ಭಾನುವಾರ, ಏಪ್ರಿಲ್ 27, 2025
HomeCinemaನವೆಂಬರ್ ನಲ್ಲಿ ತೆರೆಗೆ ಬರುತ್ತೆ ಬಹುನಿರೀಕ್ಷಿತ ಸಿನಿಮಾ : ಪ್ರೇಮ ಕಾವ್ಯದ ಜೊತೆಗೆ ಇತಿಹಾಸ ಸೃಷ್ಟಿಸುತ್ತಾ...

ನವೆಂಬರ್ ನಲ್ಲಿ ತೆರೆಗೆ ಬರುತ್ತೆ ಬಹುನಿರೀಕ್ಷಿತ ಸಿನಿಮಾ : ಪ್ರೇಮ ಕಾವ್ಯದ ಜೊತೆಗೆ ಇತಿಹಾಸ ಸೃಷ್ಟಿಸುತ್ತಾ ಗಡಿಯಾರ !

- Advertisement -

ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಸಿನಿಮಾ ಗಡಿಯಾರ ಚಿತ್ರತಂಡ ಗುಡ್ ನ್ಯೂಸ್ ಕೊಟ್ಟಿದೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿ ರುವ ವಿಭಿನ್ನ ಕಥಾಹಂದರ ಹೊಂದಿರುವ ಗಡಿಯಾರ ಮುಂದಿನ ತಿಂಗಳು ತೆರೆಗೆ ಬರಲು ಸಿದ್ದವಾಗಿದ್ದು, ಸಿನಿ ಪ್ರೇಕ್ಷಕರು ಕಾತರರಾಗಿ ದ್ದಾರೆ.

ಬಹುತಾರಾಗಣವನ್ನು ಹೊಂದಿರುವ ಪಕ್ಕಾ ಕಮರ್ಷಿಯಲ್ ಸಿನಿಮಾ ಗಡಿಯಾರ ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ರಾಜ್ ದೀಪಕ್ ಶೆಟ್ಟಿ, ಶೀತಲ್ ಶೆಟ್ಟಿ, ಸುಚೇಂದ್ರ ಪ್ರಸಾದ್ ಶರತ್ ಲೋಹಿತಾಶ್ವ ಸೇರಿದಂತೆ ಸ್ಟಾರ್ ನಟರ ದಂಡೇ ಚಿತ್ರದಲ್ಲಿದೆ. ಟೈಟಲ್ ನಿಂದಲೇ ಸಾಕಷ್ಟು ಕ್ರೇಜ್ ಕ್ರಿಯೇಟ್ ಮಾಡಿರುವ ಗಡಿಯಾರ ಸಿನಿಮಾದ ಟೀಸರ್, ಪೋಸ್ಟರ್ ರಿಲೀಸ್ ಆಗಿದ್ದು ತೀವ್ರ ಕೂತೂಹಲವನ್ನು ಹುಟ್ಟುಹಾಕಿದ್ದು, ಸಿನಿಮಾ ತೆರೆಗೆ ಬರೋದನ್ನೇ ಪ್ರೇಕ್ಷಕರು ತುದಿಗಾಲಲ್ಲಿ ಕಾಯುವಂತೆ ಮಾಡಿದೆ.

ಸಿನಿಮಾದ ಶೂಟಿಂಗ್ ಈಗಾಗಲೆ ಪೂರ್ಣಗೊಂಡಿದ್ದು ಮಾತ್ರವಲ್ಲದೇ ಸೆನ್ಸಾರ್ ಮಂಡಳಿಯಿಂದಲೂ ಪ್ರಶಂಸೆಗಳಿಸಿ “ಯು /ಎ” ಸರ್ಟಿಫಿಕೇಟ್ ಪಡೆದುಕೊಂಡಿದ್ದು ರಿಲೀಸ್ ಗೆ ರೆಡಿಯಾಗಿದೆ. ಗಡಿಯಾರ ಸಿನಿಮಾದ ಹಿಂದಿ, ತಮಿಳು, ತೆಲುಗು, ಮಲಯಾಲಂ ಭಾಷೆಯ ಡಬ್ಬಿಂಗ್ ರೈಟ್ಸ್ ಗಾಗಿ ಭಾರಿ ಡಿಮ್ಯಾಂಡ್ ಬಂದಿದ್ದು, ಈಗಾಗಲೇ ಚಿತ್ರತಂಡದ ಜೊತೆಗೆ ಮಾತುಕತೆ ನಡೆದಿದೆ. ಕರಾವಳಿ ಮೂಲದ ಯುವ ಪ್ರತಿಭಾನ್ವಿತ ನಿರ್ದೇಶಕರಾಗಿರೋ ಪ್ರಬಿಕ್ ಮೊಗವೀರ್ ಗಡಿಯಾರ ಸಿನಿಮಾಕ್ಕೆ ಅದ್ಬುತ ಕಥೆ, ಚಿತ್ರಕಥೆ ಸಿದ್ದ ಪಡಿಸಿ ಸಂಭಾಷಣೆಯನ್ನೂ ಬರೆದಿದ್ದಾರೆ. ಅಷ್ಟೇ ಅಲ್ಲಾ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ಬಂಡವಾಳವನ್ನೂ ಹೂಡಿದ್ದಾರೆ.

