Maha Shivaratri stories: ಮಹಾಶಿವರಾತ್ರಿ ಆಚರಣೆ ಹಿಂದಿದೆ ಈ ಅದ್ಭುತ ಕಥೆಗಳು

(Maha Shivaratri stories) ಹಿಂದೂ ಧರ್ಮದಲ್ಲಿ ಆಚರಿಸಲಾಗುವ ಅತ್ಯಂತ ಮಂಗಳಕರ ಹಬ್ಬದಲ್ಲಿ ಮಹಾಶಿವರಾತ್ರಿ ಕೂಡ ಒಂದು. ಶಿವ ಹಾಗೂ ಪಾರ್ವತಿ ದೇವಿಯು ವಿವಾಹವಾದ ದಿನವನ್ನೇ ಮಹಾಶಿವರಾತ್ರಿಯಾಗಿ ಆಚರಿಸಲಾಗುತ್ತದೆ ಎಂದು ಶಿವ ಪುರಣಾದಲ್ಲಿ ಉಲ್ಲೇಖಿಸಿದರೆ, ಶಾಸ್ತ್ರಗಳು, ಸೃಷ್ಟಿ ಆರಂಭವಾದ ದಿನವನ್ನು ಮಹಾಶಿವರಾತ್ರಿಯೆಂದು ಹೇಳುತ್ತದೆ. ಶಿವ ಶಕ್ತಿಯ ಐಕ್ಯತೆಯನ್ನು ಸೂಚಿಸುವ ಈ ಆಚರಣೆಗೆ ಭಾರತದಲ್ಲಿ ವಿಶೇಷವಾದ ಮಹತ್ವವಿದೆ.

ಮಹಾ ಶಿವರಾತ್ರಿ ಹಬ್ಬದ ಉಲ್ಲೇಖಗಳು ಬರಿ ಶಿವಪುರಾಣದಲ್ಲಿ, ಶಾಸ್ತ್ರಗಳಲ್ಲಿ ಮಾತ್ರವಲ್ಲದೇ ಸ್ಕಂದ ಪುರಾಣ, ಅಗ್ನಿ ಪುರಾಣ, ಪದ್ಮ ಪುರಾಣ, ಹಾಗೂ ಗರುಡ ಪುರಾಣಗಳಲ್ಲಿಯೂ ಕಂಡು ಬರುತ್ತದೆ. ಶಿವರಾತ್ರಿಗೆ ಸಂಬಂಧಿಸಿದಂತೆ ಅನೇಕ ಪುರಾಣದ ಕಥೆಗಳನ್ನು ನಾವು ಕೇಳಿರುತ್ತೇವೆ ಆದರೆ ಅವುಗಳಲ್ಲಿ ಈ ಕಥೆಗಳು ಹೆಚ್ಚು ಪ್ರಸಿದ್ದಿಯನ್ನು ಪಡೆದವುಗಳಾಗಿವೆ. ಜನರ ನಂಬಿಕೆಯ ಆಧಾರದ ಮೇಲೆ ಮಹಾಶಿವರಾತ್ರಿ ಆಚರಣೆಗೆ ಕಥೆಗಳು ಭಿನ್ನವಾಗಿರಬಹುದು. ಆದರೆ ಈ ಕೆಳಗೆ ಹೇಳುವ ಕಥೆಗಳು ಹೆಚ್ಚು ಮಹತ್ವವನ್ನು ಪಡೆದುಕೊಂಡಿವೆ.

ಮಹಾಶಿವರಾತ್ರಿ ಹಿಂದಿರುವ ಮೂರು ಅದ್ಬುತ ಕಥೆಗಳಿವು;

