ರಶ್ಮಿಕಾ ಮಂದಣ್ಣ (Rashmika Mandanna) ದೇಶದ ಬಹುಭಾಷಾ ಸಿನಿತಾರೆಯಾಗಿ ಮಿಂಚುತ್ತಿರುವ ಈ ಅಪ್ಪಟ ಕನ್ನಡತಿಗೆ ಬ್ರೇಕ್ ಕೊಟ್ಟಿದ್ದು ಸ್ಯಾಂಡಲ್ ವುಡ್ ನ ಕಿರಿಕ್ ಪಾರ್ಟಿ ಸಿನಿಮಾ. ಕಿರಿಕ್ ಪಾರ್ಟಿ ಬಳಿಕ ಕನ್ನಡದ ಗಡಿ ದಾಟಿದ ರಶ್ಮಿಕಾ ಈಗ ತಮಿಳು,ತೆಲುಗು ಹಾಗೂ ಹಿಂದಿಯ ಬ್ಯುಸಿ ನಟಿ. ಸಾಲು ಸಾಲು ಸಿನಿಮಾದಲ್ಲಿ ನಟಿಸುತ್ತಿರುವ ರಶ್ಮಿಕಾ ಆಗಾಗ ವಿವಾದದಿಂದ ಸುದ್ದಿಯಾಗೋದು ಕಾಮನ್. ಅದರಲ್ಲೂ ರಶ್ಮಿಕಾ ತಾವು ಬಣ್ಣದ ಲೋಕಕ್ಕೆ ಕಾಲಿಟ್ಟ (sandalwood)ಭಾಷೆ ಕನ್ನಡವನ್ನೇ ಮರೆಯೋ ಮೂಲಕ ಪ್ರತಿಭಾರಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ.
ರಶ್ಮಿಕಾ ಮಂದಣ್ಣ ಒಂದು ಕಾಲದ ಕರ್ನಾಟಕದ ಕ್ರಶ್ ಎಂದು ಹೆಸರಾದವರು. ಆದರೆ ಕನ್ನಡದ ಗಡಿ ದಾಟುತ್ತಿದ್ದಂತೆ ನ್ಯಾಶನಲ್ ಕ್ರಶ್ ಎನ್ನಿಸಿದ ರಶ್ಮಿಕಾ ಇತ್ತೀಚಿಗೆ ಕನ್ನಡವನ್ನು, ಕನ್ನಡಿಗರನ್ನು ಮರೆತು ಬಿಟ್ಟಿದ್ದಾರೆ. ಇದಕ್ಕೆ ಈಗಾಗಲೆ ಹಲವು ಭಾರಿ ರಶ್ಮಿಕಾ ತಮ್ಮ ಮಾತುಕತೆ ಮೂಲಕ ಸಾಕ್ಷಿ ಒದಗಿಸಿದ್ದಾರೆ. ಇದೀಗ ಮತ್ತೊಮ್ಮೆ ರಶ್ಮಿಕಾ ತಮ್ಮ ಫೆವರಿಟ್ ಹೀರೋ ಯಾರು ಎಂಬ ಪ್ರಶ್ನೆಗೆ ಕನ್ನಡಿಗರೆಲ್ಲರನ್ನೂ ಮರೆತು ಬೇರೆ ಭಾಷೆಯ ಹೀರೋಗಳನ್ನೇ ನೆನಪಿಸಿಕೊಳ್ಳುವ ಮೂಲಕ ಕನ್ನಡಿಗರ ಅಭಿಮಾನಕ್ಕೆ ಕಿಚ್ಚು ಹಚ್ಚಿದ್ದಾರೆ.

ಇತ್ತೀಚಿಗೆ ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ರಶ್ಮಿಕಾಗೆ ನಿಮ್ಮ ಫೆವರಿಟ್ ನಾಯಕ ಯಾರು ಎಂಬ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಮೊದಲು ಯಾರು ಇಲ್ಲ ಎಂದು ಉತ್ತರಿಸಿದ ರಶ್ಮಿಕಾ ಬಳಿಕ ಅಮಿತಾಬ್ ಬಚ್ಚನ್ ಎಂದು ಉತ್ತರಿಸಿದ್ದಾರೆ. ಇಂಡಿಯನ್ ಫಿಲ್ಮ್ ನಲ್ಲಿ ನಿಮ್ಮ ನೆಚ್ಚಿನ ನಾಯಕ ಯಾರು ಎಂಬ ಪ್ರಶ್ನೆಗೆ ರಶ್ಮಿಕಾ, ಬಾಲಿವುಡ್ ನಲ್ಲಿ ರಣಬೀರ್ ಕಪೂರ್, ತೆಲುಗಿನಲ್ಲಿ ಅಲ್ಲು ಅರ್ಜುನ್ , ಮಲೆಯಾಳಂನಲ್ಲಿ ಫಹಾದ್, ತಮಿಳಿನಲ್ಲಿ ವಿಜಯ್ ಸೇತುಪತಿ ಎಂದು ಉತ್ತರಿಸಿದ್ದಾರೆ.

