Sarkari Hiriya Prathamika Shale Kasaragod Movie : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾಕ್ಕೆ ಐದು ವರ್ಷ ಸಂಭ್ರಮ

ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ ಅವರ ನಿರ್ದೇಶಿಸಿ, ನಿರ್ಮಿಸಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾ (Sarkari Hiriya Prathamika Shale Kasaragod Movie) ಬಿಡುಗಡೆಯಾಗಿ ಐದು ವರ್ಷ ಕಳೆದಿದೆ. ಈ ಸಂಭ್ರಮವನ್ನು ನಟ – ನಿರ್ದೇಶಕ ರಿಷಬ್‌ ಶೆಟ್ಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಭಾಷೆ ಅಭಿಮಾನದ ಬಗ್ಗೆ ಬಹಳ ವಿಶೇಷವಾಗಿ ಹಂಚಿಕೊಂಡಿದ್ದಾರೆ.

ನಟ ರಿಷಬ್‌ ಶೆಟ್ಟಿ, “ಕನಸು ಕಂಡ ಭಾಷೆಯಲ್ಲಿ ಮಗುವಿಗೆ ಶಿಕ್ಷಣ ಸಿಗಬೇಕೆಂಬ ಆಶಯ, ಕನಸು ಕಂಡ ಕಥೆಯನ್ನು ಜಗಕ್ಕೆ ಹೇಳಬೇಕೆಂಬ ಆಕಾಂಕ್ಷೆ, ಇದೆರಡೂ ಒಂದಾಗಿ ಕನಸೊಂದು ಸಿನಿಮಾವಾಗಿ ತೆರೆ ಮೇಲೆ ಮೂಡಿದ ಆ ದಿನಕ್ಕಿಂದು ಐದು ವರ್ಷ” ಚಿತ್ರೀಕರಣದ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾವನ್ನು ರಿಷಭ್ ಶೆಟ್ಟಿ ಅವರು ನಿರ್ಮಿಸಿ ನಿರ್ದೇಶಿಸಿದ್ದಾರೆ. ಈ ಸಿನಿಮಾದಲ್ಲಿ ಗಡಿನಾಡಿನಲ್ಲಿರುವ ಕನ್ನಡ ಶಾಲೆಗಳ ಪರಿಸ್ಥತಿ ಮತ್ತು ಅಲ್ಲಿ ಕನ್ನಡಿಗರಿಗೆ ಉಂಟಾಗುವ ತೊಂದರೆಗಳನ್ನೂ ಈ ಸಿನಿಮಾದಲ್ಲಿ ನಿರ್ದೇಶಕರು ತೋರಿಸಿದ್ದಾರೆ. ಈ ಸಿನಿಮಾದ ಹೆಚ್ಚಿನ ಚಿತ್ರೀಕರಣ ಕಾಸರಗೋಡು , ಮಂಗಳೂರು , ಸುಳ್ಯ ಪರಿಸರದಲ್ಲಿ ನಡೆದಿದ್ದು ಕೆಲವು ಭಾಗಗಳು ಮಡಿಕೇರಿ ಮತ್ತು ಮೈಸೂರಿನಲ್ಲಿ ನಡೆದಿದೆ. ಇದನ್ನೂ ಓದಿ : ಸಪ್ತಪದಿ ತುಳಿಯಲು ಸಜ್ಜಾದ ಹರ್ಷಿಕಾ ಪೂಣಚ್ಚ- ಭುವನ್‌ ಜೋಡಿ : ಕಿವಿಯೋಲೆ ಗಿಫ್ಟ್‌ ಕೊಟ್ಟ ಜಯಮಾಲ

ಸಿನಿಮಾವನ್ನು ಸುಮಾರು 55ದಿನಗಳ ಕಾಲ ನಡೆಸಲಾಗಿತ್ತು. ಇದನ್ನು ಕಾಸರಗೋಡು, ಕುಂಬ್ಳೆ, ಬೇಕಲಕೋಟೆ, ಅನಂತಪುರ, ಸುಳ್ಯ, ಮಡಿಕೇರಿ, ಮೈಸೂರಿನಲ್ಲಿ ನಡೆಸಲಾಗಿತ್ತು. ಈ ಸಿನಿಮಾದ ಕೊನೆಯ ಕೋರ್ಟ್ ಸೀನ್ ಅನ್ನು ಕೇವಲ ಸಿಂಗಲ್ ಶಾಟ್ ನಲ್ಲಿ ತೆಗೆಯಲಾಗಿತ್ತು. ಈ ಸೀನ್‌ನಲ್ಲಿನ ಅಭಿನಯಕ್ಕೆ ಅನಂತ್ ನಾಗ್ ಅವರನ್ನು ಜನರು ಮೆಚ್ಚಿಕೊಂಡಿದ್ದಾರೆ. ಹಿನ್ನಲೆ ಹಾಡುಗಳನ್ನು ಅಜನೀಶ್ ಲೋಕನಾಥ್ ಅವರು ನಿರ್ದೇಶಿಸಿದರೆ ಮುಖ್ಯ ಹಾಡುಗಳನ್ನು ವಾಸುಕಿ ವೈಭವ್ ಅವರು ನಿರ್ದೆಶಿಸಿದ್ದಾರೆ.

Sarkari Hiriya Prathamika Shale Kasaragod Movie celebrates five years

Comments are closed.