3rd Wave : 24 ಗಂಟೆಯಲ್ಲಿ 22,000 ಮಂದಿಗೆ ಸೋಂಕು : ಕೇರಳದಲ್ಲಿ ಶುರುವಾಯ್ತಾ ಕೊರೊನಾ ಮೂರನೇ ಅಲೆ

ಕೇರಳ : ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ. ಆದರೆ ದೇಶದಲ್ಲಿ ಸದ್ದಿಲ್ಲದೇ ಕೊರೊನಾ ಮೂರನೇ ಅಲೆ ಶುರುವಾಗಿದೆಯಾ ಅನ್ನೋ ಅನುಮಾನ ವ್ಯಕ್ತವಾಗುತ್ತಿದೆ. ಯಾಕೆಂದ್ರೆ ಕೇರಳದಲ್ಲಿ ಕಳೆದ 24 ಗಂಟೆಗಳಲ್ಲಿ 22,000 ಹೊಸ ಪ್ರಕರಣಗಳನ್ನು ವರದಿಯಾಗಿದೆ.

ಕೇರಳದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಭಾರಿ ಏರಿಕೆ ಕಂಡುಬಂದಿದೆ. ದಿನೇ ದಿನೇ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ಮೂರನೇ ಅಲೆ ಕೇರಳದಲ್ಲಿ ಆರಂಭವಾಗಿದೆಯಾ ಅನ್ನೋ ಆತಂಕ ಇದೀಗ ಎದುರಾಗಿದೆ. ದೇಶದಲ್ಲಿ ಒಟ್ಟು 43,654 ಹೊಸ ಪ್ರಕರಣ ದಾಖಲಾಗಿದೆ. ಈ ಪೈಕಿ ಕೇರಳದ ಕೊರೊನಾ ಸಂಖ್ಯೆಯೇ 22,129 ಆಗಿದೆ.

ಕೇರಳದಲ್ಲಿ ಸದ್ಯ ಸಕ್ರೀಯ ಪ್ರಕರಣಗಳ ಸಂಖ್ಯೆ1,45,371 ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 1,79,130 ​​ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಇದರಲ್ಲಿ 22,129 ಮಂದಿಗೆ ಸೋಂಕು ದೃಢಪಟ್ಟಿದೆ. ಇನ್ನು ಕೊರೊನಾ ಟೆಸ್ಟ್ ಪಾಸಿಟಿವಿಟಿ ದರ (ಟಿಪಿಆರ್) ಶೇ 12.35 ರಷ್ಟು ಏರಿಕೆ ಕಂಡುಬಂದಿದೆ.

ಕೇರಳದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ಟೆಸ್ಟಿಂಗ್‌ ಪ್ರಮಾಣವನ್ನು ಹೆಚ್ಚಳ ಮಾಡಲಾಗುತ್ತಿದೆ. ಕಳೆದೊಂದು ವಾರದಲ್ಲಿಯೇ ಕೇರಳ ಸುಮಾರು ಮೂರು ಲಕ್ಷಕ್ಕೂ ಅಧಿಕ ಜನರನ್ನು ಕೊರೊನಾ ತಪಾಸಣೆಗೆ ಒಳಪಡಿಸಿದೆ.

ಮಲಪ್ಪುರಂ ಜಿಲ್ಲೆಯಲ್ಲಿ 4,037, ತ್ರಿಶೂರ್ನಲ್ಲಿ 2,623, ಕೋಝಿಕೋಡ್‌ 2,397, ಎರ್ನಾಕುಲಂ 2,352 ಮತ್ತು ಪಾಲಕ್ಕಾಡ್‌ ನಲ್ಲಿ 2,115 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಕೊರೊನಾದಿಂದ ಗುಣಮುಖರಾದ ಹಿನ್ನೆಲೆಯಲ್ಲಿ 13,415 ರೋಗಿಗಳನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ. 271 ಸ್ಥಳೀಯ ಸ್ವ-ಆಡಳಿತ ಮಂಡಳಿಗಳು ಶೇಕಡಾ 15 ರ ಟಿಪಿಆರ್‌ಗಿಂತ ಮೇಲಿವೆ, 355 ಎಲ್‌ಎಸ್‌ಜಿಡಿಗಳು ಶೇಕಡಾ 10 ರಿಂದ 15 ರ ನಡುವೆ ಟಿಪಿಆರ್ ಹೊಂದಿವೆ.

Comments are closed.