Sandalwood Remuneration : ಸಂಭಾವನೆ ತಾರತಮ್ಯದ ವಿರುದ್ಧ ಸ್ಯಾಂಡಲ್ ವುಡ್ ನಟಿಮಣಿಯರ ಸಮರ

ಸ್ಯಾಂಡಲ್ ವುಡ್, ಬಾಲಿವುಡ್, ಟಾಲಿವುಡ್ ಹೀಗೆ ಸಿನಿಮಾ ಯಾವ ಭಾಷೆಯದ್ದೇ ಇರಲಿ, ಸಮಸ್ಯೆಗಳು ಮಾತ್ರ ಒಂದೇ. ಬಾಲಿವುಡ್ ನಟಿಮಣಿಯರ ಬಳಿಕ ಈಗ ಸ್ಯಾಂಡಲ್ ವುಡ್ ಸುಂದರಿಯರು ಸಂಭಾವನೆ ಹಾಗೂ ಚಂದನವನದಲ್ಲಿ ತಮ್ಮನ್ನು ನಡೆಸಿಕೊಳ್ಳುವ ರೀತಿಯ ಬಗ್ಗೆ ಧ್ವನಿ ಎತ್ತಿದ್ದಾರೆ. ಅದಿತಿ, ಅಮೃತಾ‌ ಅಯ್ಯಂಗಾರ್ ಹಾಗೂ ಖುಷಿ ಪರೋಕ್ಷವಾಗಿ ತಮ್ಮನ್ನು ಸಿನಿಮಾರಂಗ ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ (Sandalwood Remuneration ) ಅಸಮಧಾನ ವ್ಯಕ್ತಪಡಿಸಿದ್ದಾರೆ.

ಮಹಿಳಾ ದಿನಾಚರಣೆ ಅಂಗವಾಗಿ ಯೂಟ್ಯೂಬ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸ್ಯಾಂಡಲ್ ವುಡ್ ನಲ್ಲಿ ನಟಿಮಣಿಯರನ್ನು ನಡೆಸಿಕೊಳ್ಳುವ ರೀತಿಯ ಬಗ್ಗೆ ನಟಿ ಅದಿತಿ ಪ್ರಭುದೇವ (Aditi Prabhudeva), ಅಮೃತಾ ಅಯ್ಯಂಗಾರ, ಖುಷಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನಟಿನಣಿಯರು ಕನ್ನಡದಲ್ಲಿ ಮಾತನಾಡಿದರೇ ಬೇಡಿಕೆ ಮತ್ತು ಸಂಭಾವನೆ ಕಡಿಮೆ. 20 ಜನರ ಎದುರು ಸೀನ್ ಗೇ ಬೇಕು ಅಂತಾದರೇ ಹೀರೋನ ತಬ್ಬಿಕೊಂಡಿರುತ್ತೇವೆ. ಹೊಡೆಸಿಕೊಳ್ಳೋ ಸೀನ್ ನಲ್ಲಿ ಹೊಡೆಸಿಕೊಂಡಿರುತ್ತೇವೆ.‌ ಪೆಟ್ಟು ಕೂಡ ಸರಿಯಾಗೇ ಬಿದ್ದಿರುತ್ತೆ. ಆದರೆ ಸಂಭಾವನೆ ಕೊಡಲು ಮಾತ್ರ ಹೆಣ್ಣುಮಕ್ಕಳು ಅನ್ನೋ ತಾತ್ಸಾರ ಯಾಕೆ ಎಂದು ಪ್ರಶ್ನಿಸಿದ್ದಾರೆ.

