ಬೆಂಗಳೂರು: Shivamma movie: ಒಂದೆಡೆ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಎಲ್ಲೆಡೆ ಅಬ್ಬರಿಸುತ್ತಿದ್ದರೆ ಮತ್ತೊಂದೆಡೆ ರಿಷಬ್ ಶೆಟ್ಟಿ ನಿರ್ಮಾಣದ ಸಿನಿಮಾ ಶಿವಮ್ಮ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೌಂಡ್ ಮಾಡುತ್ತಿದೆ. ವಿದೇಶದಲ್ಲಿ ಸಾಲು ಸಾಲು ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿರುವ ಈ ಸಿನಿಮಾ ಇದೀಗ ಫ್ರಾನ್ಸ್ ಪ್ರಶಸ್ತಿಯನ್ನೂ ಬಾಚಿಕೊಂಡಿದೆ.
ರಿಷಬ್ ಶೆಟ್ಟಿ ನಿರ್ಮಾಣದಲ್ಲಿ ಮೂಡಿಬಂದ ಶಿವಮ್ಮ ಸಿನಿಮಾಗೆ ಈಗಾಗಲೇ ಸಾಕಷ್ಟು ಪ್ರಶಸ್ತಿಗಳು ಲಭಿಸಿವೆ. ಇದೀಗ ಫ್ರಾನ್ಸ್ ನ ನಾಂಟೆಸ್ ನಲ್ಲಿ ನಡೆದ ಫೆಸ್ಟಿವಲ್ 3 ಕಾಂಟಿನೆಂಟ್ ನಲ್ಲಿ ಯುವ ತೀರ್ಪುಗಾರರ ಅವಾರ್ಡ್ ಪಡೆದುಕೊಂಡಿದೆ. ಜೈ ಶಂಕರ್ ಆರ್ಯರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಅಂದಹಾಗೆ ಜೈ ಶಂಕರ್ ಅವರಿಗೆ ಶಿವಮ್ಮ ಚೊಚ್ಚಲ ಚಿತ್ರವಾಗಿದೆ.
ಇದನ್ನೂ ಓದಿ: Kuldeep Sen life story : ಕ್ಷೌರಿಕನ ಮಗ ಭಾರತ ಪರ ಏಕದಿನ ಕ್ರಿಕೆಟ್ ಆಡಿದ ರೋಚಕ ಕಥೆ
ಶಿವಮ್ಮ ಸಿನಿಮಾ ಈ ಮೊದಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಎನ್‍ಎಫ್ ಡಿಸಿ ಆಯೋಜಿತ ಫಿಲಂ ಬಜಾರ್ ನ ವರ್ಕ್ ಇನ್ ಪ್ರೊಗ್ರೆಸ್ ನಲ್ಲಿ ಗೆದ್ದು, ಬಳಿಕ 27ನೇ ಬೂಸಾನ್ ಚಲನಚಿತ್ರೋತ್ಸವದಲ್ಲಿ ಮೊದಲ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಏಷ್ಯಾದ ಅತಿದೊಡ್ಡ ಫಿಲಂ ಉತ್ಸವ ಇದಾಗಿದ್ದು, ಇದರಲ್ಲಿ ಒಟ್ಟು 10 ಸಿನಿಮಾಗಳು ಉನ್ನತ ಪ್ರೊಫೈಲ್ ನ್ಯೂ ಕರೆಂಟ್ಸ್ ಪ್ರಶಸ್ತಿಗಾಗಿ ಸ್ಪರ್ಧಿಸಿದ್ದವು. ಇದೀಗ ಫ್ರಾನ್ಸ್ ನ ನಾಂಟೆಸ್ ನಲ್ಲಿ ನಡೆದ ಫೆಸ್ಟಿವಲ್ 3 ಕಾಂಟಿನೆಂಟ್ಸ್ ನಲ್ಲಿ ‘ಯುವ ತೀರ್ಪುಗಾರರ ಅವಾರ್ಡ್’ ಪಡೆದುಕೊಂಡಿದೆ. ರಿಷಬ್ ಶೆಟ್ಟಿ ನಿರ್ಮಾಣದ ಪೆಡ್ರೋ ಸಿನಿಮಾ ಕೂಡಾ ಹಿಂದಿನ ವರ್ಷ ಈ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿತ್ತು.
