ಮೈಸೂರು ದಸರಾ : ಅರಮನೆಗೆ ದಸರಾ ಗಜಪಡೆ ಆಗಮನ : ಆನೆಗಳಿಗೆ ಸಾಂಪ್ರದಾಯಿಕ ಸ್ವಾಗತ

ಮೈಸೂರು : ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ದತೆಗಳು ಆರಂಭವಾಗಿದೆ. ಅರಮನೆ ನಗರಿಗೆ ಇಂದು ದಸರಾ ಗಜಪಡೆ ಸ್ಪರ್ಶ ಮಾಡಿದೆ. ಕ್ಯಾಪ್ಟನ್ ಅಭಿಮನ್ಯು ‌ಅಂಡ್ ಟೀಂಗೆ ಅರಣ್ಯ ಇಲಾಖೆಯವರು ಸಾಂಪ್ರದಾಯಿಕವಾಗಿ‌ ಪೂಜೆ ಸಲ್ಲಿಸಿದ್ದಾರೆ.

ಮೈಸೂರು ದಸರಾ ವಿಶ್ವವಿಖ್ಯಾತಿಯನ್ನು ಪಡೆದುಕೊಂಡಿದೆ. ಅದ್ರಲ್ಲೂ ದಸರಾ ಮೆರವಣಿಗೆ ನೋಡಲು ದೇಶ, ವಿದೇಶಗಳಿಂದ ಲಕ್ಷಾಂತರ ಮಂದಿ ಮೈಸೂರಿಗೆ ಆಗಮಿಸುತ್ತಿದ್ದಾರೆ. ಆದ್ರೆ ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ಕಳೆದ ಬಾರಿ ಕೇವಲ ಸಾಂಪ್ರದಾಯಿಕವಾಗಿ ದಸರಾ ನೆಡಸಲಾಗಿತ್ತು. ಈ ಬಾರಿಯೂ ಸರಳ ದಸರಾ ಆಚರಣೆಗೆ ರಾಜ್ಯ ಸರಕಾರ ಮುಂದಾಗಿದೆ. ವಿಜಯದಶಮಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲೀಗ ಮೈಸೂರಿನಲ್ಲಿ ದಸರಾ ಸಿದ್ದತೆ ಆರಂಭಗೊಂಡಿದೆ.

ಮೈಸೂರು ಅರಮನೆಯ ಜಯ ಮಾರ್ತಾಂಡ ದ್ವಾರದಲ್ಲಿ ಅಭಿಮನ್ಯು ಅಂಡ್ ಟೀಂಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು. ಮಂಗಳವಾದ್ಯ ಮತ್ತು ಪೋಲಿಸ್ ವಾದ್ಯಗಳ ಹಿಮ್ಮೆಳದಲ್ಲಿ ನಡೆದ ಪೂಜೆಯಲ್ಲಿ ದಸರಾ ನಿರ್ವಿಘ್ನವಾಗಿ ನೆರವೇರಲೆಂದು ಗಣೇಶನನ್ನು ಬೇಡಲಾಯಿತು. ಮೈಸೂರಿನ ಅರಣ್ಯ ಭವನದಲ್ಲಿ ಕಾಲ್ನಡಿಗೆಯಲ್ಲಿ ಬಂದ ಆನೆಗಳಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು. ಅಲ್ಲದೇ ಆನೆಗಳು ಮೈಸೂರಿನ ಪ್ರಮುಖ ರಸ್ತೆಗಳ ಮೂಲಕ ಮೈಸೂರು ಅರಮನೆಯನ್ನು ತಲುಪಿವೆ.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್‌ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಗಜ ಪಡೆಗೆ ಸಾಂಪ್ರದಾಯಿಕ ಸ್ವಾಗತ ಕೋರುವ ಜೊತೆಗೆ ಆನೆಗಳಿಗೆ ಪ್ರಿಯವಾದ ಮೋದಕ, ಕಬ್ಬು ಸೇರಿದಂತೆ ಇತರೆ ಸಿಹಿ ತಿನಿಸುಗಳನ್ನು ತಿನ್ನಿಸಿದರು.

ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಾ ಬಂದ ಆನೆಗಳು ಅರಮನೆಯ ಆನೆಬಾಗಿಲಲ್ಲಿ ಸಾಲಾಗಿ ನಿಂತವು. ಅಭಿಮನ್ಯು ಜೊತೆ ಗೋಪಾಲಸ್ವಾಮಿ, ವಿಕ್ರಮ, ಧನಂಜಯ, ಕಾವೇರಿ, ಚೈತ್ರ, ಲಕ್ಷ್ಮಿ ಸಾಥ್ ನೀಡಿದವು. ಇಂದು ಮೈಸೂರು ಅರಮನೆ ಆನೆ ಶಿಬಿರ ಸೇರಿರುವ ಆನೆಗಳಿಗೆ ಸೆಪ್ಟೆಂಬರ್ 19 ರಿಂದ ತಾಲೀಮು ಆರಂಭಿಸಲಾಗುತ್ತದೆ.

ಇದನ್ನೂ ಓದಿ : ವಿದ್ಯಾರ್ಥಿ, ಪೋಷಕರಿಗೆ ಗುಡ್‌ನ್ಯೂಸ್‌ ಕೊಟ್ಟ ಹೈಕೋರ್ಟ್‌

ಇದನ್ನೂ ಓದಿ : ಶಾಲಾ ಮಕ್ಕಳಿಗೆ ಕೊರೊನಾ ಟೆಸ್ಟ್‌ ಕಡ್ಡಾಯ : ಕೋವಿಡ್‌ ತಾಂತ್ರಿಕ ಸಮಿತಿ ಸಲಹೆ

( Mysore : Dussehra elephants teams arrives at the palace: a traditional welcome for elephants )

Comments are closed.