ಭಾನುವಾರ, ಏಪ್ರಿಲ್ 27, 2025
HomeCinemaShivarajkumar: ಸಾಲು –ಸಾಲು ಸಿನಿಮಾಗಳಲ್ಲಿ ಶಿವಣ್ಣ: ಯುವನಿರ್ದೇಶಕನ ಜೊತೆ ಸತ್ಯಮಂಗಳಕ್ಕೆ ಸೈಎಂದ ಹ್ಯಾಟ್ರಿಕ್ ಹಿರೋ!

Shivarajkumar: ಸಾಲು –ಸಾಲು ಸಿನಿಮಾಗಳಲ್ಲಿ ಶಿವಣ್ಣ: ಯುವನಿರ್ದೇಶಕನ ಜೊತೆ ಸತ್ಯಮಂಗಳಕ್ಕೆ ಸೈಎಂದ ಹ್ಯಾಟ್ರಿಕ್ ಹಿರೋ!

- Advertisement -

ವಯಸ್ಸಿನ ಜೊತೆ ಶಿವರಾಜ್ ಕುಮಾರ್ ಸಿನಿಮಾಗಳ ಸಂಖ್ಯೆಯೂ ಏರುತ್ತಿದೆ. 122 ನೇ ಸಿನಿಮಾ ಭಜರಂಗಿ-2 ರಿಲೀಸ್ ಗೂ ಮುನ್ನವೇ ಶಿವಣ್ಣ 127 ಸಿನಿಮಾಗೆ ಸಿದ್ಧವಾಗಿದ್ದಾರೆ. ಯುವನಿರ್ದೇಶಕನ ಜೊತೆ ಸತ್ಯಮಂಗಳದಲ್ಲಿ ಶಿವರಾಜ್ ಕುಮಾರ್ ತೆರೆ ಮೇಲೆ ಬರಲಿದ್ದಾರೆ.

ಥ್ರಿಲ್ಲರ್ ಕತೆ ಆಧಾರಿತ ಸಿನಿಮಾದ ಸ್ಟೋರಿ ಕೇಳಿ ಇಂಪ್ರೆಸ್ ಆದ ಶಿವಣ್ಣ ಸಿನಿಮಾಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಹೀಗಾಗಿ ವರಮಹಾಲಕ್ಷ್ಮಿ ಹಬ್ಬದ ಶುಭದಿನದಂದೇ ಶಿವಣ್ಣ ಸಿನಿಮಾ ಸತ್ಯಮಂಗಳ ಘೋಷಣೆಯಾಗಿದೆ.

ಮಮ್ಮಿ ಖ್ಯಾತಿಯ ನಿರ್ದೇಶಕ ಲೋಹಿತ್ ಎಚ್.ಮನು ಈ ಸಿನಿಮಾ ನಿರ್ದೇಶಿಸಲಿದ್ದು, ಕೃಷ್ಣಸಾರ್ಥಕ್ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಬಿಡುಗಡೆಯಾಗಿರುವ ಪೋಸ್ಟರ್ ಭಯ ಹುಟ್ಟಿಸುವಂತಿದ್ದು, ದಟ್ಟವಾದ ಕಾಡು, ಮರಿಜೋನಾ ಗಿಡಗಳ ನಡುವೆ ಕಣ್ಣುಹೊಳೆಯುವಂತೆ ನಿಂತ ಕರಿಚಿರತೆಯನ್ನು ಪೋಸ್ಟರ್ ಒಳಗೊಂಡಿದೆ.

ತಮಿಳುನಾಡಿನ ಗಡಿಯಲ್ಲಿರುವ ಕಾಡು ಸತ್ಯಮಂಗಳ ಇದನ್ನೇ ಆದರಿಸಿ ಸಿನಿಮಾ ಟೈಟಲ್ ಆಯ್ಕೆ ಮಾಡಲಾಗಿದೆ. ಮುಂದಿನ ವರ್ಷ ಶೂಟಿಂಗ್ ಆರಂಭವಾಗಲಿದ್ದು, ವರ್ಷಾಂತ್ಯಕ್ಕೆ ರಿಲೀಸ್ ಆಗೋ ಸಾಧ್ಯತೆ ಇದೆ.

123 ಸಿನಿಮಾ ಭೈರಾಗಿ ಶೂಟಿಂಗ್ ಮುಗಿಸಿರುವ ಶಿವಣ್ಣ 124 ಸಿನಿಮಾ ನೀ ಸಿಗೋವರೆಗೂ ಶೂಟಿಂಗ್ ಆರಂಭಿಸಿದ್ದಾರೆ. ಇನ್ನು 125 ಸಿನಿಮಾ ವೇದ ಘೋಷಣೆಯಾಗಿದ್ದು, 126 ಸಿನಿಮಾ ದಲ್ಲಿ ಶಿವಣ್ಣನಿಗೆ ರಿಷಬ್ ಶೆಟ್ಟಿ ನಿರ್ದೇಶಿಸಲಿದ್ದಾರೆ.

RELATED ARTICLES

Most Popular