Lokayukta ಇನ್ಸ್‌ಪೆಕ್ಟರ್‌ ಮಹಮ್ಮದ್ ರಫಿಕ್ ಹೃದಯಾಘಾತ ದಿಂದ ಸಾವು

ಬೆಂಗಳೂರು : ದಕ್ಷ ಪೊಲೀಸ್‌ ಅಧಿಕಾರಿಯಾಗಿ, ಸಾಮಾಜಿಕ ಸೇವೆಯಿಂದಲೇ ಜನ ಮೆಚ್ಚುಗೆ ಗಳಿಸಿದ್ದ ಲೋಕಾಯುಕ್ತ ಇನ್ಸ್‌ಪೆಕ್ಟರ್‌ ಮಹಮ್ಮದ್‌ ರಫೀಕ್‌ ಹೃದಯಾಘಾತ ದಿಂದ ಸಾವನ್ನಪ್ಪಿದ್ದಾರೆ.

ಇಂದು ಬೆಳಗ್ಗೆ ಸ್ನಾನಕ್ಕೆ ತೆರಳಿದ್ದ ವೇಳೆಯಲ್ಲಿ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಕೂಡಲೇ ವೈದ್ಯರನ್ನು ಮನೆಗೆ ಕರೆಯಿಸಿದ್ದಾರೆ. ಆದರೆ ವೈದ್ಯರು ಬರುವ ಹೊತ್ತಿಗಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಭೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಭೀಮಾ ಎಂದು ಹೆಸರಿಟ್ಟು ಒಂದು ಹಸುವಿನ ಕರುವನ್ನು ಸಾಕಿದ್ದರು. ಇದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಪೊಲೀಸ್ ಇಲಾಖೆಯಲ್ಲಿ ಉತ್ತಮ ಹೆಸರು ಮಾಡಿದ್ರು. ಸಮಾಜ ಸೇವೆಯಲ್ಲಿ ಯಾವಾಗಲೂ ತೊಡಗಿಕೊಂಡಿದ್ದರು. ಬೆಂಗಳೂರು ನಗರದ ಭೈಯಪ್ಪನಹಳ್ಳಿ ಠಾಣೆ, ಸಿಇಎನ್, ಲೋಕಾಯುಕ್ತ ಸೇರಿದಂತೆ ವಿವಿಧ ಠಾಣೆಗಳಲ್ಲಿ ಮಹಮ್ಮದ್ ರಫಿಕ್ ಕರ್ತವ್ಯ ನಿರ್ವಹಿಸಿದ್ದಾರೆ.

ಇದನ್ನೂ ಓದಿ : ಬೆಂಗಳೂರು ಮಕ್ಕಳ ನಾಪತ್ತೆ ಪ್ರಕರಣ ಸುಖಾಂತ್ಯ : ಮಕ್ಕಳಿಗಿತ್ತು My Craft ಗೇಮ್ ಗೀಳು !

ಇದನ್ನೂ ಓದಿ : ನಮ್ಮ ಮೆಟ್ರೋಗೆ ದಶಕದ ಸಂಭ್ರಮ : 60 ಕೋಟಿ ಜನರ ಪ್ರಯಾಣ, 1286.6 ಕೋಟಿ ರೂ. ಆದಾಯ

Lokayukta Inspector Mohammed Rafi Passed Away on Fortis Hospital Due To heart Attack

Comments are closed.