ಸ್ಯಾಂಡಲ್‌ವುಡ್ ನಟ ದರ್ಶನ್ ಹುಟ್ಟಹಬ್ಬದ (Darshan’s birthday) ಸಂಭ್ರಮದಲ್ಲಿ ಅಭಿಮಾನಿಗಳು ಖುಷಿಯಲ್ಲಿದ್ದಾರೆ. ರಾತ್ರಿಯಿಂದಲೂ ಆರ್‌ಆರ್ ನಗರದಲ್ಲಿರುವ ದರ್ಶನ್ ನಿವಾಸಕ್ಕೆ ಅಭಿಮಾನಿಗಳ ಆಗಮಿಸುತ್ತಿದ್ದಾರೆ. ರಾತ್ರಿಯೇ ಸಾಕಷ್ಟು ಅಭಿಮಾನಿಗಳು ನೆಚ್ಚಿನ ನಟನನ್ನು ಭೇಟಿ ಮಾಡಿ ಕೈಕುಲುಕಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು. ಈಗಾಗಲೇ ‘D56’ ಸಿನಿಮಾ ಟೈಟಲ್ ಕೂಡ ರಿವೀಲ್ ಆಗಿದೆ. ತರುಣ್ ಸುಧೀರ್ ನಿರ್ದೇಶನದ ಸಿನಿಮಾಕ್ಕೆ ‘ಕಾಟೇರ’ ಎನ್ನುವ ಖಡಕ್ ಟೈಟಲ್ ಫಿಕ್ಸ್ ಆಗಿದೆ. ಇನ್ನು ದರ್ಶನ್ ನಿವಾಸದ ಬಳಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸುತ್ತಿದ್ದು, ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ. ಅಭಿಮಾನಿಗಳಿಗೆ ಊಟ, ನೀರಿನ ವ್ಯವಸ್ಥೆ ಕೂಡ ಮಾಡಲಾಗಿದೆ. ಸಿನಿತಾರೆಯರು, ರಾಜಕೀಯ ಗಣ್ಯರು, ಸಾಕಷ್ಟು ಜನ ಆಪ್ತರು ಸೇರಿದಂತೆ ಅನೇಕರು ದರ್ಶನ್ ಮನೆಗೆ ಭೇಟಿ ನೀಡಿ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ.
50ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸೋ ಮೂಲಕ ದರ್ಶನ್ ಅಭಿಮಾನಿಗಳ ಮನಗೆದ್ದಿದ್ದಾರೆ. ಬರೀ ಸಿನಿಮಾ ಅಲ್ಲದೇ ತಮ್ಮ ನೇರ ನುಡಿ, ಪ್ರಾಣಿ ಪ್ರೀತಿ, ಸಹಾಯ ಮನೋಭಾವದಿಂದ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಸಿನಿರಂಗ ಹಾಗೂ ರಾಜಕೀಯರಂಗದ ಗಣ್ಯರ ಜೊತೆಗೂ ಆತ್ಮೀಯ ಒಡನಾಟ ಇದೆ. ಆತ್ಮೀಯ ಸಹೋದರ ದರ್ಶನ್ ಅವರಿಗೆ ಹುಟ್ಟುಹಬ್ಬದ ಶುಭಾಶಯ’ ಎಂದು ನಟ ಧನಂಜಯ ಟ್ವೀಟ್ ಮಾಡಿದ್ದಾರೆ. ದರ್ಶನ್ ಜೊತೆಗಿನ ಫೋಟೊ ಜೊತೆಗೆ ‘ಕಾಟೇರ’ ಸಿನಿಮಾದ ಪೋಸ್ಟರ್ ಅನ್ನು ಡಾಲಿ ಹಂಚಿಕೊಂಡಿದ್ದಾರೆ. ‘ಯಜಮಾನ’ ಸಿನಿಮಾದಲ್ಲಿ ದರ್ಶನ್ ಜೊತೆಗೆ ಧನಂಜಯ ನಟಿಸಿದ್ದರು. ಹುಂಬತನ ಇರುವ ಮಿಠಾಯಿ ಸೂರಿ ಎನ್ನುವ ಪಾತ್ರದಲ್ಲಿ ಧನು ಮಿಂಚಿದ್ದರು. ಸಣ್ಣ ಪಾತ್ರ ಆದರೂ ಡಾಲಿ ಗಮನ ಸೆಳೆದಿದ್ದರು.
