ಭಾನುವಾರ, ಏಪ್ರಿಲ್ 27, 2025
HomeCinemaPan India Cinema : ಶಿವಣ್ಣ ಅಭಿಮಾನಿಗಳಿಗೆ ಸಿಹಿಸುದ್ದಿ: ಪ್ಯಾನ್ ಇಂಡಿಯಾ ಸಿನಿಮಾಗೆ ಸಜ್ಜಾದ ಡಾ.ಶಿವರಾಜ್...

Pan India Cinema : ಶಿವಣ್ಣ ಅಭಿಮಾನಿಗಳಿಗೆ ಸಿಹಿಸುದ್ದಿ: ಪ್ಯಾನ್ ಇಂಡಿಯಾ ಸಿನಿಮಾಗೆ ಸಜ್ಜಾದ ಡಾ.ಶಿವರಾಜ್ ಕುಮಾರ್

- Advertisement -

ಸ್ಯಾಂಡಲ್ ವುಡ್ ಸೇರಿದಂತೆ ಎಲ್ಲಾ ಚಿತ್ರರಂಗದಲ್ಲೂ ಇದು ಪ್ಯಾನ್ ಇಂಡಿಯಾ ಫಿವರ್ ಟೈಂ. ಹೀಗಾಗಿ ಎಲ್ಲ ಭಾಷೆಗಳಲ್ಲೂ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣಕ್ಕೆ ನಿರ್ಮಾಪಕರು ಹಾಗೂ ನಿರ್ದೇಶಕರು ಮುಗಿಬೀಳುತ್ತಿದ್ದಾರೆ. ಸ್ಯಾಂಡಲ್ ವುಡ್ ನಲ್ಲಂತೂ ಒಂದಾದ ಮೇಲೊಂದು ಪ್ಯಾನ್ ಇಂಡಿಯಾ ಸಿನಿಮಾ‌ (Pan India Cinema) ಸದ್ದು ಮಾಡುತ್ತಿದೆ. ಕೆಜಿಎಫ್ ನಿಂದ ಆರಂಭವಾದ ಸರಣಿ ಸದ್ಯ ಕೆಜಿಎಫ್- 2, ವಿಕ್ರಾಂತ್ ರೋಣ ಸೇರಿದಂತೆ ತೋತಾಪುರಿವರೆಗೂ ಮುಂದುವರೆದಿದೆ.

ಸುದೀಪ್, ಯಶ್, ದರ್ಶನ್ ಹೀಗೆ ಕನ್ನಡದ ಪ್ಯಾನ್ ಇಂಡಿಯಾ ಸ್ಟಾರ್‌ ಪಟ್ಟಿಯೂ ದೊಡ್ಡದಿದೆ. ಈಗ ಈ ಸಾಲಿಗೆ ಕನ್ನಡದ ಹ್ಯಾಟ್ರಿಕ್ ಹೀರೋ ಶಿವಣ್ಣ ಹೊಸ ಸೇರ್ಪಡೆ.‌ ಹೌದು ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಸಾಲು ಸಾಲು ಸಿನಿಮಾದ ಜೊತೆ ಈಗ ಪ್ಯಾನ್ ಇಂಡಿಯಾ ಸಿನಿಮಾಗೂ ಸಿದ್ಧವಾಗಿದ್ದಾರೆ. ಬುದ್ಧಿವಂತ -2 ಖ್ಯಾತಿಯ ಜಯರಾಂ ಭದ್ರಾವತಿ ಈ ಸಿನಿಮಾಗೆ ಆಕ್ಷ್ಯನ್ ಕಟ್ ಹೇಳಲಿದ್ದಾರೆ. ಕೇಶವ್ ಶಿವರಾಜ್ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಓಂ ಸಿನಿಮಾದ‌ ಸತ್ಯನ ರೀತಿಯಲ್ಲಿ‌ ಇನ್ನೊಂದು ಸಿನಿಮಾಗೆ ಶಿವಣ್ಣ ಸಿದ್ಧವಾಗಿದ್ದಾರಂತೆ.

