Coronavirus pandemic : ದೇಶದಲ್ಲಿ ಕೊರೊನಾ ರೌದ್ರಾವತಾರ: ಒಂದೇ ದಿನದಲ್ಲಿ 3.37 ಲಕ್ಷ ಹೊಸ ಪ್ರಕರಣ ವರದಿ

Coronavirus pandemic : ದೇಶದಲ್ಲಿ ಕೊರೊನಾ ರೌದ್ರಾವತಾರ ಇಂದೂ ಕೂಡ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 3,37,704 ಹೊಸ ಕೋವಿಡ್​ ಪ್ರಕರಣಗಳು ವರದಿಯಾಗಿದೆ. ಅಲ್ಲದೇ ಒಂದು ದಿನದಲ್ಲಿ 488 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯವು ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ ಕಳೆದ 24 ಗಂಟೆಗಳಲ್ಲಿ ಒಟ್ಟು 2,42,676 ಮಂದಿ ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್​ ಆಗಿದ್ದಾರೆ. ಈ ಮೂಲಕ ದೇಶದಲ್ಲಿ ರಿಕವರಿ ದರ 93.50 ಪ್ರತಿಶತವಾಗಿದೆ.


ದೇಶದಲ್ಲಿ ಕೋವಿಡ್​ 19ನ ಒಟ್ಟು ಸಕ್ರಿಯ ಪ್ರಕರಣಗಳು 21,13,365ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 4,88,884 ಆಗಿದೆ . 2020ರ ಮಾರ್ಚ್ ತಿಂಗಳಿನಲ್ಲಿ ಕೋವಿಡ್​ ಸಾಂಕ್ರಾಮಿಕದಿಂದ ದೇಶದಲ್ಲಿ ಸಾವನ್ನಪ್ಪಿದ್ದರು.


ಈ ನಡುವೆ ದೇಶದಲ್ಲಿ ಓಮಿಕ್ರಾನ್​​ ಪ್ರಕರಣವು 10,050ಕ್ಕೆ ತಲುಪಿದೆ. ನಿನ್ನೆಗಿಂತ ಇಂದಿಗೆ ದೇಶದಲ್ಲಿ 3.69 ಪ್ರತಿಶತ ಹೆಚ್ಚಿಗೆ ಕೋವಿಡ್​ ಪ್ರಕರಣ ವರದಿಯಾಗಿದೆ. ದೈನಂದಿನ ಕೋವಿಡ್ ಪಾಸಿಟಿವ್​​ ದರವು 17.22 ಪ್ರತಿಶತವಾಗಿದೆ.


ಇಂಡಿಯನ್​ ಕೌನ್ಸಿಲ್​ ಆಫ್​ ಮೆಡಿಕಲ್​ ರಿಸರ್ಚ್ ನೀಡಿರುವ ಮಾಹಿತಿಯ ಪ್ರಕಾರ ದೇಶದಲ್ಲಿ ಈವರೆಗೆ 71,34,99,892 ಸ್ಯಾಂಪಲ್​ಗಳನ್ನು ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 19,60,954 ಸ್ಯಾಂಪಲ್​ಗಳನ್ನು ಶುಕ್ರವಾರದಂದು ಪರೀಕ್ಷಿಸಲಾಗಿದೆ.

Coronavirus pandemic Updates: India adds 3.37 lakh new cases with positivity rate at 17.22%; 488 fatalities

ಇದನ್ನು ಓದಿ : water price hike : ಬೆಂಗಳೂರಲ್ಲಿ ನೀರಿನ ದರ ಏರಿಕೆ ಶಾಕ್‌ : ಸರಕಾರಕ್ಕೆ ದರ ಏರಿಕೆ ಪ್ರಸ್ತಾಪ ಸಲ್ಲಿಸಿದ ಜಲಮಂಡಳಿ

ಇದನ್ನೂ ಓದಿ : police corona positive : ಕೊರೋನಾ ಮೂರನೇ ಅಲೆಗೆ ನಲುಗಿದ ಖಾಕಿ ಪಡೆ : ಸಿಲಿಕಾನ್ ಸಿಟಿಯಲ್ಲಿ 1234 ಪೊಲೀಸರಿಗೆ ಸೋಂಕು

Comments are closed.