ಸ್ಯಾಂಡಲ್ ವುಡ್ ರಿಯಲ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಆದರೆ ಉಪ್ಪಿ ಮನೆ ಮುಂದೇ ಕೇಕ್ ಕತ್ತರಿಸಿ, ಉಪ್ಪಿ ಕೈಕುಲುಕಿ ಹುಟ್ಟುಹಬ್ಬ ಆಚರಿಸೋ ಫ್ಯಾನ್ಸ್ ಗೆ ಮಾತ್ರ ರಿಯಲ್ ಸ್ಟಾರ್ ನಿರಾಸೆ ಮಾಡಿದ್ದು, ಎಲ್ಲಿದ್ದೀರೋ ಅಲ್ಲಿಂದಲೇ ಹಾರೈಸಿ ಎಂದಿದ್ದಾರೆ.

ಸೆ.18 ರಂದು ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ಗಳ ಬರ್ತಡೇ ಸಂಭ್ರಮವಿದೆ. ರಿಯಲ್ ಸ್ಟಾರ್ ಉಪೇಂದ್ರ 52 ನೇ ವಸಂತಕ್ಕೆ ಕಾಲಿರಿಸಲಿದ್ದಾರೆ. ಸದ್ಯ ಕಬ್ಜ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿರೋ ರಿಯಲ್ ಸ್ಟಾರ್ ಈ ಭಾರಿಯೂ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದ್ದಾರೆ.

ಕೊರೋನಾ ಮೂರನೇ ಅಲೆಯ ಭೀತಿಯಿಂದಾಗಿ ಈ ವರ್ಷವೂ ಸಾರ್ವಜನಿಕವಾಗಿ ಹುಟ್ಟು ಹಬ್ಬ ಆಚರಿಸಿಕೊಳ್ಳಲು ಉಪೇಂದ್ರ ನಿರಾಕರಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಎಲ್ಲ ಸ್ಟಾರ್ ನಟ-ನಟಿಯರು ತಮ್ಮ ತಮ್ಮ ಹುಟ್ಟುಹಬ್ಬದಿಂದ ದೂರ ಉಳಿದಿದ್ದು, ಉಪೇಂದ್ರ್ ಕೂಡ ಅದನ್ನೇ ಪಾಲಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಉಪೇಂದ್ರ,ಅಭಿಮಾನಿಗಳ ದಿನ 18-09-2021. ಪ್ರತಿವರ್ಷವೂ ಅಭಿಮಾನಿಗಳೊಂದಿಗೆ ಆಚರಿಸುತ್ತಿದ್ದ ಈ ದಿನವನ್ನು ಈ ವರ್ಷ ಆಚರಿಸಲು ಆಗದೇ ಇರೋದಿಕ್ಕೆ ವಿಷಾದಿಸುತ್ತೇನೆ. ನಾನು ಬೆಂಗಳೂರಿನಲ್ಲಿ ಇಲ್ಲದ ಕಾರಣ ಅಭಿಮಾನಿಗಳು ತಾವಿದ್ದಲ್ಲಿಂದಲೇ ಹರಸಿ ಹಾರೈಸಬೇಕೆಂದು ಮನವಿ ಮಾಡುತ್ತೇನೆ ಎಂದಿದ್ದಾರೆ.
ಹುಟ್ಟುಹಬ್ಬದಂದು ಮತ್ತೆ ನಿರ್ದೇಶಕ್ಕಿಳಿದಿರುವ ಉಪ್ಪಿ ಹೊಸ ಮೂವಿ ಫರ್ಸ್ಟ್ ಲುಕ್ ಹಾಗೂ ಟೈಟಲ್ ಅನೌನ್ಸ್ ಆಗೋ ಸಾಧ್ಯತೆ ಇದೆ.
Actor upendra said no to birthday celebreation