ರೋರಿಂಗ್ ಸ್ಟಾರ್ ಶ್ರೀಮುರುಳಿ (Sri Muruli) ಸಖತ್ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಮದಗಜ (Madhagaja) ಸಿನಿಮಾ ಡಿ.3 ರಂದು ತೆರೆಗೆ ಬರಲಿದೆ. ಈಗಾಗಲೇ ಆಫೀಸಿಯಲ್ ಟ್ರೇಲರ್ ವೀಕ್ಷಣೆ ಯಲ್ಲಿ ದಾಖಲೆ ಬರೆದಿರುವ ಸಿನಿಮಾ ರಿಲೀಸ್ ಬಳಿಕ ಅಭಿಮಾನಿಗಳ ಮನಗೆಲ್ಲುವ ಮುನ್ಸೂಚನೆ ನೀಡಿದೆ. ಶ್ರೀಮುರುಳಿ ಗೆ ಆಶಿಕಾ ರಂಗನಾಥ್ (Ashika Ranganath)ನಾಯಕಿಯಾಗಿ ನಟಿಸಿದ್ದು, ಇತ್ತೀಚಿಗೆ ಸಿನಿಮಾದ ಹೀರೋ ಇಂಟ್ರೂಡ್ಯುಕ್ಷನ್ ಸಾಂಗ್ ಯುದ್ಧ ಸಾರಿದ ಚಂಡಮಾರುತ ರಿಲೀಸ್ ಆಗಿದೆ.
ಸಾಂಗ್ ರಿಲೀಸ್ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ರನ್ನು ನೆನಪಿಸಿಕೊಂಡು ಭಾವುಕರಾದ ನಟ ಶ್ರೀಮುರುಳಿ ತಮ್ಮ ಸಿನಿಮಾದ ಸಾಂಗ್ ನ್ನು ಪುನೀತ್ ರಾಜ್ ಕುಮಾರ್ ಗೆ ಸಮರ್ಪಿಸುವುದಾಗಿ ಹೇಳಿಕೊಂಡಿದ್ದರು. ಕನ್ನಡ ಚಲನಚಿತ್ರ ರಂಗಕ್ಕೆ ಒಂದು ವಿಭಿನ್ನ ಸಿನಿಮಾ ನೀಡಿದ್ದೇವೆ ಎಂದಿರುವ ನಟ ಶ್ರೀಮುರುಳಿ , ಈ ಸಿನಿಮಾದಲ್ಲಿ ನಾನು ಒಂದು ವಿಭಿನ್ನ ಶೇಡ್ ನ ಪಾತ್ರ ಮಾಡಿದ್ದೇನೆ. ಕನ್ನಡಕ್ಕೆ ಗುಣಮಟ್ಟದ ಸಿನಿಮಾ ನೀಡಬೇಕೆಂಬ ನಮ್ಮ ಕನಸು ಈಡೇರಿದೆ ಎಂದಿದ್ದಾರೆ.
ಎಸ್.ಮಹೇಶ್ ಕುಮಾರ್ ನಿರ್ದೇಶನದ ಈ ಸಿನಿಮಾದ ಹಾಡನ್ನು ಪುನೀತ್ ರಾಜ್ ಕುಮಾರ್ ಲಾಂಚ್ ಮಾಡಬೇಕಿತ್ತು. ಆದರೇ ಇದಕ್ಕೂ ಮುನ್ನವೇ ಪುನೀತ್ ಅಗಲಿದ್ದರಿಂದ ಅವರಿಗೆ ಗೌರವ ನಮನ ಸಲ್ಲಿಸಿ ಸಾಂಗ್ ರಿಲೀಸ್ ಮಾಡಿರೋ ಚಿತ್ರತಂಡ ಡಿ.3 ರ ಶುಕ್ರವಾರ ಸಿನಿಮಾ ರಿಲೀಸ್ ಮಾಡಲಿದೆ.

ಎಲ್ಲ ಭಾಷೆಗಳಲ್ಲೂ ಏಕಕಾಲಕ್ಕೆ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆಯಾದರೂ ತೆಲುಗು ಹಾಗೂ ತಮಿಳು ಭಾಷೆಗಳ ಬಿಗ್ ಬಜೆಟ್ ಸಿನಿಮಾಗಳ ಜೊತೆ ಪೈಪೋಟಿ ಕಷ್ಟ ಎಂಬ ಕಾರಣಕ್ಕೆ ಅಲ್ಲಿನ ಸಿನಿಮಾಗಳ ಶೆಡ್ಯೂಲ್ ನೋಡಿಕೊಂಡು ರಿಲೀಸ್ ಮಾಡೋ ಯೋಚನೆಯಲ್ಲಿ ಇದ್ದಾರಂತೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ.

ಶ್ರೀಮುರುಳಿ ಸಖತ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿರೋ ಈ ಸಿನಿಮಾ ಸಖತ್ ಕುತೂಹಲ ಮೂಡಿಸಿದ್ದು, ಶ್ರೀಮುರುಳಿ ಅಭಿಮಾನಿಗಳಿಗೆ ರಸದೌತಣ ನೀಡೋದ್ರಲ್ಲಿ ಅನುಮಾನ ವೇ ಇಲ್ಲ. ತೆಲುಗಿನ ಖ್ಯಾತ ಖಳನಟ ಜಗಪತಿ ಬಾಬು, ಹಾಸ್ಯನಟ ರಂಗಾಯಣ ರಘು, ಚಿಕ್ಕಣ್ಣ, ಶಿವರಾಜ್ ಕೆ.ಆರ್.ಪೇಟೆ ಸೇರಿದಂತೆ ಹಲವು ನಟರ ತಾರಾಗಣವಿದೆ. ಈ ಸಿನಿಮಾಗೆ ರವಿ ಬಸ್ರೂರು ಸಂಗೀತ ನಿರ್ದೇಶನವಿದೆ.
ಇದನ್ನೂ ಓದಿ : Ashika Ranganath : ಕಾಲಿವುಡ್ ಅಂಗಳಕ್ಕೆ ಚುಟು ಚುಟು ಬೆಡಗಿ…! ತಮಿಳಿಗೆ ಗ್ರ್ಯಾಂಡ್ ಎಂಟ್ರಿಕೊಟ್ಟ ಆಶಿಕಾ ರಂಗನಾಥ್….!!
ಇದನ್ನೂ ಓದಿ : Madhagaja : ಮದಗಜ ಮೂಲಕ ಅಬ್ಬರಿಸಿದ ಶ್ರೀಮುರುಳಿ : ಮೋಡಿ ಮಾಡಿದೆ ಬಸ್ರೂರು ಮ್ಯೂಸಿಕ್
(Sri Muruli in remembrance of Puneet Raj Kumar, Madagaja Cinema is set to release on December 3)