1. ಮಹಾದೇವ ಶಿವಲಿಂಗವಾಗಿ ಪ್ರಕಟವಾದ ದಿನ;
ಶಾಸ್ತ್ರಗಳ ಪ್ರಕಾರ, ಮಹಾದೇವನು ಮಹಾಶಿವರಾತ್ರಿಯಂದು ಮೊದಲ ಬಾರಿಗೆ ಲಿಂಗ ರೂಪದಲ್ಲಿ ಕಾಣಿಸಿಕೊಂಡನಂತೆ. ಈ ಶಿವಲಿಂಗವು ದ್ಯೋತಕ ಜ್ಯೋತಿರ್ಲಿಂಗ ಅಂದರೆ ಬೆಂಕಿಯ ಶಿವಲಿಂಗದ ರೂಪದಲ್ಲಿದ್ದು, ಇದಕ್ಕೆ ಆದಿ ಅಂತ್ಯ ಎರಡೂ ಇರಲಿಲ್ಲ ಎಂದು ಹೇಳಲಾಗುತ್ತದೆ. ಈ ಶಿವಲಿಂಗದ ಆದಿ ಅಂತ್ಯವನ್ನು ತಿಳಿದುಕೊಳ್ಳುವ ಸಲುವಾಗಿ ಬ್ರಹ್ಮ ದೇವನು ಹಂಸದ ರೂಪವನ್ನು ತಾಳಿ ಶಿವಲಿಂಗದ ಆದಿಯನ್ನು ಹುಡುಕಿಕೊಂಡು ಹೋಗುತ್ತಾನೆ. ಆದರೆ ಬ್ರಹ್ಮಲಿಂಗನಿಗೆ ಶಿವಲಿಂಗದ ಆದಿ ಸಿಗದೇ ಹಿಂದಕ್ಕೆ ಮರಳುತ್ತಾನೆ. ಇನ್ನೂ ಭಗವಾನ್‌ ವಿಷ್ಣ ವರಾಹ ರೂಪವನ್ನು ತಾಳಿ ಲಿಂಗದ ಅಂತ್ಯವನ್ನು ಹುಡುಕಲು ಹೊರಟು, ಆತನೂ ಲಿಂಗದ ಅಂತ್ಯ ಸಿಗದೇ ಮರಳುತ್ತಾನೆ.

2.ಈ ದಿನವೇ ಹನ್ನೆರಡು ಜ್ಯೋತಿರ್ಲಿಂಗಗಳ ದರ್ಶನ:
ಶಿವಪುರಾಣದಲ್ಲಿ ಉಲ್ಲೇಖವಾಗಿರುವಂತೆ ಮಹಾಶಿವರಾತ್ರಿಯಂದು ದೇಶದಾದ್ಯಂತ ಹನ್ನೆರಡು ಜ್ಯೋತಿರ್ಲಿಂಗಗಳು ಕಾಣಿಸಿಕೊಂಡವು ಎಂದು ಹೇಳಲಾಗುತ್ತದೆ. ಸೋಮನಾಥ, ಮಲ್ಲಿಕಾರ್ಜುನ, ಮಹಾಕಾಳೇಶ್ವರ, ಓಂಕಾರೇಶ್ವರ, ಕೇದಾರನಾಥ, ಭೀಮಾಶಂಕರ, ವಿಶ್ವನಾಥ, ತ್ರಯಂಬಕೇಶ್ವರ, ವೈದ್ಯನಾಥ, ನಾಗೇಶ್ವರ, ರಾಮೇಶ್ವರ ಹಾಗೂ ಗ್ರೀಷ್ಣೇಶ್ವರ ಈ ಹನ್ನೆರಡು ಜ್ಯೋತಿರ್ಲಿಂಗಗಳ ದರ್ಶನಕ್ಕಾಗಿಯೂ ಕೂಡ ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ.

3.ಶಿವ ಶಕ್ತಿಯ ಸಮ್ಮಿಲನವಾದ ದಿನ:
ಶಾಸ್ತ್ರ ಹಾಗೂ ಶಿವ ಪುರಾಣಗಳ ಪ್ರಕಾರ, ಪಾರ್ವತಿ ದೇವಿಯು ತಾನು ಮದುವೆಯಾಗುವುದಾದರೆ ಅದು ಶಿವನನ್ನೇ ಎಂದು ಕಠಿಣ ತಪಸ್ಸನ್ನಾಚರಿಸಿದಳು.ಈ ತಪಸ್ಸಿನ ಫಲವಾಗಿಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿಯಂದು ಪಾರ್ವತಿ ದೇವಿಯು ಶಿವನೊಂದಿಗೆ ವಿವಾಹವಾಗುತ್ತಾಳೆ. ಈ ದಿನವನ್ನೇ ಮಹಾಶಿವರಾತ್ರಿಯನ್ನಾಗಿ ಎಂದಿಗೂ ಆಚರಿಸುತ್ತೇವೆ ಎಂದು ಶಾಸ್ತ್ರಗಳು ಹೇಳುತ್ತವೆ.

ಇದನ್ನೂ ಓದಿ : Maha shivaratri- Yamapooje: ಯಾಮಪೂಜೆ ಎಂದರೇನು?: ಇದರ ವಿಧಿವಿಧಾನಗಳೇನು ಗೊತ್ತಾ?

ಇದನ್ನೂ ಓದಿ : Mahashivratri jagarane: ಆಧ್ಯಾತ್ಮದ ಜೊತೆಗೆ ವೈಜ್ಞಾನಿಕ ಕಾರಣವನ್ನು ಹೊಂದಿರುವ ಪುಣ್ಯ ಆಚರಣೆ ಈ ಮಹಾಶಿವರಾತ್ರಿ ಜಾಗರಣೆ

Maha Shivaratri stories: Behind the celebration of Maha Shivaratri are these amazing stories

Comments are closed.