ಸೋಮವಾರ, ಏಪ್ರಿಲ್ 28, 2025
HomeCinemaಪವರ್ ಗೆ ಜೋಡಿಯಾದ ಸೌತ್ ಕ್ವೀನ್….!! ಪುನೀತ್ ರಾಜಕುಮಾರ್ ಜೊತೆ ಮೋಡಿ ಮಾಡಲಿದ್ದಾರೆ ತ್ರಿಷಾ….!!

ಪವರ್ ಗೆ ಜೋಡಿಯಾದ ಸೌತ್ ಕ್ವೀನ್….!! ಪುನೀತ್ ರಾಜಕುಮಾರ್ ಜೊತೆ ಮೋಡಿ ಮಾಡಲಿದ್ದಾರೆ ತ್ರಿಷಾ….!!

- Advertisement -

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮುಂದಿನ ಚಿತ್ರ ದ್ವಿತ್ವ  ಪೋಸ್ಟರ್ ನಿಂದಲೇ ಸಾಕಷ್ಟು ಸುದ್ದಿ ಮಾಡಿತ್ತು. ಹೊಂಬಾಳೆ ಫಿಲ್ಮ್ಸಂ ನ  ಈ ಸಿನಿಮಾಗೆ ಪವರ್ ಜೊತೆ ಸೌತ್ ಕ್ವೀನ್ ತ್ರಿಷಾ ನಟಿಸೋದು ಖಚಿತವಾಗಿದ್ದು, ಎರಡನೇ ಬಾರಿ ಪುನೀತ್,ತ್ರಿಷಾ ಜೋಡಿ ನೋಡೋಕೆ ಅಭಿಮಾನಿಗಳು ಕಾತುರರಾಗಿ ಕಾಯ್ತಿದ್ದಾರೆ.

ಸೈಕಾಲಜಿಗೆ ಸಂಬಂಧಿಸಿದ ಕತೆಯನ್ನು ಆಧಾರಿತ ಈ ಸಿನಿಮಾವನ್ನು ಹೊಂಬಾಳೆ ಫಿಲ್ಸ್ಮ್ ನಿರ್ಮಿಸುತ್ತಿದ್ದು, ಲೂಸಿಯಾ ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ಆಕ್ಷ್ಯನ್ ಕಟ್ ಹೇಳಲಿದ್ದಾರೆ. ಈ ಸಿನಿಮಾಗೆ ಸೌತ್ ಕ್ವೀನ್ ತ್ರಿಷಾ ನಾಯಕಿಯಾಗಲಿದ್ದಾರೆ ಎನ್ನೋ ಸುದ್ದಿ ಹರಡಿತ್ತು.

ಹೊಂಬಾಳೆ ಫಿಲ್ಸ್ಮಂ ಕೊನೆಗೂ ಈ ವಿಚಾರವನ್ನು ಅಧಿಕೃತಗೊಳಿಸಿದ್ದು, ಟ್ವೀಟ್ ನಲ್ಲಿ ಮಾಹಿತಿ ನೀಡಿದೆ. ದ್ವಿತ್ವ ಚಿತ್ರದ ನಾಯಕಿ ತ್ರಿಷಾ ಕೃಷ್ಣನ್ ಗೆ ಸುಸ್ವಾಗತ ಎಂದಿದೆ. ದ್ವಿತ್ವ ಸಿನಿಮಾದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇದುವರೆಗೂ ಕಾಣಿಸಿಕೊಳ್ಳದ ವಿಭಿನ್ನ ರೋಲ್ ನಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ತ್ರಿಷಾ 2014 ರಲ್ಲಿ ಪವರ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದು, ಅಭಿಮಾನಿಗಳು ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದರು. ಈಗ ಮತ್ತೊಮ್ಮೆ ತ್ರಿಷಾ ಹಾಗೂ ಪುನೀತ್ ಜೋಡಿಯಾಗುತ್ತಿದ್ದಾರೆ.

ಸದ್ಯ ಪುನೀತ್ ಬಹುನೀರಿಕ್ಷಿತ ಜೇಮ್ಸ್ ಚಿತ್ರೀಕರಣದಲ್ಲಿ ತೊಡಗಿದ್ದು,  ಈ ಸಿನಿಮಾದ ಬಳಿಕ ದ್ವಿತ್ವ ಸಿನಿಮಾ ಶೂಟಿಂಗ್ ಆರಂಭವಾಗಲಿದೆ. ತೆಲುಗು ಹಾಗೂ ತಮಿಳು ಸಿನಿಮಾದಲ್ಲಿ ಬಹುಬೇಡಿಕೆಯ ನಟಿಯಾಗಿರುವ ತ್ರಿಷಾಗೆ 96ಸಿನಿಮಾ ಹೆಚ್ಚಿನ ಹೆಸರು ತಂದುಕೊಟ್ಟಿತ್ತು.

ಸದ್ಯ ಮಣಿರತ್ನಂ  ಜೊತೆ ಪೊನ್ನಿಯನ್ ಸೆಲ್ವನ್ ಸಿನಿಮಾದಲ್ಲಿ ನಟಿಸುತ್ತಿರುವ ತ್ರಿಷಾ, ದ್ವಿತ್ವ ಸಿನಿಮಾದ ಮೂಲಕ ಎರಡನೇ ಬಾರಿಗೆ ಸ್ಯಾಂಡಲ್ ವುಡ್ ನಲ್ಲಿ ಅದೃಷ್ಟಪರೀಕ್ಷೆಗೆ ಮುಂದಾಗಿದ್ದಾರೆ.

RELATED ARTICLES

Most Popular