Sudeep: ವಿಕ್ರಾಂತ್ ರೋಣ ಅಡ್ಡಾದಿಂದ ಸ್ಪೆಶಲ್ ಅಪ್ಡೇಟ್: ಸುದೀಪ್ ಹೇಳಿದ್ದೇನು ಗೊತ್ತಾ!

ಸ್ಯಾಂಡಲ್ ವುಡ್ ನಟರ ಸಾಲು ಸಾಲು ಚಿತ್ರಗಳು ರಿಲೀಸ್ ಸಿದ್ಧವಾಗಿದೆ. ಆದರೆ ಕೊರೋನಾ ಹಾಗೂ ಥಿಯೇಟರ್ ಗಳಲ್ಲಿ ಶೇಕಡಾ 50 ರಷ್ಟು ಪ್ರವೇಶಾವಕಾಶ ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಹೋಗಲು ಕಾರಣವಾಗ್ತಿದೆ. ಈ ಮಧ್ಯೆ ಸುದೀಪ್ ಬಹುನೀರಿಕ್ಷಿತ ಸಿನಿಮಾ ವಿಕ್ರಾಂತ ರೋಣ ಅಂಗಳದಿಂದ ಹೊಸ ಅಪ್ಡೇಟ್ ಹೊರಬಂದಿದೆ.

ಸ್ವತಃ ನಟ ಸುದೀಪ್ ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾದ ಅಪ್ಡೇಟ್ ಮಾಹಿತಿ ನೀಡಿದ್ದು, ವಿಕ್ರಾಂತ ರೋಣ ಪೋಸ್ಟ್ ಪ್ರೊಡಕ್ಷನ್ ಕೆಲಸ ಆರಂಭವಾಗಿದೆ ಎಂದಿದ್ದಾರೆ. ಅಷ್ಟೇ ಅಲ್ಲ ತಮ್ಮ ಲೇಟೆಸ್ಟ್ ಪೋಟೋಶೂಟ್ ನ ಸ್ನ್ಯಾಪ್ ವೊಂದನ್ನು ಹಂಚಿಕೊಂಡಿದ್ದಾರೆ.

ಸ್ಟೈಲಿಶ್ ಪೋಟೋ ಹಂಚಿಕೊಂಡಿರೋ ಸುದೀಪ್ ಬಹುದಿನಗಳ ಬಳಿಕ ವೈಯಕ್ತಿಕವಾಗಿ ಮಾಡಿದ ಪೋಟೋಶೂಟ್ ಎಂದು ಕ್ಯಾಪ್ಸನ್ ಹಾಕಿದ್ದಾರೆ. ಇದಕ್ಕೆ ಅಭಿಮಾನಿಗಳು ಮುಗಿಬಿದ್ದು ಕಮೆಂಟ್ ಮಾಡ್ತಿದ್ದು, ಸುಂದರವಾಗಿ ಕಾಣ್ತಿದ್ದೀರಾ ಕಿಚ್ಚ ಸರ್ ಎನ್ನುತ್ತಿದ್ದಾರೆ.

ಅನೂಪ್ ಭಂಡಾರಿ ನಿರ್ದೇಶಿಸಿರುವ ಈ ಸಿನಿಮಾವನ್ನು ಬಿಗ್ ಬಜೆಟ್ ನಲ್ಲಿ ಜಾಕ್ ಮಂಜು ನಿರ್ಮಿಸಿದ್ದಾರೆ. ಈ ಸಿನಿಮಾದ ಐಟಂ ಸಾಂಗ್ ಹಾಗೂ ವಿಶೇಷ ಪಾತ್ರದಲ್ಲಿ ಶ್ರೀಲಂಕಾ ಸುಂದರಿ ಜಾಕ್ವಲಿನ್ ಫರ್ನಾಂಡಿಸ್ ಕಾಣಿಸಿಕೊಂಡಿದ್ದಾರೆ.

ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ವಿಕ್ರಾಂತ್ ರೋಣ ಕನ್ನಡದ ಜೊತೆ ಜೊತೆ ತೆಲುಗು,ತಮಿಳು,ಹಿಂದಿಯಲ್ಲಿ ತೆರೆ ಕಾಣಲಿದೆ. ಥಿಯೇಟರ್ ಗೆ 100 ಕ್ಕೆ 100 ರಷ್ಟು ಪ್ರೇಕ್ಷಕರಿಗೆ ಅವಕಾಶ ಸಿಕ್ಕ ಬಳಿಕ ಸಿನಿಮಾ ತೆರೆಗೆ ಬರಲಿದೆ.

Comments are closed.