ಸೋಮವಾರ, ಏಪ್ರಿಲ್ 28, 2025
HomeCinemaಮಂಡೇ ಮಾರ್ನಿಂಗ್….! ಅಭಿಮಾನಿಗಳಿಗೆ ಸ್ಯಾಂಡಲ್ ವುಡ್ ಕ್ಯೂಟ್ ಅಮ್ಮ-ಮಗನ ದರ್ಶನ…!!

ಮಂಡೇ ಮಾರ್ನಿಂಗ್….! ಅಭಿಮಾನಿಗಳಿಗೆ ಸ್ಯಾಂಡಲ್ ವುಡ್ ಕ್ಯೂಟ್ ಅಮ್ಮ-ಮಗನ ದರ್ಶನ…!!

- Advertisement -

ಪತಿಯ ಪ್ರತಿರೂಪದಂತಿರೋ ಮಗನ ಆರೈಕೆಯಲ್ಲಿ ತೊಡಗಿರೋ ನಟಿ ಮೇಘನಾ ಅಭಿಮಾನಿಗಳಿಗಾಗಿ ಸದಾ ಕ್ಯೂಟ್ ಜ್ಯೂನಿಯರ್ ಚಿರು ಪೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಮಂಡೇ ಮಾರ್ನಿಂಗ್ ಎಂಬ ಕ್ಯಾಪ್ಸನ್ ಜೊತೆ ಮೇಘನಾ ಹಂಚಿಕೊಂಡಿರೋ ಪೋಟೋ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.

10 ತಿಂಗಳ ಕಂದನಾಗಿರೋ ಜ್ಯೂನಿಯರ್ ಚಿರುಗೆ ಇನ್ನು ನಾಮಕರಣವಾಗಿಲ್ಲ. ಹೀಗಾಗಿ ಜ್ಯೂನಿಯರ್ ಚಿರು ಅನ್ನೋ ಹೆಸರಿನಲ್ಲೇ ಮುದ್ದು ಕಂದ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿದ್ದಾನೆ. ಸದಾ ಮಗನೊಂದಿಗೆ ಒಂದಿಲ್ಲೊಂದು ಸೆಲ್ಪಿ ಹಂಚಿಕೊಳ್ಳೋ ಮೇಘನಾ ಸೋಮವಾರ ಬೆಳ್ಳಂಬೆಳಗ್ಗೆ ಅಭಿಮಾನಿಗಳಿಗೆ ಕ್ಯೂಟ್ ಜ್ಯೂನಿಯರ್ ಚಿರು ದರ್ಶನ ಮಾಡಿಸಿದ್ದಾರೆ.

ಮಂಡೇ ಮಾರ್ನಿಂಗ್ ಅನ್ನೋ ಕ್ಯಾಪ್ಸನ್ ಜೊತೆ ಆಗಷ್ಟೇ ಎದ್ದಿರೋ ಮಗನನ್ನು ತಂಬಿಕೊಂಡಿರೋ ಪೋಟೋವನ್ನು ನ್ಯೂಮಮ್ಮಿ ಮೇಘನಾ ಶೇರ್ ಮಾಡಿದ್ದು, ಅಭಿಮಾನಿಗಳು ಕ್ಯೂಟ್ ಎಂದು ಕಮೆಂಟ್ ಮಾಡಿ ಶೇರ್ ಮಾಡಿಕೊಂಡು ಖುಷಿ ಪಡ್ತಿದ್ದಾರೆ.

ನಿನ್ನೆಯಷ್ಟೇ ಪ್ರೆಂಡ್ ಶಿಪ್ ಡೇ ಪೋಸ್ಟ್ ಹಾಕಿದ್ದ ಮೇಘನಾ, ಚಿರು ಗೆ ನೀನೆ ಇಂದು,ಎಂದೂ ನನ್ನ ಬೆಸ್ಟ್  ಪ್ರೆಂಡ್ ಎಂಬ ಬರಹದೊಂದಿಗೆ ಸ್ನೇಹಿತರ ದಿನಾಚರಣೆಯ ಶುಭಾಶಯ ಕೋರಿದ್ದರು. ಇದರ ಬೆನ್ನಲ್ಲೇ ಮುದ್ದು ಮಗನ ಜೊತೆ ಖುಷಿಯ ಕ್ಷಣಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಸದ್ಯ ನಟನೆಯಿಂದ ಬ್ರೇಕ್ ಪಡೆದಿರುವ ಮೇಘನಾ ಜಾಹೀರಾತು ಶೂಟಿಂಗ್ ಗಳಲ್ಲಿ ತೊಡಗಿಸಿಕೊಂಡಿದ್ದು, ಒಳ್ಳೆಯ ಪ್ರಾಜೆಕ್ಟ್ ಗಳು ಸಿಗುತ್ತಿದ್ದಂತೆ ಮತ್ತೆ ನಟನೆಗೆ ಮರಳೋದಾಗಿ ಹೇಳಿಕೊಂಡಿದ್ದಾರೆ.  

RELATED ARTICLES

Most Popular