ಭಾರತದ ದಂತಕತೆ, ಗಾನ ಕೋಗಿಲೆ ಲತಾ ಮಂಗೇಶ್ಕರ್ ನಿಧನಕ್ಕೆ ಸಂಪೂರ್ಣ ಭಾರತವೇ ಕಂಬನಿ ಮಿಡಿದಿದೆ. ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಅಂತಿಮ ದರ್ಶನವನ್ನು ಪಡೆದುಕೊಳ್ಳಲು ಸಾಕಷ್ಟು ಸೆಲೆಬ್ರಿಟಿಗಳು ಆಗಮಿಸಿದ್ದರು. ಬಾಲಿವುಡ್ ನಟ ಶಾರೂಕ್ ಖಾನ್ ಕೂಡ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದು ನೆಚ್ಚಿನ ಗಾಯಕಿಗೆ ಶಾರೂಕ್ ಖಾನ್ (Shah Rukh Khan) ಅಂತಿಮ ವಿದಾಯ ಅರ್ಪಿಸಿದ ದೃಶ್ಯಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮುಂಬೈನ ಶಿವಾಜಿ ಪಾರ್ಕ್ನ ಅಂತ್ಯಕ್ರಿಯೆ ನಡೆಯುವ ಸ್ಥಳದಲ್ಲಿ ಹಾಜರಿದ್ದ ಶಾರೂಕ್ ಖಾನ್ ಲತಾ ಮಂಗೇಶ್ಕರ್ರ ಪಾರ್ಥಿವ ಶರೀರಕ್ಕೆ ಮುಸ್ಲಿಂ ಮಾದರಿಯಲ್ಲಿ ದುವಾ ಮಾಡಿದ್ದರೆ ಅವರ ಮ್ಯಾನೇಜರ್ ಪೂಜಾ ದದ್ಲಾನಿ ಹಿಂದೂ ಸಂಪ್ರದಾಯದಂತೆ ನಮಸ್ಕಾರ ಮಾಡಿದ್ದಾರೆ. ಇವರಿಬ್ಬರೂ ಜೊತೆಯಾಗಿ ಮುಸ್ಲಿಂ ಹಾಗೂ ಹಿಂದೂ ಮಾದರಿಯಲ್ಲಿ ಲತಾ ಮಂಗೇಶ್ಕರ್ ಪಾರ್ಥಿವ ಶರೀರಕ್ಕೆ ನಮಸ್ಕರಿಸುತ್ತಿರುವ ಫೋಟೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಫೋಟೋವನ್ನು ನೋಡಿದ ಅನೇಕರು ಇದು ವಿವಿಧತೆಯಲ್ಲಿ ಏಕತೆ ಎಂಬ ಭಾರತೀಯ ತತ್ವವನ್ನು ಸಾರುತ್ತಿರುವ ಫೋಟೋವಾಗಿದೆ ಎಂದು ಹಾಡಿ ಹೊಗಳಿದ್ದಾರೆ.
ಸೂಪರ್ ಸ್ಟಾರ್ ಶಾರೂಕ್ ಖಾನ್ರ ಈ ಸಭ್ಯ ನಡೆಗೆ ವಿದ್ಯಾರ್ಥಿಗಳಿಂದ ಹಿಡಿದು ರಾಜಕೀಯ ನಾಯಕರವರೆಗೂ ಎಲ್ಲರೂ ಭೇಷ್ ಅಂದಿದ್ದಾರೆ.
Ishwar Allah tere naam,⁰sabko sanmati de bhagwan
— Rana Safvi رعنا राना (@iamrana) February 6, 2022
🙌🙌🙌 pic.twitter.com/qIckax0T9x
ಆದರೆ ಇದರ ಜೊತೆಯಲ್ಲಿ ಶಾರೂಕ್ ಖಾನ್ ದುವಾ ಮಾಡುತ್ತಿರುವ ಈ ವಿಡಿಯೋವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿರುವ ಹರಿಯಾಣ ಬಿಜೆಪಿ ನಾಯಕ ಹೊಸದೊಂದು ವಿವಾದವನ್ನು ಎತ್ತಿ ಹಾಕಿದ್ದಾರೆ. ಹರಿಯಾಣ ಬಿಜೆಪಿ ಐಟಿ ಸೆಲ್ ಇನ್ಚಾರ್ಜ್ ಆಗಿರುವ ಅರುಣ್ ಯಾದವ್ ಶಾರೂಕ್ ಖಾನ್ ಲತಾ ಮಂಗೇಶ್ಕರ್ ಮೃತದೇಹಕ್ಕೆ ಉಗುಳಿದ್ದಾರೆ ಎಂದು ಹೇಳುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ.
एक दुआ हिंदुस्तानियत के नाम!#ShahRukhKhan pic.twitter.com/fe22YvdjCA
— Lalitesh Pati Tripathi (@LaliteshPati) February 7, 2022
क्या इसने थूका है ❓ pic.twitter.com/RZOa2NVM5I
— Arun Yadav (@beingarun28) February 6, 2022
ಟ್ವಿಟರ್ನಲ್ಲಿ ಅರುಣ್ ಯಾದವ್, ಶಾರೂಕ್ ಉಗುಳಿದರೇ..? ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನು ನೋಡಿದ ಬಲಪಂಥೀಯರು ಶಾರೂಕ್ ಖಾನ್ ವಿರುದ್ಧ ಆಕ್ರೋಶವನ್ನು ಹೊರ ಹಾಕಲು ಆರಂಭಿಸಿದ್ದಾರೆ. ‘
ಆದರೆ ಅರುಣ್ ಯಾದವ್ರ ಈ ಟ್ವೀಟ್ಗೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾದ ವಿರೋಧವು ವ್ಯಕ್ತವಾಗಿದೆ. ಮುಸ್ಲಿಂ ಸಂಪ್ರದಾಯಗಳಲ್ಲಿ ದುವಾ ಮಾಡಿದ ಬಳಿಕ ದುಷ್ಟ ಶಕ್ತಿಗಳನ್ನು ದೂರವಿಡಲು ಬಾಯಿಯಿಂದ ಗಾಳಿಯನ್ನು ಊದಲಾಗುತ್ತದೆ. ಇಂತಹ ಒಂದು ಸುಂದರ ಕ್ಷಣವನ್ನು ಕೆಡಿಸಿದ ಅರುಣ್ ಯಾದವ್ರನ್ನು ಬಹುತೇಕ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನು ಓದಿ : Covid Cases Drop : ಬರೋಬ್ಬರಿ 1 ತಿಂಗಳ ಬಳಿಕ ದೇಶದಲ್ಲಿ ದೈನಂದಿನ ಕೋವಿಡ್ ಪ್ರಕರಣದಲ್ಲಿ ಭಾರೀ ಇಳಿಕೆ
Shah Rukh Khan Offering ‘Dua’ For Lata Mangeshkar Makes Twitter Emotional