ಮಂಗಳವಾರ, ಏಪ್ರಿಲ್ 29, 2025
HomeCinemaPranitha subash: ದೇಶದ ಒಳಗೂ ಶತ್ರುಗಳಿದ್ದಾರೆ: ನಟಿ ಪ್ರಣೀತಾ ಬೋಲ್ಡ್ ಟ್ವೀಟ್!

Pranitha subash: ದೇಶದ ಒಳಗೂ ಶತ್ರುಗಳಿದ್ದಾರೆ: ನಟಿ ಪ್ರಣೀತಾ ಬೋಲ್ಡ್ ಟ್ವೀಟ್!

- Advertisement -

ಅಪ್ಘಾನಿಸ್ತಾನ್ ಮೇಲಿನ ತಾಲಿಬಾನ್ ದಾಳಿ ಭಾರತದ ಸೋಷಿಯಲ್ ಮೀಡಿಯಾದ ತುಂಬ ಚರ್ಚೆ ಹುಟ್ಟುಹಾಕಿದೆ. ಆದರೆ ಧರ್ಮವಾದಿಗಳನ್ನು ಉಲ್ಲೇಖಿಸುವ ಭರದಲ್ಲಿ ಆರ್.ಎಸ್.ಎಸ್ ನ್ನು ಧರ್ಮಭಯೋತ್ಪಾದನೆಗೆ ತಳುಕು ಹಾಕುತ್ತಿರುವವರ ಬಗ್ಗೆ ನಟಿ ಪ್ರಣೀತಾ ಸುಭಾಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾವುದೇ ಧರ್ಮದ ಅಪ್ಪಟ ಧರ್ಮವಾದಿಗಳು ಕಂಟಕ ಎನ್ನುವ ಅರ್ಥದಲ್ಲಿ ಚರ್ಚೆ ನಡೆದಿದ್ದು, ಈ ವಿಚಾರದಲ್ಲಿ ಆರ್.ಎಸ್.ಎಸ್ ನ್ನು ಧರ್ಮಭಯೋತ್ಪಾದನೆಗೆ ಲಿಂಕ ಮಾಡಲಾಗುತ್ತಿದೆ.

ಇದನ್ನು ನೇರವಾಗಿ ಖಂಡಿಸಿರುವ ನಟಿ ಪ್ರಣೀತಾ ಟ್ವೀಟ್ ಮಾಡಿದ್ದು, ಅಪ್ಘಾನಿಸ್ತಾನ್ ದಲ್ಲಿ ಆಗುತ್ತಿರುವ ಹಿಂಸಾಚಾರವನ್ನು ಉದಾಹರಣೆಯಾಗಿ ನೀಡುತ್ತ ಕೆಲವರು ಹಿಂದೂ ಭಯೋತ್ಪಾದನೆಯ ವಾದವನ್ನು ಮುಂದಿಡುತ್ತಿದ್ದಾರೆ. ಹಿಂದೂ ಭಯೋತ್ಪಾದನೆ ಎಂಬ ತಮ್ಮ ಕಲ್ಪನೆಯನ್ನು ಸಾರ್ವಜನಿಕಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಭಾರತ ದೇಶವು ಎಚ್ಚರಿಕೆಯಿಂದ  ಇರಬೇಕು. ಶತ್ರುಗಳು ದೇಶದ ಗಡಿಯ ಹೊರಗೆ ಮಾತ್ರವಲ್ಲ ಒಳಗೂ ಇದ್ದಾರೆ ಎಂದಿದ್ದಾರೆ. ಪ್ರಣೀತಾ ಈ ಟ್ವೀಟ್ ವೈರಲ್ ಆಗಿದ್ದು, ಹಲವರು ಎಡಪಂಥೀಯರಿಗೆ ಸರಿಯಾದ ಉತ್ತರ ನೀಡಿದ್ದೀರಿ ಎಂದಿದ್ದಾರೆ.

ಹಿಂದೂಧರ್ಮದ ಬಗ್ಗೆ ಅಪಾರ ಗೌರವ ಹೊಂದಿರುವ ಪ್ರಣೀತಾ ಕನ್ನಡಕ್ಕಾಗಿಯೂ ಹಲವು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ದರ್ಶನ್ ಅಭಿನಯದ ಪೋಕಿರಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ಪ್ರಣೀತಾ, ಸದ್ಯ ರಿಲೀಸ್ ಆದ ಬಾಲಿವುಡ್ ಹಂಗಾಮಾ-2 ದಲ್ಲಿ ಸಖತ್ ಗ್ಲಾಮರಸ್ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ.

RELATED ARTICLES

Most Popular