ಬೆಂಗಳೂರು : ಡಿ ಬಾಸ್.. ಸ್ಯಾಂಡಲ್ ವುಡ್ ನ ಬಾಕ್ಸ್ ಆಫೀಸ್ ಸುಲ್ತಾನ್. ಲಕ್ಷಾಂತರ ಅಭಿಮಾನಿಗಳ ಪಾಲಿನ ಚಾಲೆಂಜಿಂಗ್ ಸ್ಟಾರ್. ಹೌದು, ಸ್ಯಾಂಡಲ್ ವುಡ್ ನಟ ದಚ್ಚು ದರ್ಶನ್ ಗೆ ಎಫ್ ಐಆರ್ ಸಂಕಷ್ಟ ಎದುರಾಗಿದೆ.

ಡಿ ಬಾಸ್ ಜುಲೈ 17ರಂದು ಕೊನೆಯ ಆಷಾಢ ಶುಕ್ರವಾರದಂದು ಚಾಮುಂಡಿ ಬೆಟ್ಟಕ್ಕೆ ತನ್ನ ಸ್ನೇಹಿತರ ಜೊತೆಗೆ ಭೇಟಿಯನ್ನು ಕೊಟ್ಟು, ದೇವರ ದರ್ಶನವನ್ನು ಪಡೆದುಕೊಂಡಿದ್ದರು.

ಈ ವೇಳೆಯಲ್ಲಿ ದರ್ಶನ್ ಹಾಗೂ ಸ್ನೇಹಿತರು ಮಾಸ್ಕ್ ಧರಿಸಿಲ್ಲಾ, ಸಾಮಾಜಿಕ ಅಂತರ ಕಾಪಾಡಿಲ್ಲಾ ಅಂತಾ ವಕೀಲರಾದ ಗೀತಾ ಮಿಶ್ರಾ ಹೈಕೋರ್ಟ್ ಗೆ ಎನ್ ಡಿಎಂ ಕಾಯ್ದೆ 51ರ ಅಡಿಯಲ್ಲಿ ದೂರು ಸಲ್ಲಿಸಿದ್ದರು.

ಗೀತಾ ಮಿಶ್ರಾ ಸಲ್ಲಿಸಿರುವ ದೂರಿನ ವಿಚಾರಣೆ ಇಂದು ನಡೆಯಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಅವರ ವಿಚಾರಣೆಯನ್ನೂ ಹೈಕೋರ್ಟ್ ನಡೆಸುವ ಸಾಧ್ಯತೆಯಿದೆ.

ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಡಿ ಬಾಸ್ ವಿರುದ್ದ ದಾಖಲಾಗಿರುವ ಪ್ರಕರಣ ದರ್ಶನ್ ತೂಗುದೀಪ್ ಅವರಿಗೆ ಸಂಕಷ್ಟವನ್ನು ತಂದೊಡ್ಡುತ್ತಾ ಅನ್ನುವ ಆತಂಕ ಎದುರಾಗಿದೆ. ಆದರೆ ಹೈಕೋರ್ಟ್ ದರ್ಶನ್ ಅವರಿಗೆ ಪ್ರಕರಣದಿಂದ ಬಿಗ್ ರಿಲೀಫ್ ಕೊಡಲಿ ಅಂತಾ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.