ಇನ್ನೂ ನಟಿ ಅಮೃತಾ ಅಯ್ಯಂಗಾರ ಕೂಡ ಮುಕ್ತವಾಗಿ ಮಾತನಾಡಿದ್ದು, ನಾವು ಮಾಡೋ ನಟನೆ, ನಮ್ಮ ಶ್ರಮ ಮಾತ್ರ ಕೌಂಟ್ ಆಗಬೇಕು. ಅದರೆ ಇಲ್ಲಿ ನಮಗೆ ಮದುವೆಯಾಗಿದ್ಯಾ ? ನಾವು ಕಮಿಟ್ ಆಗಿದ್ದೇವಾ ಎಂಬ ಸಂಗತಿಗಳು ಮುಖ್ಯವಾಗುತ್ತವೆ. ಅದ್ಯಾಕೆ ಅನ್ನೋದು ಅರ್ಥ ಆಗಲ್ಲ. ಹೀರೋಗಳು ಮದುವೆ ಮಕ್ಕಳು ಆದ ಮೇಲೂ ನಟಿಸಬಹುದು. ಆದರೆ ಹೀರೋಯಿನ್ ಗಳು ‌ಮದುವೆಯಾದರೇ ಏನು ಸಮಸ್ಯೆ.‌ ಮದುವೆಯಾದ ಮೇಲೆ ನಟಿಸೋದು ತಪ್ಪಾ ಎಂದಿದ್ದಾರೆ.

ದಿಯಾ ಖ್ಯಾತಿಯ ನಟಿ ಖುಷಿ ಕೂಡ ಮಾತನಾಡಿದ್ದು, ನಟರಿಗೆ ನೀಡುವಷ್ಟು ಸಂಭಾವನೆ ನಟಿಮಣಿಯರಿಗೆ ಯಾಕೆ ಕೊಡಲ್ಲ ಎಂದು ಖುಷಿ ನೇರವಾಗಿ ಅಸಮಧಾನ ತೋಡಿ ಕೊಂಡಿದ್ದಾರೆ. ಪ್ರಸಿದ್ಧ ನಿರೂಪಕಿ ಅನುಶ್ರೀ ಯೂಟ್ಯೂಬ್ ಚಾನೆಲ್ ಗೆ‌ ಮಹಿಳಾ ದಿನಾಚರಣೆಯಂದು ನೀಡಿದ ಸಂದರ್ಶನದಲ್ಲಿ ಈ ಎಲ್ಲ ವಿಚಾರಗಳನ್ನು ನಟಿಯರು‌ ಹಂಚಿಕೊಂಡಿದ್ದಾರೆ.

ನಟಿಯರು ಸಂಭಾವನೆ ಬಗ್ಗೆ ಧ್ವನಿ ಎತ್ತಿರೋದು ಇದೇ ಮೊದಲಲ್ಲ.‌ ಬಹುಭಾಷಾ ನಟಿ ಪೂಜಾ ಹೆಗ್ಡೆ ಕೂಡಾ ಹೀರೋಯಿನ್ ಗಳಿಗೆ ಕಡಿಮೆ ಸಂಭಾವನೆ ಕೊಡೋದು ಯಾಕೆ ಅನ್ನೋದನ್ನು ಹಿಂದೆಯೇ ಪ್ರಶ್ನೆ ಮಾಡಿದ್ದರು. ಮಾತ್ರವಲ್ಲ ನಟಿ ಪ್ರಿಯಾಮಣಿ ಕೂಡಾ, ನಾವು ನಟರಿಗಿಂತ ಹೆಚ್ಚು ಶ್ರಮವಹಿಸಿ ನಟಿಸುತ್ತೇವೆ. ಆದರೂ ಎಲ್ಲಾ ಭಾಷೆಯಲ್ಲೂ ಸಂಭಾವನೆ ತಾರತಮ್ಯವಿದೆ ಎಂಬ ನೋವು ಹಾಗೂ ಬೇಸರದ ವಿಚಾರ ಶೇರ್ ಮಾಡಿಕೊಂಡಿದ್ದರು.

ಇದನ್ನೂ ಓದಿ : Puneet Raj Kumar : ಶಿವರಾಜ್‌ ಕುಮಾರ್ ವೇದ ಸಿನಿಮಾದಲ್ಲಿ ಪವರ್ ಸ್ಟಾರ್ ಪುನೀತ್

ಇದನ್ನೂ ಓದಿ : Inamdar : ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡುತ್ತಿದೆ ಇನಾಮ್ದಾರ್‌

(Sandalwood Remuneration Discrimination says Aditi Prabhudeva, Kushee Ravi Amrutha Iyengar)

Comments are closed.