ಸ್ಯಾಂಡಲ್‌ವುಡ್ ಆಕ್ಷನ್ ಫ್ರಿನ್ಸ್ ಧ್ರುವ ಸರ್ಜಾ ಹಾಗೂ ನಿರ್ದೇಶಕ ಪ್ರೇಮ್ (Sanjay Dutt – Director Prem) ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಕೆಡಿ ಸಿನಿಮಾದ ಶೂಟಿಂಗ್ ವೇಳೆ ಅವಘಡ ಸಂಭವಿಸಿದೆ. ಈ ಸಿನಿಮಾದ ಬಾಂಬ್ ಬ್ಲಾಸ್ಟ್ ದೃಶ್ಯದ ಶೂಟಿಂಗ್ ವೇಳೆ ನಟ ಸಂಜಯ್ ದತ್‌ಗೆ ಗಾಯಗೊಂಡಿದ್ದಾರೆ ಎಂದು ಸುದ್ದಿ ಹರಿದಾಡಿದ್ದವು. ಈ ಕುರಿತಂತೆ ನಿರ್ದೇಶಕ ಪ್ರೇಮ್ ವದಂತಿ ಸುಳ್ಳು ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.
ನಿರ್ದೇಶಕ ಪ್ರೇಮ್ ಟ್ವೀಟ್‌ನಲ್ಲಿ, “ಕೆಡಿ ಸೆಟ್‌ನಲ್ಲಿ ಸ್ಫೋಟ ಸಂಭವಿಸಿದ್ದು, ದತ್ತಸಂಜಯ್ ಬಾಬಾ ಅವರಿಗೆ ಗಂಭೀರ ಗಾಯವಾಗಿದೆ ಎಂದು ವರದಿಗಳು ಹೇಳುತ್ತಿವೆ. ಈ ವರದಿಗಳು ಸುಳ್ಳು. ಹೌದು ಒಂದು ಸಣ್ಣ ಘಟನೆ ನಡೆದಿದೆ ಆದರೆ ಸಂಜಯ್ ದತ್ ಸಂಪೂರ್ಣವಾಗಿ ಚೆನ್ನಾಗಿದ್ದಾರೆ ಮತ್ತು ಶೂಟಿಂಗ್ ಪುನರಾರಂಭವಾಗಿದೆ. ನಿಮ್ಮ ಕಾಳಜಿಗೆ ಧನ್ಯವಾದಗಳು” ಎಂದು ಪೋಸ್ಟ್ ಮಾಡಿದ್ದಾರೆ.
Reports are going around stating that there was an explosion on the sets of #KD which resulted in a serious injury to @duttsanjay baba. These reports are false. Yes there was a small incident but #SanjayDutt is perfectly fine and shooting has resumed. Thank you for your concern❤️ pic.twitter.com/exZnyfXica
— PREM❣️S (@directorprems) April 13, 2023
ಶೂಟಿಂಗ್ ವೇಳೆಯಲ್ಲಿ ಅವಘಡ ಸಂಬವಿಸಿದ್ದು, ನಟ ಸಂಜಯ್ ದತ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆದುಕೊಂಡು ಮುಂಬೈಗೆ ವಾಪಸ್ ಆಗಿದ್ದಾರೆ. ಸಂಜಯ್ ದತ್ ಅವರ ಮುಖ, ಮೊಣಕೈಗೆ ಗಾಯಗಳಾಗಿವೆ. ಆತಂಕ ಪಡುವ ಅಗತ್ಯವೇನೂ ಇಲ್ಲ. ಹೀಗಾಗಿ ಗಾಯ ಸೀರಿಯಸ್ ಆಗಿಲ್ಲ. ಆದರೆ ತಾತ್ಕಾಲಿಕವಾಗಿ ಶೂಟಿಂಗ್‌ಗೆ ಬ್ರೇಕ್ ಬಿದ್ದಿದೆ. ಮಾಗಡಿ ರೋಡ್‍ನಲ್ಲಿ ಹಾಕಿರುವ ಸೆಟ್‍ನಲ್ಲಿ ಸಾಹಸ ನಿರ್ದೇಶಕ ರವಿವರ್ಮ ಸೆಟ್ ಹಾಕಿ ಶೂಟಿಂಗ್ ಮಾಡುತ್ತಿದ್ದರು. ಈ ವೇಳೆ ಬಾಂಬ್ ಸ್ಫೋಟದ ದೃಶ್ಯ ಶೂಟಿಂಗ್ ವೇಳೆ ಈ ಅಪಘಾತ ಸಂಭವಿಸಿದೆ. 1970ರ ಕಾಲಘಟ್ಟದ ಕಥೆಯಲ್ಲಿ ಸಂಜಯ್ ದತ್ ಪ್ರಮುಖ ವಿಲನ್ ರೋಲ್ ಮಾಡುತ್ತಿದ್ದಾರೆ.
ಘಟನೆಯ ಬಗ್ಗೆ ಸಂಜಯ್ ದತ್ ನಾನು ಗಾಯಗೊಂಡಿದ್ದೇವೆ ಎಂಬ ಸುದ್ದಿ ಹರದಾಡುತ್ತಿದೆ. ಆ ಸುದ್ದಿಗಳು ಸಂಪೂರ್ಣವಾಗಿ ಆಧಾರರಹಿತ, ನನಗೆ ಏನೂ ಆಗಿಲ್ಲ ದೇವರ ದಯೆಯಿಂದ ನಾನು ಆರೋಗ್ಯವಾಗಿದ್ದೇನೆ. ನಾನು ಕೆಡಿ ಸಿನಿಮಾದ ಶೂಟಿಂಗ್‌ನಲ್ಲಿ ತೊಡಗಿಕೊಂಡಿದ್ದೇನೆ, ನನ್ನ ದೃಶ್ಯಗಳನ್ನು ಚಿತ್ರೀಕರಿಸುವಾಗ ಸಿನಿತಂಡವು ಹೆಚ್ಚಿನ ಎಚ್ಚರಿಕೆ ವಹಿಸುತ್ತಿದೆ. ನನ್ನ ಆರೋಗ್ಯದ ಬಗ್ಗೆ ಕಾಳಜಿವಹಿಸಿ ವಿಚಾರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ : ಕೆಡಿ ಸಿನಿಮಾ ಶೂಟಿಂಗ್ ವೇಳೆ ದುರಂತ : ನಟ ಸಂಜಯ್ ದತ್ ಆಸ್ಪತ್ರೆಗೆ ದಾಖಲು
ಕೆಡಿ ಸಿನಿಮಾದ ಸಹ ನಿರ್ಮಾಪಕ ಸುಪ್ರೀತ್, “ಕಾರಿನಲ್ಲಿ ಬಾಂಬ್ ಬ್ಲಾಸ್ಟ್ ನ ದೃಶ್ಯದ ಶೂಟಿಂಗ್ ಮಾಡುವಾಗ ಸಂಜಯ್ ದತ್ ಅವರ ಕಣ್ಣಿಗೆ ಗ್ಲಾಸ್ ಸಿಡಿದಿದು ರಕ್ತ ಬಂದಿದೆ. ಕೂಡಲೇ ಪ್ರಥಮ ಚಿಕಿತ್ಸೆ ನೀಡಿ ಸಂಜಯ್ ದತ್ ಶೀಘ್ರವೇ ಮುಂಬೈಗೆ ಸ್ಥಳಾಂತರಿಸಲಾಗಿದ್ದು, ಸಂಜಯ್ ದತ್ ಸದ್ಯಕ್ಕೆ ಚೇತರಿಸಿಕೊಳ್ಳುತ್ತಿದ್ದಾರೆ. ಅವಘಡದ ಬಳಿಕ ಶೂಟಿಂಗ್ ಅನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ” ಎಂದು ಹೇಳಿದರು. ಜೋಗಿ ಪ್ರೇಮ್ ನಿರ್ದೇಶನದ ಕೆಡಿ ಸಿನಿಮಾದಲ್ಲಿ ಸಂಜಯ್ ದತ್, ರವಿಚಂದ್ರನ್, ಶಿಲ್ಪಾ ಶೆಟ್ಟಿ ಸೇರಿದಂತೆ ದೊಡ್ಡ ದೊಡ್ಡ ಕಲಾವಿದರು ನಟಿಸುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್‍ನವರ ಕೆಡಿ ಮುಂದಿನ ವರ್ಷ ತೆರೆಗೆ ಬರುವ ನಿರೀಕ್ಷೆ ಇದೆ.
Sanjay Dutt – Director Prem : Actor Sanjay Dutt injured on KD sets : Director Prem says fake news