ಮಂಗಳವಾರ, ಏಪ್ರಿಲ್ 29, 2025
HomeCinemaShahid Kapoor : ಶಾಹಿದ್ ಸಹೋದರ ಸನಾ ಅದ್ದೂರಿ ಶಾದಿಗೆ ಸಾಕ್ಷಿಯಾದ ಬಾಲಿವುಡ್

Shahid Kapoor : ಶಾಹಿದ್ ಸಹೋದರ ಸನಾ ಅದ್ದೂರಿ ಶಾದಿಗೆ ಸಾಕ್ಷಿಯಾದ ಬಾಲಿವುಡ್

- Advertisement -

ಬಾಲಿವುಡ್ ನ ಕ್ಯೂಟ್ ನಟ ಶಾಹಿದ್ ಕಪೂರ್ ಮನೆಯಲ್ಲಿ ಶೆಹನಾಯಿ ಸದ್ದು ಮೊಳಗಿದೆ. ಸದ್ದುಗದ್ದಲವಿಲ್ಲದೇ ಶಾಹಿದ್ ಕಪೂರ್ ಎರಡನೇ ಮದುವೆಯಾದ್ರಾ ಅಂದ್ಕೋಬೇಡಿ. ಶಾಹಿದ್ ಕಪೂರ್ ಮನೆಯಲ್ಲಿ‌ ಮೆಹೆಂದಿಯಿಂದ ಕೈಕೆಂಪಾಗಿಸಿಕೊಂಡಿರೋದು ಶಾಹಿದ್ ಕಪೂರ್ (Shahid Kapoor) ಸಹೋದರಿ ಸನಾ ಕಪೂರ್ (Sanah Kapur). ಶಾಹಿದ್ ಕಪೂರ್ ಸಹೋದರಿ ಸನಾ ಕಪೂರ್ ಮದುವೆ ಮಹಾಬಲೇಶ್ವರದಲ್ಲಿ ನಡೆಯಲಿದ್ದು, ಈಗಾಗಲೇ ಮೆಹೆಂದಿ ಸಂಪ್ರದಾಯ ಅದ್ದೂರಿಯಾಗಿ ನಡೆದಿದ್ದು, ಸುಂದರ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪಂಕಜ್ ಕಪೂರ್ ಮತ್ತು ಸುಪ್ರೀಯಾ ಪಾಠಕ್ ಪುತ್ರಿ ಸನಾ ಕಪೂರ್ ಮದುವೆ ಸೀಮಾ ಮತ್ತು ಮನೋಜ್ ಪಹ್ವಾ ಪುತ್ರ ಮಯಾಂಕ್ ಜೊತೆ ವಿಜೃಂಭಣೆಯಿಂದ ನಡೆಯಲಿದ್ದು, ಮದುವೆಯಲ್ಲಿ ಕೇವಲ ಅಪ್ತರು,ಕುಟುಂಬ ವರ್ಗ ಹಾಗೂ ಸಂಬಂಧಿಗಳು ಮಾತ್ರ ಪಾಲ್ಗೊಳ್ಳಲಿದ್ದಾರೆ. ಕಪೂರ್ ಮತ್ತು ಪಹ್ವಾ ಕುಟುಂಬ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದು, ಕೆಲ ತಿಂಗಳ ಹಿಂದೆಯಷ್ಟೇ ಸನಾ ಹಾಗೂ ಮಯಾಂಕ್ ನಿಶ್ಚಿತಾರ್ಥ ಕೂಡಾ ಖಾಸಗಿಯಾಗಿ‌ ನಡೆದಿತ್ತು.

ಮಾಡೆಲಿಂಗ್ ನಲ್ಲಿ ಗುರುತಿಸಿಕೊಂಡಿರೋ ಸನಾ ಕಪೂರ್ (Sanah Kapur) ಬಾಲಿವುಡ್ ನಲ್ಲೂ ಬಣ್ಣ ಹಚ್ಚಿದ್ದಾರೆ. ಸನಾ ಕಪೂರ್ ಶಾಹೀದ್ ಕಪೂರ್ ಹಾಗೂ ಆಲಿಯಾ ಭಟ್ ನಟನೆಯ ಶಾಂದಾರ್ ಸಿನಿಮಾದಲ್ಲೂ ನಟಿಸಿದ್ದರು. ಎಲ್ಲರೂ ಅಂದುಕೊಂಡಿರುವಂತೆ ಶಾಹಿದ್ ಕಪೂರ್ (Shahid Kapoor) ಹಾಗೂ ಸನಾ ಕಪೂರ್ ಸ್ವಂತ ಅಣ್ಣ ತಂಗಿಯರಲ್ಲ. ಶಾಹಿದ್ ಕಪೂರ್ ಮತ್ತು ಸನಾ ಕಪೂರ್ ತಂದೆ ಪಂಕಜ್ ಕಪೂರ್ ಆದರೆ ತಾಯಂದಿರು ಬೇರೆ ಬೇರೆ.

1979 ರಲ್ಲಿ ನಟಿ ನೀಲಿಮಾ ಅಜಿಮಾ ಅವರನ್ನು ಪಂಕಜ್ ಕಪೂರ್ ವಿವಾಹವಾಗಿದ್ದರು. ಈ ದಂಪತಿಗಳ ಪುತ್ರನೇ ನಟ ಶಾಹಿದ್ ಕಪೂರ್. ಶಾಹಿದ್ ಕಪೂರ್ ಜನಿಸಿದ ಮೂರು ವರ್ಷಗಳ ಬಳಿಕ ಪಂಕಜ್ ಹಾಗೂ ನೀಲಿಮಾ ವಿಚ್ಚೇಧನ ಪಡೆದಿದ್ದರು‌. ಬಳಿಕ ಶಾಹಿದ್ ಕಪೂರ್ ತಂದೆ 1988 ರಲ್ಲಿ ಸುಪ್ರೀಯಾರನ್ನು ವಿವಾಹವಾದರು. ಈ ದಂಪತಿಗೆ ಸನಾ ಹಾಗೂ ರುಮಾನಾ ಕಪೂರ್ ಎಂಬ ಇಬ್ಬರೂ ಹೆಣ್ಣು ‌ಮಕ್ಕಳಿದ್ದಾರೆ.

ಶಾಹಿದ್ ಕಪೂರ್ ತಮ್ಮ ಇಬ್ಬರೂ ಸಹೋದರಿಯರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದು, ಸಿನಿಮಾ ಕೆರಿಯರ್ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಶಾಹಿದ್ ಸಹೋದರಿಯರ ಜೊತೆ ಚರ್ಚೆ ಮಾಡುತ್ತಾರಂತೆ. ಈ ವಿಚಾರವನ್ನು ಸ್ವತಃ ಶಾಹಿದ್ ಹಲವು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಮಾತ್ರವಲ್ಲ ಶಾಹಿದ್ ಮಲತಾಯಿ ಕೂಡ ಶಾಹಿದ್ ಬಗ್ಗೆ ಮೆಚ್ಚುಗೆ ಯ ಮಾತುಗಳನ್ನಾಡಿದ್ದಾರೆ.

ಇದನ್ನೂ ಓದಿ : ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಅಮೂಲ್ಯ; ಫೇಸ್ಬುಕ್ ಮೂಲಕ ಖುಷಿ ಹಂಚಿದ ಪತಿ ಜಗದೀಶ್ ಆರ್ ಚಂದ್ರ

ಇದನ್ನೂ ಓದಿ : ‘ಕಚ್ಚಾ ಬದಾಮ್’ ಗಾಯಕ ಭುವನ್‌ ಬಡ್ಯಾಕರ್‌ಗೆ ಕಾರು ಅಪಘಾತ, ಆಸ್ಪತ್ರೆಗೆ ದಾಖಲು

(Shahid Kapoor sister Sanah Kapur and Mayank Pahwa to tie the knot today. First pic, video)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular