Night Curfew : ರಾಜ್ಯದಲ್ಲಿ ಕಠಿಣ ನೈಟ್‌ಕರ್ಪ್ಯೂ ಜಾರಿ, ಅನಗತ್ಯವಾಗಿ ಓಡಾಡಿದ್ರೆ ಕೇಸ್‌ ಫಿಕ್ಸ್

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್‌ ಸೋಂಕು ಹೆಚ್ಚುತ್ತಿದೆ. ಇದರ ಬೆನ್ನಲ್ಲೇ ಬಿಬಿಎಂಪಿ ಎಚ್ಚೆತ್ತುಕೊಂಡಿದೆ. ರಾಜ್ಯದಲ್ಲಿ ಜಾರಿಯಲ್ಲಿರುವ ನೈಟ್‌ ಕರ್ಪ್ಯೂ ಅನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಬಿಬಿಎಂಪಿ ಮುಂದಾಗಿದೆ.

ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ದಿನೇ ದಿನೇ ಸೋಂಕಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಇನ್ನೊಂದೆಡೆಯಲ್ಲಿ ತಜ್ಞರ ಸಮಿತಿ ಕೂಡ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಈಗಾಗಲೇ ಸೋಂಕಿತರ ಮನೆಗಳನ್ನು ಸೀಲ್‌ ಮಾಡುವ ಕಾರ್ಯವನ್ನು ಮಾಡುತ್ತಿದ್ದಾರೆ. ಇನ್ನೊಂದೆಡೆಯಲ್ಲಿ ರಾಜ್ಯದಲ್ಲಿ ಜಾರಿಯಲ್ಲಿರುವ ನೈಟ್‌ ಕರ್ಪ್ಯೂವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಲು ಮುಂದಾಗಿದ್ದಾರೆ.

ರಾತ್ರಿ ೧೦ ಗಂಟೆಯಿಂದ ಬೆಳಗ್ಗೆ ೫ ಗಂಟೆಯ ವರೆಗೆ ನೈಟ್‌ ಕರ್ಪ್ಯೂ ಜಾರಿಯಲ್ಲಿದೆ. ಆದರೆ ನೈಟ್‌ ಕರ್ಪ್ಯೂ ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲ. ಈ ನಿಟ್ಟಿನಲ್ಲಿ ಬಿಬಿಎಂಪಿ ಅಧಿಕಾರಿಗಳು ನೈಟ್‌ಕರ್ಪ್ಯೂವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಮುಂದಾಗಿದ್ದು, ಅನಗತ್ಯವಾಗಿ ಹೊರಗಡೆ ಓಡಾಡುವವರ ವಿರುದ್ದ ಕೇಸ್‌ ದಾಖಲಿಸಲು ಮುಂದಾಗಿದೆ.

ಕೊರೊನಾ ಹೆಚ್ಚುತ್ತಿರುವ ಬೆನ್ನಲ್ಲೇ ಜನರು ಕೂಡ ಮೈ ಮರೆಯುತ್ತಿರೋದು ಕಂಡು ಬರುತ್ತಿದೆ. ಇದೀಗ ನೈಟ್‌ಕರ್ಪ್ಯೂ ಪರಿಣಾಮಕಾರಿಯಾಗಿ ಜಾರಿಗೆ ಬರುತ್ತಿದ್ದು, ನೈಟ್‌ ಕರ್ಪ್ಯೂ ಅವಧಿಯನ್ನು ವಿಸ್ತರಣೆ ಮಾಡುವ ಜೊತೆಗೆ ವೀಕೆಂಡ್‌ ಕರ್ಪ್ಯೂ ಜಾರಿ ಮಾಡುವಂತೆ ಬಿಬಿಎಂಪಿ ಈಗಾಗಲೇ ರಾಜ್ಯ ಸರಕಾರಕ್ಕೆ ಮನವಿಯನ್ನು ಮಾಡಿದೆ. ರಾಜ್ಯದಲ್ಲಿ ಸಂಪುಟ ರಚನೆಯ ಬೆನ್ನಲ್ಲೇ ರಾಜ್ಯದಲ್ಲಿ ಕೊರೊನಾ ವಿರುದ್ದ ಕಠಿಣ ನಿಯಮಗಳು ಜಾರಿಯಾಗುವ ಸಾಧ್ಯತೆಯಿದೆ.

Comments are closed.