ಬೂಸಾನ್ ಚಿತ್ರೋತ್ಸವದ ಪ್ರತಿಷ್ಠಿತ "ನ್ಯೂ ಕರೆಂಟ್ಸ್" ಪ್ರಶಸ್ತಿಯ ನಂತರ ಇದೀಗ #Shivamma ಚಲನಚಿತ್ರ ಯುರೋಪಿನ ಪ್ರತಿಷ್ಠಿತ @F3Continents ನ 44ನೇ ಆವೃತ್ತಿಯಲ್ಲಿ 'Young jury award' ಪ್ರಶಸ್ತಿ ಮುಡಿಗೆರಿಸಿಕೊಂಡಿರುವ ವಿಷಯ ತಿಳಿಸಲು ಹರ್ಷಿಸುತ್ತೇವೆ. @jaishnkr15 ಹಾಗೂ ಚಿತ್ರ ತಂಡಕ್ಕೆ ಅಭಿನಂದನೆಗಳು. #Rishabshettyfilms pic.twitter.com/9RRLWWzK1c
— Rishab Shetty (@shetty_rishab) November 29, 2022
ಸರ್ಕಾರಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡುವ 46 ವರ್ಷದ ಶಿವಮ್ಮ ಎಂಬ ಮಹಿಳೆ ತನ್ನ ಪಾಶ್ರ್ವವಾಯು ಪತಿಯನ್ನು ಸಾಕಿಕೊಂಡು, ತನ್ನ ಮಕ್ಕಳ ಭವಿಷ್ಯಕ್ಕಾಗಿ ನೆಟ್ವರ್ಕ್ ಮಾರ್ಕೆಟಿಂಗ್ ವ್ಯಾಪಾರವನ್ನು ಭರವಸೆಯಿಂದ ಪಾಲಿಸುವ ಹೋರಾಟದ ಕಥೆಯೇ ಶಿವಮ್ಮ. ಈ ಸಿನಿಮಾದ ಚಿತ್ರೀಕರಣವನ್ನು ಕೊಪ್ಪಳ ಜಿಲ್ಲೆಯ ಕುಕ್ನೂರು ತಾಲೂಕಿನ ಯರೇಹಂಚಿನಾಳ ಗ್ರಾಮದಲ್ಲಿ ಮಾಡಲಾಗಿದೆ. ನಿರ್ದೇಶಕರು ಅದೇ ಊರಿನವರನ್ನೇ ತೆಗೆದುಕೊಂಡು ಶಿವಮ್ಮ ಸಿನಿಮಾ ಮಾಡುವ ಹೊಸ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಚಿತ್ರದಲ್ಲಿ ಎಲ್ಲರದ್ದೂ ಹೊಸಮುಖಗಳೇ ಆಗಿದ್ದು ತಮ್ಮ ಮೊದಲ ಪ್ರಯತ್ನದಲ್ಲೇ ಜೈಶಂಕರ್ ಯಶಸ್ಸು ಕಂಡಿದ್ದಾರೆ. ಶರಣಮ್ಮ ಹಟ್ಟಿ, ಚೆನ್ನಮ್ಮ ಅಬ್ಬಿಗೆರೆ, ಶಿವು ಅಬ್ಬಿಗೆರೆ, ಶ್ರುತಿ ಕೊಂಡೇನಹಳ್ಳಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: KL Rahul : ಕೆ.ಎಲ್ ರಾಹುಲ್ 5ನೇ ಕ್ರಮಾಂಕಕ್ಕೆ ಬೆಸ್ಟ್ ಪ್ಲೇಯರ್.. ಯಾಕೆ ಗೊತ್ತಾ..? ಇಲ್ಲಿದೆ ಉತ್ತರ
Shivamma movie: Rishabh Shetty’s film ‘Shivamma’ won international awards