ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಅಭಿಮಾನಿಗಳನ್ನು ಅಗಲಿ ಒಂದು ತಿಂಗಳು ಕಳೆಯುತ್ತ ಬಂದರೂ ಅಭಿಮಾನಿಗಳ ದುಃಖ ತೀರಿಲ್ಲ. ಈಗ ಅಪ್ಪು ಅಭಿಮಾನಿಗಳಿಗೆ ನೆಚ್ಚಿನ ನಟನ ಬಗ್ಗೆ ಸಿಹಿಸುದ್ದಿಯೊಂದು ಸಿಕ್ಕಿದೆ. ಇದೇ ಮೊದಲ ಬಾರಿಗೆ ಪುನೀತ್ ಗೆಸ್ಟ್ ರೋಲ್ ಕಾಣಿಸಿಕೊಂಡ ಲಕ್ಕಿಮ್ಯಾನ್ ( Lucky man) ಸಿನಿಮಾದ ಅಪ್ಪು ಸ್ಪೆಶಲ್ ರೋಲ್ ಮತ್ತು ಡ್ಯಾನ್ಸ್ ಪೋಟೋಸ್ ವೈರಲ್ ಆಗಿದ್ದು ಅಭಿಮಾನಿಗಳು ಅಗಲಿದ ನಾಯಕನನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಡ್ಯಾನ್ಸ್ ಕಿಂಗ್ ಪ್ರಭುದೇವಾ ಜೊತೆ ಕನ್ನಡದ ಡ್ಯಾನ್ಸಿಂಗ್ ಕಿಂಗ್ ಪುನೀತ್ ರಾಜ್ ಕುಮಾರ್ ಇದೇ ಮೊದಲ ಬಾರಿಗೆ ಸ್ಕ್ರಿನ್ ಶೇರ್ ಮಾಡಿದ್ದಾರೆ. ಮಾತ್ರವಲ್ಲ ಇಬ್ಬರೂ ಒಂದು ಹಾಡಿಗೆ ಒಟ್ಟಿಗೆ ಡ್ಯಾನ್ಸ್ ಮಾಡಿ ಅಭಿಮಾನಿಗಳಿಗೆ ರಸದೌತಣ ನೀಡಿದ್ದಾರೆ. ಪ್ರಭುದೇವ ನೃತ್ಯಕ್ಕೆ ಹೆಸರಾಗಿದ್ದವರು. ಅವರ ಜೊತೆ ಪುನೀತ್ ಮೊದಲ ಬಾರಿಗೆ ನಟಿಸಿದ್ದು ಮಾತ್ರವಲ್ಲಿ ಡ್ಯಾನ್ಸ್ ಕೂಡ ಮಾಡಿದ್ದು ಪೋಟೋಸ್ ಸೋಷಿಯಲ್ ಮೀಡಿಯಾ ದಲ್ಲಿ ಸಖತ್ ವೈರಲ್ ಆಗಿದೆ.

ಈ ಹಾಡಿನ ಇನ್ನೊಂದು ವಿಶೇಷತೆ ಅಂದ್ರೇ ಈ ಹಾಡನ್ನು ಡಾ.ರಾಜ್ ಕುಮಾರ್ ಅವರ ಮೇಲೆ ರಚಿಸಲಾಗಿದೆಯಂತೆ. ತಂದೆಯ ಮೇಲೆ ನಿರ್ಮಾಣವಾದ (Lucky man) ಈ ಹಾಡಿಗೆ ಪುನೀತ್ ಡ್ಯಾನ್ಸ್ ಕತೆ ಪ್ರಭುದೇವ ಜೊತೆ ಸ್ಟೇಜ್ ನಲ್ಲಿ ಕುಣಿದು ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ. ಲಕ್ಕಿಮ್ಯಾನ್ ಚಿತ್ರಕ್ಕೆ ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್ ಅಕ್ಷ್ಯನ್ ಕಟ್ ಹೇಳಿದ್ದು ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸಿದ್ದಾರೆ. ಸಂಗೀತ ಶೃಂಗೇರಿ ನಾಯಕಿಯಾಗಿರುವ ಸಿನಿಮಾದಲ್ಲಿ ರೋಷಿನಿ ಪ್ರಕಾಶ್ ನಾಯಕಿಯರಾಗಿದ್ದಾರೆ. ಆರ್ಯ ರಂಗಾಯಣ ರಘು, ಸಾಧು ಕೊಕೀಲಾ, ಸುಂದರ ರಾಜ್, ಸುಧಾ ಬೆಳವಾಡಿ ನಾಗಭೂಷಣ ಪ್ರಮುಖ ತಾರಾಗಣದಲ್ಲಿದ್ದಾರೆ.

ಕನ್ನಡದಲ್ಲಿ ದ್ವಿತ್ವ ಸೇರಿದಂತೆ ಹಲವು ಸಿನಿಮಾದಲ್ಲಿ ನಟಿಸಬೇಕಿದ್ದ ಪುನೀತ್ ರಾಜ್ ಕುಮಾರ್ ಜೇಮ್ಸ್ ಚಿತ್ರದ ಚಿತ್ರೀಕರಣ ಮುಗಿಸಿದ್ದರು. ಆದರೆ ಲಕ್ಕಿಮ್ಯಾನ್ ಪುನೀತ್ ರಾಜ್ ಕುಮಾರ್ ಗೆಸ್ಟ್ ರೋಲ್ ನಟಿಸಿರುವ ಕೊನೆಯ ಸಿನಿಮಾ. ಪ್ರಭುದೇವ ಜೊತೆ ಪುನೀತ್ ನೋಡೋಕೆ ಅಭಿಮಾನಿಗಳು ಕಾತುರತೆಯಿಂದ ಕಾಯುತ್ತಿದ್ದಾರೆ. ಪ್ರಭುದೇವ ಮತ್ತು ಪುನೀತ್ ಡ್ಯಾನ್ಸ್ ಧಮಾಕಾದ ಈ ಸಿನಿಮಾ ಮುಂದಿನ ವರ್ಷದ ಆರಂಭದಲ್ಲಿ ತೆರೆ ಕಾಣೋ ಸಾಧ್ಯತೆ ಇದ್ದು, ಬಿಡುಗಡೆಯಾಗಿರೋ ಸಿನಿಮಾ ಸ್ಟಿಲ್ಸ್ ಗಳು ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ.
ಇದನ್ನೂ ಓದಿ : ತಂದೆಯ ಪಕ್ಕ ಪುತ್ರ ಅಮರ: ಬಿಬಿಎಂಪಿ ಆವರಣದಲ್ಲಿ ಪುನೀತ್ ಪುತ್ಥಳಿ ನಿರ್ಮಾಣಕ್ಕೆ ಸಿದ್ಧತೆ
ಇದನ್ನೂ ಓದಿ : ಪುನೀತ್ ಅಭಿಮಾನಿ ಕಷ್ಟಕ್ಕೆ ಮಿಡಿದ ಕಿಚ್ಚ: ಚಿಕಿತ್ಸೆ ವೆಚ್ಚ ಭರಿಸಿದ ಸುದೀಪ್
(Puneet Raj Kumar Special Role in Lucky man with Prabhudeva)