CBSE RESULT : ಇಂದು ಸಿಬಿಎಸ್‌ಇ 10 ನೇ ತರಗತಿ ರಿಸಲ್ಟ್‌ : ಫಲಿತಾಂಶ ನೋಡಲು ಇಲ್ಲಿ ಕ್ಲಿಕ್‌ ಮಾಡಿ

ನವದೆಹಲಿ : ಸಿಬಿಎಸ್‌ಇ ( ಸೆಂಟ್ರಲ್‌ ಬೋರ್ಡ್‌ ಆಫ್‌ ಸೆಕೆಂಡರಿ ಎಜುಕೇಶನ್‌ ) 10ನೇ ತರಗತಿ ಫಲಿತಾಂಶ ಇಂದು ಪ್ರಕಟವಾಗಲಿದೆ. ಮಧ್ಯಾಹ್ನ ೧೨ ಗಂಟೆಗೆ ಸಿಬಿಎಸ್‌ಇ ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯವಾಗಲಿದೆ.

ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ಸಿಬಿಎಸ್‌ಇ 10 ನೇ ತರಗತಿಯ ಪರೀಕ್ಷೆ ನಡೆದಿರಲಿಲ್ಲ. ಆಂತರಿಕ ಮೌಲ್ಯ ಮಾಪನ, ಪ್ರಾಯೋಗಿಕ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ಫಲಿತಾಂಶವನ್ನು ಪ್ರಕಟಿಸಲಾಗುತ್ತಿದೆ.

ವಿದ್ಯಾರ್ಥಿಗಳು ಸಿಬಿಎಸ್‌ಇ ಅಧಿಕೃತ ವೆಬ್‌ಸೈಟ್‌ ಮೂಲಕ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ. ಅಲ್ಲದೇ ವಿದ್ಯಾರ್ಥಿಗಳು ತಮ್ಮ ಸಿಬಿಎಸ್ಇ ಬೋರ್ಡ್ ಫಲಿತಾಂಶವನ್ನು ಎಸ್ಎಂಎಸ್ ಮೂಲಕ ಅಥವಾ ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್ ಸಿಸ್ಟಮ್ (ಐವಿಆರ್ಎಸ್) ಅಥವಾ ಕರೆ ಮೂಲಕ ಪರಿಶೀಲಿಸಬಹುದು. ಸಿಬಿಎಸ್ಇ 10 ರೋಲ್ ನಂಬರ್‌ ದಿನಾಂಕ ಶಾಲಾ ಸಂಖ್ಯೆ ಕೇಂದ್ರ ಸಂಖ್ಯೆ ಟೈಪ್ ಮಾಡಿ ಮತ್ತು ಅದನ್ನು 7738299899 ಕಳುಹಿಸಿದರೆ ಫಲಿತಾಂಶ ಲಭ್ಯವಾಗಲಿದೆ.

Comments are closed.