ಈ ಇಂಟರವ್ಯೂ ನೋಡಿದ ಕನ್ನಡಿಗರಿಗೆ ಹಾಗಿದ್ರೇ ಕನ್ನಡದಲ್ಲಿ ರಶ್ಮಿಕಾಗೆ ಇಷ್ಟವಾಗೋ ನಾಯಕರೇ ಇಲ್ವಾ? ಅಥವಾ ಉದ್ದೇಶಪೂರ್ವಕವಾಗಿ ರಶ್ಮಿಕಾ ಕನ್ನಡಿಗರನ್ನು ಕಡೆಗಣಿಸುತ್ತಿ ದ್ದಾರಾ ಎಂಬ ಪ್ರಶ್ನೆ ಮೂಡಿದೆ. ಇದಲ್ಲದೇ ಅಲ್ಲೂ ಅರ್ಜುನ್ ಬಗ್ಗೆ ಸಾಕಷ್ಟು ಹೊಗಳಿಕೆ ಮಾತನಾಡಿರುವ ರಶ್ಮಿಕಾ ಅವರು ನನ್ನ ಪಾಲಿಗೆ ಒಂಥರಾ ವೆಲ್ ವಿಷರ್ ಇದ್ದಂತೆ.ನಾನು ಸಿನಿಮಾ ಸೇರಿದಂತೆ ಹಲವು ವಿಚಾರದ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಹಾಡಿ ಹೊಗಳಿದ್ದಾರೆ.

ಆದರೆ ಇಂಟರವ್ಯೂ ದಲ್ಲೆಲ್ಲೂ ಕನ್ನಡದ ಬಗ್ಗೆ ರಶ್ಮಿಕಾ ಚಕಾರ ಎತ್ತಿಲ್ಲ. ರಶ್ಮಿಕಾ ಈ ನಡೆ ಕನ್ನಡಿಗರನ್ನು ಕೆರಳಿಸಿದೆ. ಕನ್ನಡದಲ್ಲಿ ಅಂಜನಿಪುತ್ರ,ಪೊಗರು,ಕಿರಿಕ್ ಪಾರ್ಟಿ, ಚಮಕ್, ಯಜಮಾನ ಸೇರಿದಂತೆ ಹಲವು ಸಿನಿಮಾದಲ್ಲಿ ನಟಿಸಿದ್ದಾರೆ. ಹೀಗಿದ್ದರೂ ಸಿನಿಮಾದಲ್ಲಿ ತಮಗೆ ಮೊದಲ ಅವಕಾಶ ಕೊಟ್ಟ ಕನ್ನಡವನ್ನೇ ಮರೆತಿರೋ ರಶ್ಮಿಕಾ ಪುನೀತ್ ರಾಜ್ ಕುಮಾರ್ ನಿಧನದ ವೇಳೆಯೂ ಕನಿಷ್ಠ ಗೌರವವನ್ನು ಸಲ್ಲಿಸಿರಲಿಲ್ಲ. ಹತ್ತಿದ ಏಣಿ ಒದೆಯೋ ರಶ್ಮಿಕಾ ಬುದ್ಧಿ ಈಗ ಟೀಕೆಗೆ ಗುರಿಯಾಗಿದೆ.
ಇದನ್ನೂ ಓದಿ : Rashmika : ಶರ್ಟ್ ಬಿಚ್ಚೋದ್ಯಾಕೆ ಹುಡುಗರು ? ರಶ್ಮಿಕಾ ಪ್ರಶ್ನೆಗೆ ಬೆಚ್ಚಿದ ಪಡ್ಡೆ ಹೈಕಳು
ಇದನ್ನೂ ಓದಿ : ಕೋಟಿ ಒಡತಿ ಕೊಡಗಿನ ಬೆಡಗಿ…!! ರಶ್ಮಿಕಾ ಮಂದಣ್ಣ ಆಸ್ತಿಯ ಮೊತ್ತ ಎಷ್ಟು ಗೊತ್ತಾ?!
( Rashmika Mandanna away from Sandalwood)