Happy birthday to dear brother, our challenging star @dasadarshan sir 🎉
— Gurudev Hoysala (@Dhananjayaka) February 16, 2023
Best wishes for #Kaatera pic.twitter.com/Ccb8zBVL60
ನಟಿ ರಕ್ಷಿತಾ ಪ್ರೇಮ್ ಆತ್ಮೀಯ ಸ್ನೇಹಿತನಿಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ. ಇತ್ತೀಚೆಗೆ ‘ಕ್ರಾಂತಿ’ ಸಿನಿಮಾ ತಂಡದ ಜೊತೆ ರಕ್ಷಿತಾ ಪಾರ್ಟಿ ಮಾಡಿದ್ದರು. ಆಗ ಕ್ಲಿಕ್ಕಿಸಿಕೊಂಡ ಫೋಟೊ ಹಂಚಿಕೊಂಡು ‘ಅಂದು ಸಂಜೆ ಸೆರೆಹಿಡಿದ ಫೋಟೊಗಳಲ್ಲಿ ಇದು ಮೆಚ್ಚಿನ ಫೋಟೋ. ಸುಂದರ ನೆನಪುಗಳು ಹಾಗೂ ಬೆಂಬಲಕ್ಕೆ ಧನ್ಯವಾದಗಳು. ಹುಟ್ಟುಹಬ್ಬದ ಶುಭಾಶಯಗಳು ನನ್ನ ಆತ್ಮೀಯ ದರ್ಶನ್’ ಎಂದು ರಕ್ಷಿತಾ ಟ್ವೀಟ್ ಮಾಡಿದ್ದಾರೆ. ಪ್ರತಿಭೆಗೆ ತಕ್ಕಂತೆ ಅಪಾರ ಪರಿಶ್ರಮದಿಂದ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿ ಸಿನಿರಂಗದಲ್ಲಿ ಧ್ರುವ ನಕ್ಷತ್ರದಂತೆ ಪ್ರಜ್ವಲಿಸುತ್ತಿರುವ ಪ್ರೀತಿಯ ದರ್ಶನ್’ಗೆ ಹುಟ್ಟುಹಬ್ಬದ ಶುಭ ಹಾರೈಕೆಗಳು. ಆ ಭಗವಂತ ದೀರ್ಘ ಆಯಸ್ಸು ,ಉತ್ತಮ ಆರೋಗ್ಯ ಕರುಣಿಸಿ ಕಾಪಾಡಲಿ ಎಂದು ಪ್ರಾರ್ಥಿಸುವೆ. ನೀವಿಡುವ ಎಲ್ಲ ಹೆಜ್ಜೆಗಳಿಗೆ ಗೆಲುವಾಗಲಿ ದರ್ಶನ್’ ಎಂದು ಸಂಸದೆ ಸುಮಲತಾ ಅಂಬರೀಶ್ ಟ್ವೀಟ್ ಮಾಡಿದ್ದಾರೆ.
This is my fav pic of that evening .. thank you for some beautiful memories for all the love n support … happy birthday my dearest @dasadarshan u truly deserve only the best ❤️❤️ pic.twitter.com/t3VwEYKedc
— Rakshitha Prem (@RakshithaPrem) February 15, 2023
ಇದನ್ನೂ ಓದಿ : Actor Darshan’s birthday : ನಟ ದರ್ಶನ್ ಬರ್ತಡೆಗೆ “D56” ಟೈಟಲ್ ರಿವೀಲ್ : ಜಬರ್ದಸ್ತ್ ಕಥೆಗೆ ಖಡಕ್ ಟೈಟಲ್ ಫಿಕ್ಸ್
ಇದನ್ನೂ ಓದಿ : ನಟ ದರ್ಶನ್ ಮನೆ ಮುಂದೆ ಫ್ಯಾನ್ಸ್ : ಒಂದು ದಿನ ಮುನ್ನವೇ ಡಿ ಬಾಸ್ ಹುಟ್ಟು ಹಬ್ಬ ಸಂಭ್ರಮ!
ಇದನ್ನೂ ಓದಿ : Martin Movie Teaser : ನಟ ಧ್ರುವ ಸರ್ಜಾ, ಎಪಿ ಅರ್ಜುನ್ ಕಾಂಬಿನೇಶನ್‌ನ ‘ಮಾರ್ಟಿನ್’ ಟೀಸರ್ ಡೇಟ್ ಫಿಕ್ಸ್
ಪ್ರತಿಭೆಗೆ ತಕ್ಕಂತೆ ಅಪಾರ ಪರಿಶ್ರಮದಿಂದ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿ ಚಿತ್ರರಂಗದಲ್ಲಿ ಧ್ರುವ ನಕ್ಷತ್ರದಂತೆ ಪ್ರಜ್ವಲಿಸುತ್ತಿರುವ ಪ್ರೀತಿಯ ದರ್ಶನ್'ಗೆ ಹುಟ್ಟುಹಬ್ಬದ ಶುಭ ಹಾರೈಕೆಗಳು.ಆ ಭಗವಂತ ದೀರ್ಘ ಆಯಸ್ಸು ,ಉತ್ತಮ ಆರೋಗ್ಯ ಕರುಣಿಸಿ ಕಾಪಾಡಲಿ ಎಂದು ಪ್ರಾರ್ಥಿಸುವೆ.ನೀವಿಡುವ ಎಲ್ಲ ಹೆಜ್ಜೆಗಳಿಗೆ ಗೆಲುವಾಗಲಿ❤️ @dasadarshan pic.twitter.com/VZqCvalGhf
— Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaA) February 16, 2023
ರಾಜಕೀಯ ಗಣ್ಯರ ಶುಭ ಹಾರೈಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಂಸದರಾದ ಪ್ರತಾಪ್ ಸಿಂಹ, ಪಿ. ಸಿ ಮೋಹನ್, ಮಾಜಿ ಸಚಿವರಾದ ಸಿ. ಪಿ ಯೋಗೇಶ್ವರ್, ಸಚಿವರಾದ ಮುನಿರತ್ನ, ಡಾ. ಸುಧಾಕರ್, ಡಾ. ಅಶ್ವಥ್ ನಾರಾಯಣ್, ನಟ ನವರಸ ನಾಯಕ ಜಗ್ಗೇಶ್, ನಟಿ ನಿಮಿಕಾ ರತ್ನಾಕರ್, ನಿರ್ಮಾಪಕಿ ಶೈಲಜಾ ನಾಗ್, ನಟ ಸೃಜನ್ ಲೋಕೇಶ್, ನಟ ಪ್ರಮೋದ್, ನಿರ್ದೇಶಕ ಸುನಿ ಸೇರಿದಂತೆ ಸಾಕಷ್ಟು ಗಣ್ಯರು ನಟ ದರ್ಶನ್‌ಗೆ ಹುಟ್ಟುಹಬ್ಬದ ಶುಭಕೋರಿದ್ದಾರೆ.
Sandalwood stars, political elites wished actor Darshan on his birthday