ಪತ್ರಕರ್ತರಾಗಿ, ನಿರ್ದೇಶಕರಾಗಿರುವ ಪ್ರಬೀಕ್ ಮೊಗವೀರ್ ಅವರು, ದೀಪಿಕಾ ವಿನಯ್ ಕುಮಾರ್ ರಾವ್ ಮತ್ತು ಲಾವಣ್ಯ ಲೀಲಾ ಮೋಹನ ಅವರ ಸಹಕಾರದೊಂದಿಗೆ ” ಆತ್ಮಸಿನಿಮಾಸ್ ” ಸಂಸ್ಥೆಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಿವೃತ್ತ ಖಡಕ್ ಪೊಲೀಸ್ ಅಧಿಕಾರಿ ಸಾಂಗ್ಲಿಯಾನ ಅವರು ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಇನ್ನೊಂದು ವಿಶೇಷ. ಅಷ್ಟೇ ಅಲ್ಲಾ ” ಯಶ್ ಶೆಟ್ಟಿ ” ಅವರ ವಿಶೇಷ ಅಭಿನಯ ಸಿನಿಮಾದಲ್ಲಿದೆ. ಖ್ಯಾತ ಮಲಯಾಂ ನಟ ರಿಹಾಜ್ಎಂ.ಟಿ., ಬಾಲಿವುಡ್ ನಟ ಗೌರಿಶಂಕರ್ ಕೂಡ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಖ್ಯಾತ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅವರ ಸಾಹಸದ ಜೊತೆಗೆ ಶ್ಯಾಮ್ ಸಿಂಧನೂರು ಅವರ ಛಾಯಾಗ್ರಹಣ ಸಿನಿಮಾಕ್ಕಿದೆ.

ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಅನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಿಡುಗಡೆ ಮಾಡಿ ಶುಭ ಹಾರೈಸಿದ್ರೆ, ಮತ್ತೊಂದು ಪೋಸ್ಟರ್ ಅನ್ನು ಸಚಿವ ವಿ.ಸೋಮಣ್ಣ ಅವರು ಲೋಕಾರ್ಪಣೆಗೊಳಿಸಿದ್ದಾರೆ.

ಇನ್ನು ಸಿನಿಮಾದ ಶೀರ್ಷಿಕೆಯನ್ನು ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಪಿ.ಸಾಂಗ್ಲಿಯಾನ ಮತ್ತು ಸೂಪರಿಟೆಂಡೆಂಟ್ ಆಫ್ ಪೊಲೀಸ್ ಪ್ರಭಾಕರ ಬಾರ್ಕಿ ಅವರು ಚಿತ್ರಕ್ಕೆ ಶುಭಕೋರಿದ್ದಾರೆ. ಅಲ್ಲದೇ ಅಸಿಸ್ಟೆಂಟ್ ಪೊಲೀಸ್ ಕಮಿಷನರ್ ನಾಗೇಂದ್ರ ಪ್ರಸಾದ್ ಅವರು ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.

ಆತ್ಮ ಸಿನೆಮಾಸ್ ಬ್ಯಾನರ್ ನಡಿ ಮೂಡಿ ಬರುತ್ತಿರುವ ಚಿತ್ರದಲ್ಲಿ ಪ್ರದೀಪ್ ಪೂಜಾರಿ, ಗಣೇಶ್ ರಾವ್, ರಾಧಾ ರಾಮಚಂದ್ರ, ಮಂದೀಪ್ ರಾಯ್, ಪ್ರಣಯ ಮೂರ್ತಿ, ರಾಜ್ ಮುನಿ, ಡಿವೈಎಸ್ ಪಿ ಚಬ್ಬಿ, ಮೋಕ್ಷಗೊಂಡಂ ರಾಘವೇಂದ್ರ, ಶ್ರೀನಿವಾಸ್ ಜಿ, ಶಿವಕುಮಾರ್ ನಗರ್ ನವಿಲೆ, ವಿನಯ್ ಕುಮಾರ್ ರಾವ್, ಲೀಲಾ ಮೋಹನ್, ಸಂತೋಷ್ ಗೌಡ, ದೇವರಾಜ್, ಸಂಕಲ್ಪ್, ಸಚಿನ್ ಪುರೋಹಿತ್, ವಿಕಾಸ್, ಶರ್ಮಿತಾ ಶೆಟ್ಟಿ, ಸುರಕ್ಷಿತ್ ಶೆಟ್ಟಿ, ಸ್ಪೋರ್ತಿ ಕರಡಿ, ದಬಾಂಗನಾ ಚೌಧ್ರಿ, ಪ್ರಿಯದರ್ಶನಿ ಗೌಡ, ಅರ್ಪಿತಾ ವೇಣೂರ್, ಶಿವಮೊಗ್ಗ ರಾಮಣ್ಣ ಸೇರಿದಂತೆ ಹಲವರು ಗಡಿಯಾರದಲ್ಲಿ ಬಣ್ಣ ಹಚ್ಚಿದ್ದಾರೆ.

ಗಡಿಯಾರ ಮ್ಯೂಸಿಕಲ್ ಹಿಟ್ ಸಿನಿಮಾವಾಗೋದು ಪಕ್ಕಾ. ರಾಘವ್ ಸುಭಾಷ್ ಅವರ ಸಂಗೀತಕ್ಕೆ ಹೇಮಂತ್ ಕುಮಾರ್, ವ್ಯಾಸರಾಜ್, ಅನುರಾಧಾ ಭಟ್, ಅಪೂರ್ವ ಶ್ರೀಕುಮಾರ್ ಅವರ ಧ್ವನಿಯಲ್ಲಿ ಹಾಡುಗಳು ಅದ್ಬುತವಾಗಿ ಮೂಡಿಬಂದಿದೆ ಸಿನಿಮಾದ ಹಾಡುಗಳು ಕೇಳುಗರಿಗೆ ಕಿವಿಗಿಂಪು ನೀಡುತ್ತಿದ್ದು, ಖ್ಯಾತ ಆಡಿಯೋ ಸಂಸ್ಥೆ ಆಕಾಶ್ ಆಡಿಯೋ ಈಗಾಗಲೇ ಗಡಿಯಾರ ಸಿನಿಮಾದ ಆಡಿಯೋ ರೈಟ್ಸ್ ಖರೀದಿಸಿದೆ.

ಲವ್, ಕಾಮಿಡಿ, ಹಾರರ್, ಸಸ್ಪೆನ್ಸ್, ಥ್ರಿಲ್ಲರ್, ಆ್ಯಕ್ಷನ್ ಜೊತೆಗೆ ರಾಜ ಮನೆತನಗಳ ಇತಿಹಾಸವನ್ನು ನೆನಪಿಸುವ ಅತ್ಯದ್ಬುತ ಕಥೆಯನ್ನು ಸಿದ್ದಪಡಿಸಿದ್ದಾರೆ ನಿರ್ದೇಶಕ ಪ್ರಬೀಕ್ ಮೊಗವೀರ್. ಸದ್ಯ ರಿಲೀಸ್ ಆಗುತ್ತಿರೋ ಸಿನಿಮಾಗಳ ಸಾಲಿನಲ್ಲಿ ಗಡಿಯಾರ ಮುಂಚೂಣಿಯಲ್ಲಿ ನಿಂತಿದೆ. ಅತೀ ಶೀಘ್ರದಲ್ಲಿಯೇ ಗಡಿಯಾರ ಬೆಳ್ಳಿ ತೆರೆಯಲ್ಲಿ ವಿಜ್ರಂಭಿಸಲಿದ್ದು, ಸಿನಿಮಾದ ಬಿಡುಗಡೆಗೆ ಪ್ರೇಕ್ಷಕರು ಕೂಡ ಕುತೂಹಲದಿಂದ ಕಾಯುತ್ತಿದ್ದಾರೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular