Pakistan : ಮೊಸರು ತರಲೆಂದು ಮಾರ್ಗಮಧ್ಯದಲ್ಲಿ ರೈಲನ್ನೇ ನಿಲ್ಲಿಸಿದ ಚಾಲಕ..!

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮಾರ್ಗ ಮಧ್ಯದಲ್ಲಿ ರೈಲುಗಳನ್ನ ನಿಲ್ಲಿಸೋದನ್ನು ಕೇಳಿರುತ್ತೀರಾ. ಅಪಘಾತಗಳನ್ನು ತಪ್ಪಿಸುವ ಸಲುವಾಗಿ ಅನೇಕ ಕಡೆಗಳಲ್ಲಿ ಈ ರೀತಿ ಮಾಡಲಾಗಿದೆ. ಆದರೆ ಪಾಕಿಸ್ತಾನದಲ್ಲಿ (Pakistan )ಮಾತ್ರ ಮೊಸರು ತರಬೇಕು ಎಂಬ ಕಾರಣಕ್ಕೆ ಮಾರ್ಗ ಮಧ್ಯದಲ್ಲಿ ರೈಲನ್ನು ನಿಲ್ಲಿಸಲಾಗಿದೆ..! ಈ ರೀತಿ ಬೇಜವಾಬ್ದಾರಿ ತೋರಿದ ರೈಲು ಚಾಲಕ ಹಾಗೂ ಆತನ ಸಹಾಯಕನನ್ನು ಇದೀಗ ಸೇವೆಯಿಂದ ವಜಾಗೊಳಿಸಳಾಗಿದೆ. ಸೋಮವಾರಂದು ಈ ಘಟನೆ ನಡೆದಿದ್ದು ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋ ವೈರಲ್​ ಆದ ಬಳಿಕ ಪಾಕಿಸ್ತಾನ ರೈಲು ಇಲಾಖೆ ಈ ಕ್ರಮ ಕೈಗೊಂಡಿದೆ.


ಕನ್ಹಾ ರೈಲು ನಿಲ್ದಾಣದ ಸಮೀಪದಲ್ಲಿ ರೈಲನ್ನು ನಿಲ್ಲಿಸಲಾಗಿದೆ. ಲಾಹೋರ್​​ನಿಂದ ಹೊರಟಿದ್ದ ಈ ರೈಲು ಕರಾಚಿಯತ್ತ ಸಂಚರಿಸುತ್ತಿತ್ತು ಎನ್ನಲಾಗಿದೆ.
ವಿಡಿಯೋದಲ್ಲಿ ರೈಲು ಚಾಲಕ ಹಾಗೂ ಆತನ ಸಹಾಯಕ ಮೊಸರನ್ನು ಬೀದಿ ಬದಿಯ ಅಂಗಡಿಯೊಂದರಲ್ಲಿ ಕೊಂಡು ಬಳಿಕ ರೈಲು ಹತ್ತೋದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದಂತೆಯೇ ನೆಟ್ಟಿಗರು ಪಾಕ್​​ ರೈಲ್ವೆ ಇಲಾಖೆಗೆ ಈ ಘಟನೆ ಸಂಬಂಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.


ನೆಟ್ಟಿಗರೊಬ್ಬರು ಈತ ಮೊಸರು ತರೋಕೆ ರೈಲನ್ನೇ ನಿಲ್ಲಿಸುತ್ತಾನೆ ಅಂದರೆ ಸಿಹಿ ತಿಂಡಿ ತರಲು ವಿಮಾನದಲ್ಲಿಯೇ ಹೋಗುತ್ತಾನೆ ಎನಿಸುತ್ತೆ ಎಂದು ವ್ಯಂಗ್ಯವಾಗಿಡಿದ್ದರು.


ವಿಡಿಯೋಗೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಪಾಕಿಸ್ತಾನ ರೈಲ್ವೆ ಸಚಿವ ಅಜಾಮ್ ಖಾನ್​ ಸ್ವಾತಿ ರೈಲು ಚಾಲಕ ರಾಣಾ ಮೊಹಮ್ಮದ್​ ಶೆಹಜಾದ್​ ಹಾಗೂ ಆವರ ಸಹಾಯಕ ಇಫ್ತಿಕಾರ್​ ಹುಸೇನ್​​​ರನ್ನು ಅಮಾನತುಗೊಳಿಸುವಂತೆ ಲಾಹೋರ್​ ರೈಲ್ವೆ ಇಲಾಖೆಗೆ ಸೂಚನೆ ನೀಡಿದ್ದಾರೆ.


ವೈಯಕ್ತಿಕ ಕೆಲಸಕ್ಕೆಂದು ಸಾರ್ವಜನಿಕ ಆಸ್ತಿಯನ್ನು ಈ ರೀತಿ ಬಳಕೆ ಮಾಡೋದನ್ನು ಸಹಿಸಲು ಸಾಧ್ಯವೇ ಇಲ್ಲ. ಈ ರೀತಿ ಮಾರ್ಗ ಮಧ್ಯದಲ್ಲಿ ರೈಲನ್ನು ನಿಲ್ಲಿಸುವುದು ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಸೂಕ್ತವಾಗಿಲ್ಲ.ಪ್ರಯಾಣಿಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆಯಾಗಿದೆ. ಸುರಕ್ಷತೆ ಜೊತೆ ಹೊಂದಾಣಿಕೆ ಮಾಡಿಕೊಳ್ಳುವಂತಹ ಯಾವುದೇ ನಡೆಯನ್ನು ನಾವು ಸಹಿಸೋದಿಲ್ಲ ಎಂದು ಅಜಾಮ್​ ಖಾನ್​ ಹೇಳಿದ್ದಾರೆ.

Viral video: Pakistan driver stops train to buy dahi, suspended

ಇದನ್ನು ಓದಿ : Google list for top searches : 2021 ನೇ ಸಾಲಿನ ಗೂಗಲ್​ನ ಟಾಪ್​ 10 ಹುಡುಕಾಟದ ಲಿಸ್ಟ್​ ಇಲ್ಲಿದೆ ನೋಡಿ

Comments are closed.