Maruti Suzuki Ciaz : ಹೊಸ ಬಣ್ಣಗಳ ಆಯ್ಕೆ, ಚೈಲ್ಡ್‌ ಸೀಟ್‌ ಎಂಕರೇಜ್‌ ಮುಂತಾದ ವೈಶಿಷ್ಟ್ಯಗಳನ್ನು ಅಳವಡಿಸಿಕೊಂಡು ಬಿಡುಗಡೆಯಾದ ಮಾರುತಿ ಸಿಯಾಜ್‌

ಕಾರು ತಯಾರಿಕೆಯ ಬ್ರಾಂಡ್‌ ಆಗಿರುವ ಮಾರುತಿ ಸುಜುಕಿ ತನ್ನ ಸಿಯಾಜ್ ಕಾರನ್ನು (Maruti Suzuki Ciaz ) ಬಿಡುಗಡೆಮಾಡಿದೆ. ಈ ಕಾರ್‌ ಅನ್ನು ಭಾರತದಲ್ಲಿ 11.14 ಲಕ್ಷ ರೂ.ಗಳ ಆರಂಭಿಕ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇದು ಮ್ಯಾನ್ಯುವಲ್‌ ಮತ್ತು ಆಟೋಮೆಟಿಕ್‌ ಟ್ರಾನ್ಸ್‌ಮಿಷನ್‌ ಎರಡರಲ್ಲೂ ದೊರೆಯಲಿದೆ. ಇದು ನೆಕ್ಸಾ ಅಡಿಯಲ್ಲಿ ಬರುವ ಕಾರಾಗಿದೆ. ಮಾರುತಿ ಸುಜುಕಿ ಬಿಡುಗಡೆಮಾಡಿರುವ ಸಿಯಾಜ್‌ ಅನೇಕ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಕಾರಿನ ಹೊಸ ವೈಶಿಷ್ಟ್ಯಗಳ ಬಗ್ಗೆ ಇಲ್ಲಿದೆ.

ಮಾರುತಿ ಸುಜುಕಿ ಬಿಡುಗಡೆ ಮಾಡಿರುವ ಸಿಯಾಜ್‌ ಕಾರು ಸೆಡಾನ್‌ ಮಾದರಿಯದ್ದಾಗಿದೆ. ಎಲೆಕ್ಟ್ರಾನಿಕ್‌ ಸ್ಟೆಬಿಲಿಟ ಪ್ರೋಗ್ರಾಮ್‌ ಮತ್ತು ಸ್ಟಾಡರ್ಡ್‌ ಸೇಫ್ಟಿ ಫೀಚರ್‌ ಆದ ಹಿಲ್‌ ಹೋಲ್ಡ್‌ ಅಸಿಸ್ಟ್‌ ಅನ್ನು ಸೆಡಾನ್‌ ಮಾದರಿಯ ಎಲ್ಲಾ ಕಾರುಗಳಲ್ಲಿ ಅಳವಡಿಸಿದೆ. ಇವುಗಳ ಜೊತೆಗೆ ಡ್ಯೂಯಲ್‌ ಏರ್‌ಬ್ಯಾಗ್‌, ರಿಯರ್‌ ಪರ್ಕಿಂಗ್‌ ಸೆನ್ಸಾರ್‌ ಮತ್ತು ಚೈಲ್ಡ್‌ ಸೀಟ್‌ ಎಂಕರೇಜ್‌ (ISOFIX) ಸುರಕ್ಷತೆಯನ್ನು ಅಳವಡಿಸಿದೆ.

ಇನ್ನು ಕಾರಿನ ಬಣ್ಣಗಳ ವಿಷಯದಲ್ಲಿ ಮಾರುತಿ ಸುಜುಕಿಯು ಸಿಯಾಜ್‌ನಲ್ಲಿ ಈಗ ಹೊಸದಾಗಿ ಸೇರ್ಪಡೆಯಾದ ಮೂರು ಬಣ್ಣಗಳನ್ನು ಸೇರಿಸಿ ಒಟ್ಟು ಏಳು ಬಣ್ಣಗಳ ಆಯ್ಕೆಯನ್ನು ಖರೀದುದಾರರಿಗೆ ನೀಡಿದೆ. ಕಪ್ಪು ಬಣ್ಣದ ರೂಫ್‌ ಇರುವ ಪರ್ಲ್‌ ಮೆಟಾಲಿಕ್‌ ಒಪ್ಯುಲಂಟ್‌ ರೆಡ್‌, ಪರ್ಲ್‌ ಮೆಟಾಲಿಕ್‌ ಗ್ರಾಂಡ್ಯೂರ್‌ ಗ್ರೇ ಮತ್ತು ಡಿಗ್ನಿಟಿ ಬ್ರೌನ್‌ ಬಣ್ಣಗಳು ಹೊಸದಾಗಿ ಸೇರ್ಪಡೆಯಾದ ಬಣ್ಣಗಳಾಗಿವೆ.

ಸಿಯಾಜ್‌ ಡ್ಯೂಯಲ್‌ ಟೋನ್‌ ಕಾರು 1.5 ಲೀಟರ್‌ ಪೆಟ್ರೋಲ್‌ ಎಂಜಿನ್‌ ಹೊಂದಿದೆ. ಇದು 6,000 rpm ನಲ್ಲಿ 103 bhp ಶಕ್ತಿಯನ್ನು ಹೊರ ಹಾಕುತ್ತದೆ. ಈ ಕಾರು 4,400 rpm ನಲ್ಲಿ 138 Nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಮ್ಯಾನ್ಯುವಲ್‌ ಮತ್ತು ಆಟೋಮೆಟಿಕ್‌ ಗೇರ್‌ಬಾಕ್ಸ್‌ ಎರಡರಲ್ಲೂ ದೊರಯಲಿದೆ. ಇದು ಕ್ರಮವಾಗಿ ಪ್ರತಿ ಲೀಟರ್‌ಗೆ 20.65 ಕಿಮಿ, ಮತ್ತು 20.04 ಕಿಮಿ ಮೈಲೇಜ್‌ ನೀಡುತ್ತದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : Best Mileage Scooters : ಸ್ಕೂಟರ್‌ ಖರೀದಿಸಬೇಕಾ? ಇಲ್ಲಿದೆ ನೋಡಿ ಬೆಸ್ಟ್‌ ಮೈಲೇಜ್‌ ಕೊಡುವ ಸ್ಕೂಟರ್‌ಗಳು

ಇದನ್ನೂ ಓದಿ : Airbags in Car : ಬಜೆಟ್‌ ಬೆಲೆಯ ಸುರಕ್ಷಿತ ಕಾರುಗಳು; ಇವುಗಳಲ್ಲಿದೆ ಜೀವರಕ್ಷಕ 6 ಏರ್‌ಬ್ಯಾಗ್‌ಗಳು

(Maruti Suzuki Ciaz launched at rs 11.14 lakh and gets new safety features)

Comments are closed.