ಮುಂಬೈ : ಕ್ರೂಸ್‌ನಲ್ಲಿ ಡ್ರಗ್ಸ್ ಪಾರ್ಟಿಯಲ್ಲಿ ಪಾಲ್ಗೊಂಡ ಆರೋಪದ ಹಿನ್ನೆಲೆಯಲ್ಲಿ ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಜೈಲು ಸೇರಿದ್ದಾನೆ. ಈ ಹಿನ್ನೆಲೆಯಲ್ಲಿಂದು ಶಾರೂಖ್ ಖಾನ್ ತನ್ನ ಮಗನ ಭೇಟಿಗಾಗಿ ಅರ್ಥರ್ ರೋಡ್ ಜೈಲಿಗೆ ಭೇಟಿ ನೀಡಿದ್ದಾರೆ. ಇದರ ಬೆನ್ನಲ್ಲೇ ಎನ್‌ಸಿಬಿ ಅಧಿಕಾರಿಗಳು ಶಾರೂಖ್ ಖಾನ್ ಮನೆಯ ಮೇಲೆ ದಾಳಿ ನಡೆಸಿದ್ದಾರೆ.
ಸಮುದ್ರದಲ್ಲಿ ನಡೆದ ಡ್ರಗ್ಸ್ ಪಾರ್ಟಿಯ ಹೊತ್ತಲ್ಲಿ ಬಂಧನಕ್ಕೆ ಒಳಗಾಗಿರುವ ಆರ್ಯನ್ ಖಾನ್‌ಗೆ ಜಾಮೀನು ನೀಡಲು ಮುಂಬೈನ ವಿಶೇಷ ನ್ಯಾಯಾಲಯ ನಿರಾಕರಿಸಿದೆ. ಈ ಹಿನ್ನೆಲೆಯಲ್ಲೀಗ ಆರ್ಯನ್ ಪರ ವಕೀಲರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಇಂದು ಶಾರೂಖ್ ತನ್ನ ಪುತ್ರನನ್ನು ಭೇಟಿಯಾಗಿದ್ದರು.

ಅತ್ತ ಶಾರೂಖ್ ಖಾನ್ ಮನೆಯಿಂದ ತೆರಳುತ್ತಿದ್ದಂತೆಯೇ ಇತ್ತ ಮುಂಬೈನ ಬಾಂದ್ರಾದಲ್ಲಿರುವ ಶಾರೂಖ್ ಖಾನ್ ಮನೆಯಲ್ಲಿ ಅಧಿಕಾರಿಗಳು ಶೋಧ ಕಾರ್ಯವನ್ನು ನಡೆಸಿದ್ದಾರೆ. ಆರ್ಯನ್ ಖಾನ್ ವಿಚಾರಣೆಯ ವೇಳೆಯಲ್ಲಿ ಸಿಕ್ಕಿರುವ ಡಿಜಿಟಲ್ ಸಾಕ್ಷ್ಯಗಳ ಆಧಾರದ ಹಿನ್ನೆಲೆಯಲ್ಲಿ ಈ ದಾಳಿಯನ್ನು ನಡೆಸಲಾಗಿದೆ ಎನ್ನಲಾಗುತ್ತಿದೆ.

ಎನ್‌ಸಿಬಿ ಪರ ವಕೀಲರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಯಾವುದೇ ಕಾರಣಕ್ಕೂ ಆರ್ಯನ್ ಸೇರಿದಂತೆ ಡ್ರಗ್ಸ್ ಪಾರ್ಟಿಯಲ್ಲಿ ಬಂಧಿತರಾಗಿರುವ ಆರೋಪಿಗಳಿಗೆ ಜಾಮೀನು ನೀಡದಂತೆ ನ್ಯಾಯಾಲಯದಲ್ಲಿ ಒತ್ತಾಯಿಸಿದ್ದಾರೆ. ಇನ್ನೊಂದೆಡೆಯಲ್ಲಿ ಪ್ರಕರಣದ ತನಿಖೆಯನ್ನ ಚುರುಕುಗೊಳಿಸಿದ್ದಾರೆ.
ಇದನ್ನೂ ಓದಿ : ಆರ್ಯನ್ ಖಾನ್ ನಿಂದ ತಂದೆಯ ಜಾಹೀರಾತಿಗೆ ಕತ್ತರಿ : ಶಾರುಖ್ ಖಾನ್ ನಟಿಸಿರುವ ಜಾಹೀರಾತು ನಿಲ್ಲಿಸಿದ BYJU’s
ಇದನ್ನೂ ಓದಿ : ಬಡವರಿಗಾಗಿ ಕೆಲಸ ಮಾಡುವೆ, ತಪ್ಪು ಮಾರ್ಗ ತ್ಯೆಜಿಸುವೆ ಎಂದ ಆರ್ಯನ್ ಖಾನ್
Mumbai | A team of Narcotics Control Bureau (NCB) is currently present at actor Shah Rukh Khan’s residence ‘Mannat’
— ANI (@ANI) October 21, 2021
Earlier today, Shah Rukh Khan met son Aryan at Arthur Road Jail
Bombay High Court to hear Aryan Khan’s bail application on 26th October pic.twitter.com/SyzoWVi9UL
( NCB conducts raid at Shah Rukh Khan’s Mumbai house after his meeting with Aryan Khan )