ಸೋಮವಾರ, ಏಪ್ರಿಲ್ 28, 2025
HomeCinemaRashmika mandanna:ಕಾಲಿವುಡ್ ನಲ್ಲಿ ಸ್ಯಾಂಡಲ್ ವುಡ್ ಬ್ಯೂಟಿ…! ಮತ್ತೆ ತಮಿಳಿನಲ್ಲಿ ಮಿಂಚಲಿದ್ದಾರೆ ರಶ್ಮಿಕಾ ಮಂದಣ್ಣ…!!

Rashmika mandanna:ಕಾಲಿವುಡ್ ನಲ್ಲಿ ಸ್ಯಾಂಡಲ್ ವುಡ್ ಬ್ಯೂಟಿ…! ಮತ್ತೆ ತಮಿಳಿನಲ್ಲಿ ಮಿಂಚಲಿದ್ದಾರೆ ರಶ್ಮಿಕಾ ಮಂದಣ್ಣ…!!

- Advertisement -

ಸ್ಯಾಂಡಲ್ ವುಡ್ ನಿಂದ ಆರಂಭಿಸಿ, ಟಾಲಿವುಡ್, ಕಾಲಿವುಡ್ ದಾಟಿ ಈಗ ಬಾಲಿವುಡ್ ನಲ್ಲಿ ಸದ್ದು ಮಾಡ್ತಿರೋ ಕೊಡಗಿನ ಕುವರಿ, ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದಾರೆ.

ಮೊನ್ನೆ ಮೊನ್ನೆಯಷ್ಟೇ ಚೊಚ್ಚಲ ಬಾಲಿವುಡ್ ಸಿನಿಮಾ ಮುಗಿಸಿರೋ ಮತ್ತೆ ಕಾಲಿವುಡ್ ಗೆ ಎಂಠ್ರಿ ಕೊಡಲಿದ್ದಾರಂತೆ. ತಮಿಳಿನ ಬಹುಬೇಡಿಕೆಯ ನಟ ಶಿವ್ ಕಾರ್ತಿಕೇಯನ್ ಹೊಸ ಸಿನಿಮಾಗೆ ಕಿರಿಕ್ ಬ್ಯೂಟಿ ನಾಯಕಿಯಾಗಲಿದ್ದಾರಂತೆ.

ತಮಿಳು ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗಲಿರೋ ಈ ಸಿನಿಮಾಗೆ ಎರಡು ಭಾಷೆಗೆ ಫ್ಯಾಮಿಲಿಯರ್ ಮುಖ ಬೇಕು ಅನ್ನೋ ಕಾರಣಕ್ಕೆ ರಶ್ಮಿಕಾಗೆ ಮಣೆ ಹಾಕಲಾಗಿದೆಯಂತೆ.

ತೆಲುಗಿನಲ್ಲಿ ಜಾತಿರತ್ನಾಲು ಸಿನಿಮಾ ನಿರ್ಮಿಸಿದ್ದ ಅನುದೀಪ್ ನಿರ್ದೇಶನದಲ್ಲಿ ಶಿವ ಕಾರ್ತಿಕೇಯನ್ ಸಿನಿಮಾ ನಿರ್ಮಾಣವಾಗುತ್ತಿದ್ದು, ಅನಿರುದ್ಧ ರವಿಚಂದರ್ ಸಿನಿಮಾಗೆ ಸಂಗೀತ ನೀಡಲಿದ್ದಾರೆ.

ಸದ್ಯ ರಶ್ಮಿಕಾ ನಟನೆಯ ಕನ್ನಡದ ಪೊಗರು ಸಿನಿಮಾ ತೆರೆಕಂಡಿದ್ದರೇ, ತಮಿಳು ಸಿನಿಮಾ ಸುಲ್ತಾನ್ ಕೂಡ ಹಿಟ್ ಆಗಿದೆ. ಇದರೊಂದಿಗೆ ತೆಲುಗಿನ ಪುಷ್ಪ ಸಿನಿಮಾಕೂಡ ಶೂಟಿಂಗ್ ಆರಂಭಿಸಿದ್ದು, ಹಿಂದಿಯ ಮಿಷನ್ ಮಜ್ನು ಸೇರಿದಂತೆ ಹಲವು ಚಿತ್ರಗಳಲ್ಲಿ ರಶ್ಮಿಕಾ ಬ್ಯುಸಿಯಾಗಿದ್ದಾರೆ.

RELATED ARTICLES

Most Popular