬರುತ್ತಿದೆ. ಅಕ್ಟೋಬರ್‌ 29 ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ನಿರ್ಮಾಪಕ ಜಯಣ್ಣ ಈಗಾಗಲೇ ಘೋಷಣೆ ಮಾಡಿದ್ದಾರೆ. ಕೋಟಿಗೊಬ್ಬ ಹಾಗೂ ಸಲಗ ತೆರೆಕಂಡ ಎರಡು ವಾರಗಳಲ್ಲಿ ಶಿವರಾಜ್‌ ಕುಮಾರ್‌ ನಟನೆಯ ಬಹುನಿರೀಕ್ಷಿತ ಸಿನಿಮಾ ಥಿಯೇಟರ್‌ ಗೆ ಎಂಟ್ರಿ ಕೊಡಲಿದೆ.

ಒಟ್ಟಿನಲ್ಲಿ ಮೂವರು ನಟರ ಸಿನಿಮಾ ಥಿಯೇಟರ್‌ಗೆ ಬರುತ್ತದೆ. ಅದ್ರಲ್ಲೂ ಸುದೀಪ್‌ ಹಾಗೂ ದುನಿಯಾ ವಿಜಯ್‌ ನಟನೆಯ ಸಿನಿಮಾ ಒಂದೇ ದಿನ ತೆರೆಗೆ ಬರುತ್ತಿದ್ದು, ನಟರ ನಡುವೆ ಸ್ಟಾರ್‌ ವಾರ್‌ಗೆ ಕಾರಣವಾಗಿದೆ. ಆದರೆ ಚಿತ್ರರಸಿಕರು ಮಾತ್ರ ಅಕ್ಟೋಬರ್‌ ತಿಂಗಳಲ್ಲಿ ಮೂರು ಸಿನಿಮಾಗಳು ತೆರಗೆ ಬರುತ್ತಿರೋದ್ರಿಂದಾಗಿ ಸಖತ್‌ ಖುಷಿಯಾಗಿದ್ದಾರೆ.

ಇದನ್ನೂ ಓದಿ : ದುನಿಯಾ ವಿಜಯ್‌ ಸಲಗಕ್ಕೆ ಶುಭಕೋರಿದ ಸುದೀಪ್‌

ಇದನ್ನೂ ಓದಿ : ಡಾರ್ಲಿಂಗ್ ಕೃಷ್ಣನಿಗೆ ಜೋಡಿಯಾದ ಜೊತೆ ಜೊತೆಯಲಿ ಬೆಡಗಿ ಮೇಘಾ ಶೆಟ್ಟಿ

( Sandalwood Star Wars between Sudeep, Vijay and Shivaraj kumar, October 14 release Kotigobba-3 and Salaga And oct 29th release Bhajarangi 2 )

Arun Gundmi | ಅರುಣ್ ಗುಂಡ್ಮಿ
Arun Gundmi Editor In Chief News Next Kannada. Working in more than 20 Years in Kannada Media (Print, Digital and News Channels. Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular