ಸೋಮವಾರ, ಏಪ್ರಿಲ್ 28, 2025
HomeCinemaPuneeth Raj Kumar last film : ಪುನೀತ್ ರಾಜ್ ಕುಮಾರ್ ಕೊನೆ ಸಿನಿಮಾದಲ್ಲಿ ಅಣ್ಣಾವ್ರ...

Puneeth Raj Kumar last film : ಪುನೀತ್ ರಾಜ್ ಕುಮಾರ್ ಕೊನೆ ಸಿನಿಮಾದಲ್ಲಿ ಅಣ್ಣಾವ್ರ ಮಕ್ಕಳು

- Advertisement -

ಕರುನಾಡಿನ ಮನೆಮಗ ಅಪ್ಪು ಇನ್ನಿಲ್ಲವಾಗಿ ತಿಂಗಳುಗಳೇ ಕಳೆಯುತ್ತಿದ್ದರೂ ಇನ್ನು ಕರುನಾಡಿನ ಜನತೆಯ ಮನೆ-ಮನಸ್ಸುಗಳಿಂದ ಅಪ್ಪು ನೆನಪು ದೂರಾಗಿಲ್ಲ.ಅಷ್ಟೇ ಅಲ್ಲ ಅಪ್ಪುವಿನ ಸಿನಿಮಾ, ಪುನೀತ್ ನಟನೆಯ ಹಾಡುಗಳನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರತೆಯಿಂದ ಕಾಯುತ್ತಲೇ ಇದ್ದಾರೆ. ಈ ಮಧ್ಯೆ ಅಪ್ಪು ಅಗಲಿಕೆಯ ಜೊತೆಗೆ ಅಣ್ಣಾವ್ರ ಮಕ್ಕಳನ್ನು ಒಂದೇ ಚಿತ್ರದಲ್ಲಿ ನೋಡಬೇಕೆಂಬ ಅಭಿಮಾನಿಗಳ ಕನಸು ಈಡೇರಲೇ ಇಲ್ಲ. ಈಗ ಈ ಎಲ್ಲ ದುಃಖಕ್ಕೆ ಈಗ ಉತ್ತರ ಸಿಕ್ಕಿದ್ದು ಅಪ್ಪು ಅಭಿನಯದ ( Puneeth Raj Kumar last film ) ಕೊನೆಯ ಚಿತ್ರದಲ್ಲಿ ತೆರೆಗೆ ಬರಲು ಸಿದ್ಧವಾಗಿರೋದು ಮಾತ್ರವಲ್ಲದೇ, ಅಣ್ಣಾವ್ರ ಮೂರು ಮಕ್ಕಳನ್ನು ಒಂದೇ ಸಿನಿಮಾದಲ್ಲಿ ನೋಡುವ ಅಭಿಮಾನಿಗಳ ಆಸೆ ಈಡೇರುವ ಸಿಹಿ ಸುದ್ದಿಯೂ ಸಿಕ್ಕಿದೆ.

ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಚಿತ್ರ ಜೇಮ್ಸ್ ಸಾಕಷ್ಟು ಕುತೂಹಲ ಮೂಡಿಸಿತ್ತು. ಈ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಪಾತ್ರವೂ ಸಖತ್ತಾಗಿ ಮೂಡಿಬಂದಿದೆ ಎನ್ನಲಾಗಿತ್ತು. ಆದರೆ ಜೇಮ್ಸ್ ತೆರೆಗೆ ಬರುವ ಮುನ್ನವೇ ಪುನೀತ್ ಅಗಲಿಕೆ ಚಿತ್ರತಂಡಕ್ಕೆ ಶಾಕ್ ನಂತೆ ಬಂದೆರೆಗಿತ್ತು. ಜೇಮ್ಸ್ ಚಿತ್ರದ ಶೂಟಿಂಗ್ ಮುಗಿದಿದ್ದರೂ ಡಬ್ಬಿಂಗ್ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದಿರಲಿಲ್ಲ.

ಹೀಗಾಗಿ ಪುನೀತ್ ನಿಧನದ ಬಳಿಕ ಸಿನಿಮಾಕ್ಕೆ ಡಬ್ಬಿಂಗ್ ಮಾಡೋದು ಯಾರು ಅನ್ನೋ ಪ್ರಶ್ನೆ ಕಾಡಿತ್ತು. ಆದರೆ ಚಿತ್ರತಂಡದ ಬೆಂಬಲಕ್ಕೆ ನಿಂತಿದ್ದ ಶಿವಣ್ಣ ಅಗತ್ಯ ಬಿದ್ದರೇ ತಾವೇ ಡಬ್ಬಿಂಗ್ ಮಾಡಿಕೊಡೋದಾಗಿ ಹೇಳಿದ್ದರು. ಇನ್ನು ಈ ಸಿನಿಮಾ ತೆರೆಗೆ ಬರಲು ಸಿದ್ಧತೆ ಆದರೂ ಅಣ್ಣಾವ್ರ ಮಕ್ಕಳನ್ನು ಒಂದೇ ಸಿನಿಮಾದಲ್ಲಿ ನೋಡಬೇಕೆಂಬ ಅಭಿಮಾನಿಗಳ ಕನಸು ಕನಸಾಗಿಯೇ ಉಳಿದು ಹೋಗಿತ್ತು. ಕೊನೆಗೆ ಅಭಿಮಾನಿಗಳ ಈ ನೋವಿಗೆ ಜೇಮ್ಸ್ ನಿರ್ದೇಶಕ ಚೇತನ್ ಕುಮಾರ್ ಉತ್ತರ ಕಂಡುಕೊಂಡಿದ್ದಾರೆ. ಜೇಮ್ಸ್ ಸಿನಿಮಾದ ವಿಶೇಷ ಪಾತ್ರದಲ್ಲಿ ರಾಘವೇಂದ್ರ್ ರಾಜ್ ಕುಮಾರ್ ಹಾಗೂ ಶಿವರಾಜ್ ಕುಮಾರ್ ಕಾಣಿಸಿಕೊಳ್ಳಲಿದ್ದು, ಪುನೀತ್ ಜೊತೆ ಸಹೋದರರನ್ನು ಒಟ್ಟಾಗಿ ತೋರಿಸಲು ನಿರ್ದೇಶಕ ಚೇತನ್ ಕುಮಾರ್ ವಿಶೇಷ ಪ್ರಯತ್ನ ಮಾಡಿದ್ದಾರೆ.

ಕನಕಪುರ ರಸ್ತೆಯ ಖಾಸಗಿ ರೆಸಾರ್ಟ್ ಯೊಂದರಲ್ಲಿ ಶಿವಣ್ಣ ಹಾಗೂ ರಾಘಣ್ಣ ಜೇಮ್ಸ್ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದರು. ಇಂದೇ ಚಿತ್ರತಂಡ ಮತ್ತೊಮ್ಮೆ ಶೂಟಿಂಗ್ ನಡೆಸಿ ಪುನೀತ್ ಅನುಪಸ್ಥಿತಿಯಲ್ಲಿ ಕುಂಬಳಕಾಯಿ ಒಡೆದಿದೆ‌. ಎಲ್ಲ ಅಂದುಕೊಂಡಂತೆ ಆದರೇ ಸಿನಿಮಾ ನಿರ್ಮಾಪಕ ಕಿಶನ್ ಕುಮಾರ್ ಸಿನಿಮಾವನ್ನು 2022 ರ ಮಾರ್ಚ್ ನ ಪುನೀತ್ ಹುಟ್ಟುಹಬ್ಬದಂದು ರಿಲೀಸ್ ಮಾಡಲು ಸಿದ್ಧವಾಗಿದ್ದಾರೆ. ಒಟ್ಟಿನಲ್ಲಿ ಪುನೀತ್ ರಾಜ್ ಕುಮಾರ್ ನಿಧನದ ಬಳಿಕವೂ ಅಭಿಮಾನಿಗಳ ಕನಸು ಈಡೇರಿದ್ದು, ಸದ್ಯದಲ್ಲೇ ಅಣ್ಣಾವ್ರ ಮಕ್ಕಳು ಒಟ್ಟಿಗೆ ತೆರೆಗೆ ಬರಲಿದ್ದಾರೆ.

ಇದನ್ನೂ ಓದಿ : ಚಿತ್ತಾರದ ಬೆಡಗಿ ಅಮೂಲ್ಯ ಸೀಮಂತ: ಪೋಟೋಸ್ ವೈರಲ್

ಇದನ್ನೂ ಓದಿ : ಅಮೇಜಾನ್ ಪ್ರೈಮ್ ನಲ್ಲಿ ಪುನೀತ್ ರಾಜ್ ಕುಮಾರ್ ಸಿನಿಮಾ ಉಚಿತ ಪ್ರದರ್ಶನ

(Shiva Rajkumar and Raghavendra Raj Kumar in Puneeth Raj Kumar last film)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular