Yakshagana App: ಯಕ್ಷಗಾನಕ್ಕೊಂದು ಮೊಬೈಲ್ ಆ್ಯಪ್: 1500ಕ್ಕೂ ಹೆಚ್ಚು ಪ್ರಸಂಗಗಳು ಲಭ್ಯ

ಯಕ್ಷಗಾನ ಕರ್ನಾಟಕದ ಹೆಮ್ಮೆಯ ಕಲೆ. ನವರಸ, ಭಾಗವತಿಕೆ ,ಅಭಿನಯ ಹಾಗೂ ವಿಶಿಷ್ಟವಾದ ವೇಷಗಳಿಂದ ವಿಶ್ವದೆಲ್ಲೆಡೆ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಯಕ್ಷಗಾನವು ಹೊಂದಿದೆ. ಕರ್ನಾಟಕದ ಈ ಕಲೆ ಇಂದು ವಿದೇಶಗಳಲ್ಲೂ ತನ್ನ ಕಂಪನ್ನು ಪಸರಿಸಿದೆ. ಯಕ್ಷದಲ್ಲೂ, ಇಂದು ಹಲವಾರು ಬದಲಾವಣೆ ಉಂಟಾಗಿದೆ. ಆಧುನಿಕ ಹಾಗೂ ಪ್ರಸ್ತುತ ಸನ್ನಿವೇಶಕ್ಕೆ ಹೊಂದುವಂತೆಯೂ ಪ್ರಸಂಗಗಳನ್ನು ನೋಡಬಹುದು. ಬೆರಳ ತುದಿಯಲ್ಲಿ ಯಕ್ಷಗಾನ ಕಾರ್ಯಕ್ರಮ ನೋಡಲೆಂದೇ ಹೊಸದೊಂದು ಅಪ್ಲಿಕೇಶನ್ ( Yakshagana App) ನಿರ್ಮಿಸಲಾಗಿದೆ.

ಕೊರೊನಾ ಬಂದ ಮೇಲೆ ಯಕ್ಷಗಾನ ಬಯಲಾಟಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಹೀಗಾಗಿ ಯಕ್ಷಗಾನ ಅಭಿಮಾನಿಗಳು ಪ್ರಸಂಗ ನೋಡಲು, ಬಹುದೂರ ಸಾಗಬೇಕಾದ ಅನಿವಾರ್ಯತೆ ಎದುರಾಗಿದೆ. ಆದರೆ ಇನ್ನು ಮುಂದೆ ಅಂತಹ ತೊಂದರೆ, ಯಕ್ಷಗಾನ ಪ್ರೇಮಿಗಳು ಎದುರಿಸಬೇಕಿಲ್ಲ. ಯಾಕೆಂದರೆ,ಬೆರಳ ತುದಿಯಲ್ಲಿ ಯಕ್ಷಗಾನ ಕಾರ್ಯಕ್ರಮ ನೋಡಲೆಂದೇ ಹೊಸದೊಂದು ಅಪ್ಲಿಕೇಶನ್ ( Yakshagana App) ನಿರ್ಮಿಸಲಾಗಿದೆ.ಈ ಅಪ್ಲಿಕೇಶನ್ ಮೂಲಕ, ಕಲಾವಿದರು, ನಟರು, ಆಸಕ್ತರು ಅಭಿಮಾನಿಗಳು ತಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ನಲ್ಲಿ ಬೇಕಾದ ಪ್ರಸಂಗ ಡೌನ್ಲೋಡ್ ಮಾಡಿಕೊಂಡು ನೋಡಬಹುದು.


ಶಾಸ್ತ್ರೀಯ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಅದಕ್ಕೊಂದು ಆಧುನಿಕ ಸ್ಪರ್ಶ ನೀಡಿರುವುದು ಶ್ಲಾಘನೀಯ ಕ್ರಮ. ಈ ಅಪ್ಲಿಕೇಶನ್ ನಿರ್ಮಿಸಿದವರು ಲಕ್ಷ್ಮೀನಾರಾಯಣ ಭಟ್ಟ(ಲನಾ) . ಇವರು ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಹಾಗೂ ಹವ್ಯಾಸಿ ಕಲಾವಿದರು ಹೌದು. ಈಗಾಗಲೇ 5000ಕ್ಕೂ ಅಧಿಕ ಮಂದಿ ಆಪ್ ಡೌನ್ಲೋಡ್ ಮಾಡಿದ್ದು, ಪ್ರತಿನಿತ್ಯ ನೂರಕ್ಕೂ ಹೆಚ್ಚು ಪ್ರಸಂಗಗಳು ಡೌನ್ಲೋಡ್ ಆಗುತ್ತದೆ. ಸದ್ಯ ಇದರಲ್ಲಿ 1500ಕ್ಕೂ ಹೆಚ್ಚು ಪ್ರಸಂಗಗಳು ಲಭ್ಯವಿದೆ.


ಬೆಂಗಳೂರಿನ ಯಕ್ಷ ವಾಹಿನಿ ಸಂಸ್ಥೆ 2019ರಲ್ಲಿ ಯಕ್ಷಗಾನ ಡಿಜಿಟಲೀಕರಣ ಭಾಗವಾಗಿ ಪ್ರಸಂಗ ಪ್ರತಿ ಸಂಗ್ರಹ ಯೋಜನೆ ಜಾರಿಗೆ ತಂದಿತ್ತು. ಈ ಯೋಜನೆಯ ಸಾಂಘಿಕ ನೆಲೆಯಲ್ಲಿ ನಡೆಯುತ್ತಿದ್ದು, ಸ್ವಯಂ ಸೇವಕರ ಸಹಾಯದಿಂದ ಪ್ರಸಂಗ ಪ್ರತಿಗಳನ್ನು ಉಚಿತವಾಗಿ ಸಿಗುವಂತೆ ಮಾಡಲಾಗುತ್ತದೆ.


ಇದುವರೆಗೆ1500ಕ್ಕೂ ಹೆಚ್ಚು ಪ್ರತಿಗಳನ್ನು ಸಂಗ್ರಹಿಸಲಾಗಿದೆ. ಈ ಪಟ್ಟಿಗೆ ಇನ್ನೂ ಅನೇಕ ದುರ್ಲಭ, ಹಳೆಯ, ಜನಪ್ರಿಯ ಯಕ್ಷಗಾನ ಪ್ರಸಂಗಗಳನ್ನು ಸೇರಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಪ್ರಮುಖವಾದುದು. ಅಷ್ಟೇ ಅಲ್ಲದೆ, ಈ ಕೊರೊನ ಸಮಯದಲ್ಲಿ ಮನೆಯಲ್ಲಿ ಕುಳಿತು ವೀಕ್ಷಿಸಲು ಸಹ ಈ ಅಪ್ಲಿಕೇಶನ್ ಮೂಲಕ ಸಾಧ್ಯವಿದೆ.ತಂಡವು ವಾರಾಂತ್ಯದಲ್ಲಿ ನಶಿಸುತ್ತಿರುವ ಕಮ್ಮಟಗಳನ್ನು ಸ್ಕಾನಿಂಗ್ ಮೂಲಕ ಪ್ರತಿಗಳನ್ನು ಸೇರಿಸುವ ಕಾರ್ಯದಲ್ಲಿ ತೊಡಗಿದೆ.

ಇದನ್ನೂ ಓದಿ: Hijab Explainer: ಹಿಜಾಬ್ ಎಂದರೇನು? ಬುರ್ಖಾ, ನಿಕಾಬ್‌ಗೂ ಹಿಜಾಬ್‌ಗೂ ಇರುವ ವ್ಯತ್ಯಾಸವೇನು?

(Yakshagana App 1500 more prasanga are available)

Comments are closed.