ಈ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಶಿವಣ್ಣ ಇದೇ ಮೊದಲ‌ ಬಾರಿಗೆ ರೆಟ್ರೋ ಲುಕ್ ನಲ್ಲಿ‌ಕಾಣಿಸಿಕೊಳ್ಳಲಿದ್ದಾರಂತೆ. ಈ ಸಿನಿಮಾ ಕೂಡ ಭೂಗತಲೋಕದ ಕತೆ ಒಳಗೊಂಡಿದ್ದು ಮತ್ತೊಮ್ಮೆ ಭೂಗತಲೋಕದ ಕತೆಯಲ್ಲಿ ಶಿವರಾಜ್ ಕುಮಾರ್ ಮಿಂಚಲಿದ್ದಾರೆ. ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ರಕ್ತ ಸಿಕ್ತ ಕಥೆಯೊಂದನ್ನ ಅನಾವರಣ ಮಾಡಲಿದೆ ಯಂತೆ ಚಿತ್ರತಂಡ.

ಸದ್ಯ ಮುಂದಿನ ತಿಂಗಳು ಸಿನಿಮಾಗೆ ಮೂಹೂರ್ತ ನಡೆಯಲಿದ್ದು, ಕೈಯಲ್ಲಿ ಸಾಲು ಸಾಲು ಸಿನಿಮಾಗಳಿದ್ದರೂ ಶಿವರಾಜ್ ಕುಮಾರ್ ಈ ಸಿನಿಮಾದ ಕತೆ ಕೇಳಿ ಸಿನಿಮಾಗೆ ಮರುಳಾಗಿ ಸಹಿ ಹಾಕಿದ್ದಾರಂತೆ. ಸದ್ಯ ಭಜರಂಗಿ ಸಿನಿಮಾ ರಿಲೀಸ್ ವೇಳೆ ನಡೆದ ಪುನೀತ್ ನಿಧನದ ದುಃಖದಲ್ಲಿ ಸಿನಿಮಾ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿದ್ದ ಶಿವಣ್ಣ ನಿಧಾನಕ್ಕೆ ಸಹಜ ಸ್ಥಿತಿಗೆ ಮರಳಿದ್ದು, ನಿಧಾನವಾಗಿ ಸಿನಿಮಾಗಳತ್ತ ಮುಖಮಾಡುತ್ತಿದ್ದಾರೆ.

ಡಾ.ರಾಜ್ ಕುಮಾರ್, ಪಾರ್ವತಮ್ಮ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಅಸೆಯೊಂದಿತ್ತು.‌ ಪುನೀತ್ , ಶಿವಣ್ಣ ಹಾಗೂ ರಾಘಣ್ಣ ಒಂದೇ ಸಿನಿಮಾದಲ್ಲಿ ನಟಿಸಬೇಕು ಎಂಬುದು. ಆದರೆ ಈ ಕಾಲಕ್ಕೆ‌ ಮುಹೂರ್ತವೇ ಕೂಡಿ ಬಂದಿರಲಿಲ್ಲ‌, ಹೀಗಾಗಿ ಈಗ ಪುನೀತ್ ನಿಧನದ ಬಳಿಕ ಅಭಿಮಾನಿಗಳ ಈ ಆಸೆ ಈಡೇರಲಿದ್ದು ಶಿವಣ್ಣ ಹಾಗೂ ರಾಘಣ್ಣ ಪುನೀತ್ ಜೇಮ್ಸ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ : ಯಶಸ್ಸಿನ ಗುಂಗಲ್ಲಿ ಪ್ಯಾಂಟ್ ಧರಿಸೋದನ್ನೇ ಮರೆತ್ರಾ ರಶ್ಮಿಕಾ : ಟ್ರೋಲ್ ಗೆ ಗುರಿಯಾದ ಪುಷ್ಪ ಶ್ರೀವಲ್ಲಿ

ಇದನ್ನೂ ಓದಿ : ಒಂಟಿಯಾಗಿ ಹನಿಮೂನ್ ಗೆ ಹಾರಿದ್ರಾ ಕತ್ರಿನಾ ! ವೈರಲ್ ಪೋಟೋ ಹೇಳ್ತಿರೋದೇನು ?

(Shivaraj Kumar ready for Pan India Cinema)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular