ಸರಿಗಮಪ ಸೀಸನ್ 19 : ಫಿನಾಲೆ ಗೆದ್ದ ಹಳ್ಳಿ ಪ್ರತಿಭೆ ಪ್ರಗತಿ ಬಡಿಗೇರ್‌

ಕಿರುತರೆಯಲ್ಲಿ ಇತ್ತೀಚೆಗೆ ರಿಯಾಲಿಟಿ ಶೋಗಳದೇ ಹಾವಳಿ ಆಗಿಬಿಟ್ಟಿದೆ. ಯಾಕೆಂದರೆ ಹೆಚ್ಚಿನವರು ಕೆಲಸದಲ್ಲಿ ಬ್ಯುಸಿಯಾಗಿರುವುದರಿಂದ ವೀಕೆಂಡ್‌ನಲ್ಲಿ ಬರುವ ರಿಯಾಲಿಟಿ ಶೋಗಳಿಗೆ ಹೆಚ್ಚು ವೀಕ್ಷಣೆ ಮಾಡುತ್ತಿದ್ದಾರೆ. ವಾರದ ಕೊನೆಯಲ್ಲಿ ಪ್ರಸಾರವಾಗುವ ಒಂದಷ್ಟು ರಿಯಾಲಿಟಿ ಶೋಗಳು ಜನರನ್ನು ಹೆಚ್ಚು ಮನರಂಜಿಸುತ್ತಿದೆ. ಅದರಲ್ಲೂ ಇತ್ತೀಚೆಗೆ ಕಿರುತೆರೆ ಹೆಚ್ಚಿನ ಚಾನೆಲ್‌ಗಳು ಬಿಗ್​ ಬಾಸ್​, ರಾಜಾ ರಾಣಿ, ಜೋಡಿ ನಂ.1, ಸೂಪರ್‌ ಕ್ವೀನ್‌, ಇಸ್ಮಾರ್ಟ್ ಜೋಡಿ, ಸರಿಗಮಪ ಸೇರಿದಂತೆ ಒಂದಿಲ್ಲೊಂದು ರಿಯಾಲಿಟಿ ಶೋಗಳು ನಡೆಸುತ್ತಾ ಬಂದಿದ್ದಾರೆ. ಅದರಲ್ಲೂ ಈ ಬಾರಿಯ ಸರಿಗಮಪ ಸೀಸನ್ 19 (Sarigamapa Season 19) ಗ್ರ್ಯಾಂಡ್‌ ಫಿನಾಲೆ ನಡೆದಿದ್ದು, ಅದರಲ್ಲಿ ಹಳ್ಳಿ ಪ್ರತಿಭೆಯೊಂದು ವಿನ್ನರ್‌ ಪಟ್ಟವನ್ನು ಅಲಂಕರಿಸಿದೆ.

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಸರಿಗಮಪ ಸೀಸನ್ 19 ಈ ಬಾರಿ ಹೆಚ್ಚು ಜನಮನ್ನಣೆ ಪಡೆದಿದೆ. ಯಾಕೆಂದರೆ ಈ ಸಲ ಬಂದಿರುವ ಪ್ರತಿಯೊಂದು ಸ್ಫರ್ಧಿಗಳು ಅದ್ಭುತ ಕಂಠಸಿರಿಯ ಮೂಲಕ ಕರ್ನಾಟಕ ಜನರನ್ನು ಮನರಂಜಿಸಿರುತ್ತಾರೆ. ಹೀಗಾಗಿ ಪ್ರೇಕ್ಷಕರು ಪ್ರತಿ ವೀಕೆಂಡ್‌ನಲ್ಲಿ ಈ ಕಾರ್ಯಕ್ರಮವನ್ನು ತಪ್ಪದೇ ನೋಡಿದ್ದಾರೆ. ಇನ್ನು ಈ ಬಾರೀ ಸರಿಗಮಪ ಸೀಸನ್ 19 ವಿನ್ನರ್ ಆಗಿ ಪ್ರಗತಿ ಬಡಿಗೇರ್ ಹೊರಹೊಮ್ಮಿದ್ದಾರೆ. ರನ್ನರ್ ಅಪ್ ಪಟ್ಟವನ್ನು ಶಿವಾನಿ ಅವರು ಅಲಂಕರಿಸಿದ್ದಾರೆ. ಹೀಗಾಗಿ ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಸರಿಗಮಪ ಸೀಸನ್ 19 ಕಾರ್ಯಕ್ರಮಕ್ಕೆ ಕಳೆದ ವಾರ ಈ ಸೀಸನ್‌ ಮುಕ್ತಾಯಗೊಳಿಸಿರುತ್ತಾರೆ. ಸರಿಗಮಪ ಸೀಸನ್ 19 ವಿನ್ನರ್ ಆಗಿ ಪ್ರಗತಿ ಬಡಿಗೇರ್ ಹೊರಹೊಮ್ಮಿದ್ದಾರೆ.

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಸರಿಗಮಪ ಶೋವನ್ನು ಬೆಂಗಳೂರಿನಲ್ಲಿ ನಡೆಸಲಾಗಿದೆ. ಆದರೆ ಫಿನಾಲೆಯನ್ನು ಮಾತ್ರ ರಾಜ್ಯದ ವಿವಿಧ ಭಾಗಗಳಲ್ಲಿ ನಡೆಸಿರುವುದು ವಿಶೇಷವಾಗಿದೆ. ಇನ್ನು ಮೊದಲಿನಿಂದ ಈ ಕಾರ್ಯಕ್ರಮವನ್ನು ಆ್ಯಂಕರ್‌ ಆಗಿ ಅನುಶ್ರೀ ನಡೆಸಿಕೊಂಡು ಬಂದಿದ್ದು, ಈ ಸಲ ಕೂಡ ಅವರೇ ನಡೆಸಿಕೊಟ್ಟಿದ್ದಾರೆ. ಇನ್ನು ತೀರ್ಪುಗಾರರಾಗಿ ಹಂಸಲೇಖ ವಿಜಯ್‌ ಪ್ರಕಾಶ್‌, ಅರ್ಜುನ್‌ ಜನ್ಯ ಸೇರಿದಂತೆ ಮೊದಲಾದವರು ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ : ಗೋವುಗಳೊಂದಿಗೆ ಮಗ ರಣ್ವಿತ್‌ ಶೆಟ್ಟಿ ಹುಟ್ಟುಹಬ್ಬ ಆಚರಿಸಿದ ಕಾಂತಾರ ನಟ ರಿಷಬ್‌ ಶೆಟ್ಟಿ

ಇದನ್ನೂ ಓದಿ : ನಾಳೆ ಡಾರ್ಲಿಂಗ್‌ ಕೃಷ್ಣ ಅಭಿನಯದ ಕೌಸಲ್ಯಾಸುಪ್ರಜಾರಾಮ ಸಿನಿಮಾದ ಫಸ್ಟ್‌ ಸಾಂಗ್‌ ರಿಲೀಸ್

ವಿನ್ನರ್ ಆದ ಪ್ರಗತಿ ಬಡಿಗೇರ್​ಗೆ ನೆಲಮಂಗಲ ಪ್ರಾಜೆಕ್ಟ್​​ನಲ್ಲಿ 30-40 ಅಡಿಯ ಸೈಟ್ ದೊರತಿದೆ. ಇದು 21 ಲಕ್ಷ ರೂಪಾಯಿ ಇದರ ಮೌಲ್ಯ ಆಗಿರುತ್ತದೆ. ಇದರ ಜೊತೆ 4 ಲಕ್ಷ ರೂಪಾಯಿ ನಗದು ಸಿಕ್ಕಿದೆ. ಮೊದಲ ರನ್ನರ್​ಅಪ್​ ಶಿವಾನಿಗೆ 20 ಲಕ್ಷ ರೂಪಾಯಿ ಹಣ ಸಿಕ್ಕಿದೆ. ಎರಡನೇ ರನ್ನರ್ ಅಪ್​ ತನುಶ್ರೀಗೆ ಐದು ಲಕ್ಷ ರೂಪಾಯಿ ಎಲೆಕ್ಟ್ರಿಕ್ ವಾಹನ ಹಾಗೂ ಐದು ಲಕ್ಷ ರೂಪಾಯಿ ನಗದು ದೊರೆತಿದೆ.

Sarigampa Season 19 : Village talent Pragati Badiger won the finale

Comments are closed.